HOME » NEWS » Entertainment » RAJAMOULIS FATHER VIJAYENDRA PRASAD CAME FROM HYDERABAD TO WISH AGNIPRAVA TEAM HTV AE

ಅಗ್ನಿಪ್ರವಕ್ಕೆ ಬಾಹುಬಲಿ ಕಥೆಗಾರನ ಬಲ: ಶಿಷ್ಯನಿಗಾಗಿ ಹೈದರಾಬಾದಿನಿಂದ ಬಂದ್ರು ವಿಜಯೇಂದ್ರ ಪ್ರಸಾದ್‌

Agniprava: ನವರತ್ನ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಅಗ್ನಿಪ್ರವ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಣದ ಜೊತೆಗೆ ವರ್ಷಾ ತಮ್ಮಯ್ಯ ಅವರೇ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಈಗಾಗಲೇ ತೆಲುಗಿನ ಐದು ಸಿನಿಮಾಗಳಲ್ಲಿ ನಟಿಸಿರುವ ವರ್ಷಾ, ಅಗ್ನಿಪ್ರವ ಮೂಲಕ ಸ್ಯಾಂಡಲ್‌ವುಡ್‌ ಡೆಬ್ಯೂ ಮಾಡುತ್ತಿದ್ದಾರೆ. 

news18-kannada
Updated:November 26, 2020, 11:08 AM IST
ಅಗ್ನಿಪ್ರವಕ್ಕೆ ಬಾಹುಬಲಿ ಕಥೆಗಾರನ ಬಲ: ಶಿಷ್ಯನಿಗಾಗಿ ಹೈದರಾಬಾದಿನಿಂದ ಬಂದ್ರು ವಿಜಯೇಂದ್ರ ಪ್ರಸಾದ್‌
ವರ್ಷಾ ತಮ್ಮಯ್ಯ ಹಾಗೂ ವಿಜಯೇಂದ್ರ ಪ್ರಸಾದ್​
  • Share this:
ಬಾಹುಬಲಿ ಸಿನಿಮಾ ಖ್ಯಾತಿಯ ಕಥೆಗಾರ, ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌. ಅಂತಹ ಹಿರಿಯರ ಜತೆ ಹಲವು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಹೆಗ್ಗಳಿಕೆ ನಿರ್ದೇಶಕ ಸುರೇಶ್‌ ಆರ್ಯ ಅವರಿಗೆ ಸಲ್ಲುತ್ತದೆ. ಆದರೆ ಸುರೇಶ್‌ ಕನ್ನಡ ಪ್ರೇಮ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತಂದಿದೆ. ಕನ್ನಡ ಸಿನಿಮಾ ಮೂಲಕವೇ ಡೈರೆಕ್ಟರ್‌ ಕ್ಯಾಪ್‌ ಧರಿಸಲು ಸುರೇಶ್‌ ಆರ್ಯ ಮುಂದಾಗಿದ್ದಾರೆ. ಸಿನಿಮಾ ಹೆಸರು ಅಗ್ನಿಪ್ರವ. ಇತ್ತೀಚೆಗಷ್ಟೇ ಅಗ್ನಿಪ್ರವ ಮುಹೂರ್ತ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆಯಿತು. ವಿಶೇಷ ಅಂದರೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ ದೂರದ ಹೈದರಾಬಾದ್‌ನಿಂದ ನೆಚ್ಚಿನ ಶಿಷ್ಯನಿಗೆ ಶುಭಹಾರೈಸಲು ಬೆಂಗಳೂರಿಗೆ ಬಂದಿದ್ದರು. ಕ್ಯಾಮರಾಕ್ಕೆ ಚಾಲನೆ ನೀಡಿ ಸುರೇಶ್‌ ಆರ್ಯ ಹಾಗೂ ಇಡಿ ಅಗ್ನಿಪ್ರವ ತಂಡಕ್ಕೆ ಬಲ ತುಂಬಿದರು. 

ನವರತ್ನ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಅಗ್ನಿಪ್ರವ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಣದ ಜೊತೆಗೆ ವರ್ಷಾ ತಮ್ಮಯ್ಯ ಅವರೇ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಈಗಾಗಲೇ ತೆಲುಗಿನ ಐದು ಸಿನಿಮಾಗಳಲ್ಲಿ ನಟಿಸಿರುವ ವರ್ಷಾ, ಅಗ್ನಿಪ್ರವ ಮೂಲಕ ಸ್ಯಾಂಡಲ್‌ವುಡ್‌ ಡೆಬ್ಯೂ ಮಾಡುತ್ತಿದ್ದಾರೆ.

Agniprava movie, Suresh Acharya, Vijayendra prasad, Varsha thimmayya, Rajamoulis father Vijayendra Prasad came from Hyderabad to wish Agniprava team
ಅಗ್ನಿಪ್ರವ ಚಿತ್ರದ ಮುಹೂರ್ತ ಕಾರ್ಯಕ್ರಮ


ʻಕಥೆ ಕೇಳಿದಾಗಲೇ ನನಗೆ ಒಂದು ಕುತೂಹಲವಿತ್ತು. ಸೊಗಸಾದ ಕಥೆ ಮಾಡಿಕೊಂಡಿದ್ದಾರೆ ಸುರೇಶ್‌. ಸ್ಟೋರಿಲೈನ್‌ ಕೇಳಿ ನನಗೇ ಆಶ್ಚರ್ಯವಾಯಿತು. ತಂಡಕ್ಕೆ ಒಳ್ಳೆಯದಾಗಲಿʼ ಎಂದು ಅಗ್ನಿಪ್ರವ ತಂಡಕ್ಕೆ ವಿಜಯೇಂದ್ರ ಪ್ರಸಾದ್‌ ಶುಭಕೋರಿದರು. 

ಇದನ್ನೂ ಓದಿ: Pogaru Release Date: ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸ್ ಡೇಟ್​ ಫಿಕ್ಸ್​: ಸಿನಿಪ್ರಿಯರ ಅಭಿಪ್ರಾಯ ಕೇಳಿದ ನಿರ್ದೇಶಕ..!

ಇನ್ನು, ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಸುರೇಶ್‌ ಆರ್ಯ, ಇದೊಂದು ಮಹಿಳಾಪ್ರಧಾನ ಸಿನಿಮಾ. ಅಗ್ನಿಪ್ರವ ಸಂಸ್ಕೃತ ಪದವಾಗಿದ್ದು ಕನ್ನಡದಲ್ಲಿ ಬೆಳಕು ಪ್ರವಹಿಸುವುದು ಎಂದು ಅದರ ಅರ್ಥ. ಇಡೀ ಸಿನಿಮಾ ನಾಯಕಿಯ ಸುತ್ತಲೇ ಸಾಗುವುದರಿಂದ ಕಮರ್ಷಿಯಲ್‌ ಅಂಶಗಳ ಜೊತೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್‌ ಅಂಶಗಳನ್ನೂ ಸೇರಿಸಿದ್ದೇವೆ. ಸಿನಿಮಾ ನೋಡುತ್ತಿದ್ದರೆ ನಾಯಕಿಯೇ ವಿಲನ್‌ ರೀತಿಯೂ ಕಾಣಿಸುತ್ತಾಳೆʼ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

Agniprava movie, Suresh Acharya, Vijayendra prasad, Varsha thimmayya, Rajamoulis father Vijayendra Prasad came from Hyderabad to wish Agniprava team
ವರ್ಷಾ ತಮ್ಮಯ್ಯ
ಅಗ್ನಿಪ್ರವಹ ಸಿನಿಮಾ ಮುಹೂರ್ತಕ್ಕೆ ಡಾ. ರಾಜ್‌ಕುಮಾರ್‌ ಅವರ ಹಿರಿಯ ಪುತ್ರಿ ಲಕ್ಷ್ಮಿ ಹಾಗೂ ಅವರ ಪತಿ ಗೋವಿಂದರಾಜ್‌ ಕೂಡ ಬಂದಿದ್ದರು. ಹಿರಿಯ ನಿರ್ದೇಶಕ ಜೋ ಸೈಮನ್‌ ಈ ಚಿತ್ರಕ್ಕೆ ಅಗ್ನಿಪ್ರವ ಎಂದು ಟೈಟಲ್‌ ನೀಡಿರುವುದು ವಿಶೇಷ. ಹಾಗೇ ಅವರ ಮಗ ಜಿತೇಂದ್ರ ಜೋಸೈಮನ್‌ ಅಗ್ನಿಪ್ರವ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿರುವುದು ಮತ್ತೊಂದು ಸ್ಪೆಷಾಲಿಟಿ. ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್‌ ಆಗಲಿದೆ.
Published by: Anitha E
First published: November 26, 2020, 11:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading