Lata Mangeshkar: `ಬಾಹುಬಲಿ’ ಸಿನಿಮಾಗೆ ಲತಾಜೀ ವಾಯ್ಸ್​ ಬಯಸಿದ್ದರಂತೆ ರಾಜಮೌಳಿ.. ಕನಸಾಗಿಯೇ ಉಳಿದುಹೋಯ್ತು!

‘ಬಾಹುಬಲಿ’ಯ ಹಿಂದಿ ಡಬ್ಬಿಂಗ್ ಸಂದರ್ಭದಲ್ಲಿ 'ಕಾನ್ಹಾ ಸೋಜಾ ಜರಾ' ಗೀತೆಯನ್ನು ಲತಾ ಅವರ ಕೈಯಿಂದಲೇ ಹಾಡಿಸಬೇಕೆಂಬ ಉತ್ಕಟವಾದ ಅಭಿಲಾಷೆ ರಾಜಮೌಳಿ ಹಾಗೂ ಕೀರವಾಣಿಗಿತ್ತು ಎನ್ನಲಾಗಿದೆ. ಆದರೆ, ವಯೋಸಹಜ ಕಾರಣಗಳಿಂದಾಗಿ ಲತಾ ಮಂಗೇಶ್ಕರ್ ಅವರಿಗೆ ಈ ಅವಕಾಶ ಸ್ವೀಕರಿಸಲು ಸಾಧ್ಯವಾಗಿರಲಿಲ್ಲವಂತೆ

ಲತಾ ಮಂಗೇಶ್ಕರ್​, ರಾಜಮೌಳಿ

ಲತಾ ಮಂಗೇಶ್ಕರ್​, ರಾಜಮೌಳಿ

  • Share this:
ಮೂರು ತಲೆ ಮಾರುಗಳಿಗೆ ತಮ್ಮ ಸುಮಧುರವಾದ ಕಂಠದ ಮೂಲಕ ಹಾಡು ಹೇಳಿ ರಂಜಿಸಿದ್ದ ಭಾರತ ಕಂಡ ಅಪ್ರತಿಮ ಗಾಯಕಿಯಾಗಿದ್ದ ಲತಾ ಮಂಗೇಶ್ಕರ್(Lata Mangeshkar) ಅವರು ಫೆಬ್ರವರಿ 6ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದರು. ಅವರನ್ನು ಕಳೆದುಕೊಂಡು ಸಂಪೂರ್ಣ ಚಿತ್ರರಂಗವೇ ದುಖಿಯಾಗಿದೆ. ಭಾರತದ ಕೋಗಿಲೆ, ಸ್ವರ ಕೋಗಿಲೆ ಎಂದೆಲ್ಲ ಬಿರುದುಗಳನ್ನು ಪಡೆದಿದ್ದ ಲತಾ ಮಂಗೇಶ್ಕರ್ ಅವರು ಗಾಯನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಏಳು ದಶಕಗಳ ಕಾಲ ತಮ್ಮ ವೃತ್ತಿಯಲ್ಲಿ ಕೆಲಸ ಮಾಡಿದ್ದ ಅವರು ಸುಮಾರು 36 ಭಾಷೆ(36 Language)ಗಳಲ್ಲಿ ಹಾಡಿದ್ದಾರೆಂದರೆ ಅವರ ಗಾಯನ ಪ್ರತಿಭೆ ಹೇಗಿತ್ತೆಂಬುದನ್ನು ತೋರಿಸಿಕೊಡುತ್ತದೆ. ಈ ಹಿಂದೆ ತೆರೆಕಂಡಿರುವ ಭಾರತದ ಅತ್ಯದ್ಭುತ ಚಿತ್ರಗಳಲ್ಲಿಒಂದಾಗಿ ಯಶಸ್ಸು ಗಳಿಸಿರುವ ‘ಬಾಹುಬಲಿ’(Baahubali) ಚಿತ್ರದ ಹಿಂದಿ(Hindi) ಅವತರಣಿಕೆಯ 'ಕಾನ್ಹಾ ಸೋಜಾ ಜರಾ' ಗೀತೆಗಾಗಿ ಲತಾ ಮಂಗೇಶ್ಕರ್ ಅವರಿಗೆ ಧ್ವನಿ ನೀಡಲು ಆಫರ್ ನೀಡಲಾಗಿತ್ತಂತೆ. ಅನುಷ್ಕಾ ಶೆಟ್ಟಿ(Anushka Shetty) ಅವರ ಮೇಲೆ ಚಿತ್ರೀಕರಿಸಲಾಗಿದ್ದ ಈ ಗೀತೆಯ ಸಂಗೀತ ಸಂಯೋಜನೆಯನ್ನು ಕೀರವಾಣಿ ಅವರು ಮಾಡಿದ್ದರು.

ಬಾಹುಬಲಿ ಸಿನಿಮಾಗೆ ಲತಾಜೀ ವಾಯ್ಸ್​ ಬಯಸ್ಸಿದ್ದರಂತೆ ರಾಜಮೌಳಿ!

ಹಿಂದೆ, ಲತಾ ದೀದಿ ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಹಿಂದಿಯ ಪ್ರತಿ ಚಿತ್ರಗಳನ್ನು ಮಾಡುವಾಗ ಎಲ್ಲ ಸಂಗೀತ ನಿರ್ದೇಶಕರ, ಚಿತ್ರ ನಿರ್ಮಾಪಕರು ಹಾಗೂ ಚಿತ್ರ ನಿರ್ದೇಶಕರ ಪ್ರಥಮ ಆಯ್ಕೆ ಲತಾ ಮಂಗೇಶ್ಕರ್ ಅವರೇ ಆಗಿದ್ದರು. ಅದೇ ರೀತಿ ‘ಬಾಹುಬಲಿ’ಯ ಹಿಂದಿ ಡಬ್ಬಿಂಗ್ ಸಂದರ್ಭದಲ್ಲಿ 'ಕಾನ್ಹಾ ಸೋಜಾ ಜರಾ' ಗೀತೆಯನ್ನು ಲತಾ ಅವರ ಕೈಯಿಂದಲೇ ಹಾಡಿಸಬೇಕೆಂಬ ಉತ್ಕಟವಾದ ಅಭಿಲಾಷೆ ರಾಜಮೌಳಿ ಹಾಗೂ ಕೀರವಾಣಿಗಿತ್ತು ಎನ್ನಲಾಗಿದೆ. ಆದರೆ, ವಯೋಸಹಜ ಕಾರಣಗಳಿಂದಾಗಿ ಲತಾ ಮಂಗೇಶ್ಕರ್ ಅವರಿಗೆ ಈ ಅವಕಾಶ ಸ್ವೀಕರಿಸಲು ಸಾಧ್ಯವಾಗಿರಲಿಲ್ಲವಂತೆ.

ಗಾನ ನಿಲ್ಲಿಸಿ ಬಾರದ ಲೋಕಕ್ಕೆ ತೆರಳಿದ ಗಾನಕೋಗಿಲೆ!

ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಲತಾ ಮಂಗೇಶ್ಕರ್ ಅವರು ನಿನ್ನೆ ನಿಧನರಾಗಿದ್ದರು. ಅವರ ಗೌರವಾರ್ಥವಾಗಿ ದೇಶದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ  ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಅದಕ್ಕೂ ಮುಂಚೆ ಅಭಿಮಾನಿಗಳು ತಮ್ಮ ಕೊನೆ ನಮನ ಸಲ್ಲಿಸಲು ಅವರ ಪಾರ್ಥೀವ ಶರೀರವನ್ನು ಇಡಲಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರು.

ಇದನ್ನೂ ಓದಿ: ವಜ್ರ-ಮುತ್ತುಗಳೆಂದರೆ ಲತಾಜೀಗೆ ಪಂಚಪ್ರಾಣ.. ಅವರ ಬಳಿ ಇದ್ದ ಒಡವೆಗಳೆಲ್ಲಾ ಏನಾಯ್ತು?

25 ಸಾವಿರಕ್ಕೂ ಹೆಚ್ಚು ಗೀತೆ ಹಾಡಿದ್ದ ಲತಾಜೀ!

ಚಿತ್ರರಂಗದ ಹಲವಾರು ಗಣ್ಯ ವ್ಯಕ್ತಿಗಳು ಲತಾ ಅವರ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದ್ದರು. ಪ್ರಧಾನಿ ಮೋದಿ ಅವರು ಸಹ ಈ ಸಂದರ್ಭದಲ್ಲಿ ಲತಾ ಅವರ ಕೊನೆಯ ದರ್ಶನ ಮಾಡಿ ನಮನ ಸಲ್ಲಿಸಿದ್ದರು. ಲತಾ ಅವರ ಸಾವು ಸಂಗೀತ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ವೃತ್ತಿಯಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಗೀತೆಗಳನ್ನು ಹಾಡಿದ್ದ ಲತಾ ಮಂಗೇಶ್ಕರ್ ಅವರ ಸಾಧನೆಯನ್ನು ಸರಿಗಟ್ಟುವುದು ಕಷ್ಟ ಸಾಧ್ಯ. ಈ ಪ್ರತಿಮ ಸಾಧನೆಗಾಗಿ, ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿತ್ತು.

ಇದನ್ನೂ ಓದಿ : ಲತಾ ಮಂಗೇಶ್ಕರ್ ರಾಜಮನೆತನದ ಓರ್ವನನ್ನ ಮದುವೆಯಾಗಲು ಒಪ್ಪಿದ್ದರಂತೆ: ಯಾಕೆ ಈ ವಿವಾಹ ನಡೆಯಲಿಲ್ಲ ಗೊತ್ತಾ?

ಅಷ್ಟೆ ಅಲ್ಲದೆ, ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಜೀವಮಾನದ ಸಾಧನೆಯನ್ನು ಪರಿಗಣಿಸಿ 2001ರಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಲತಾ ಮಂಗೇಶ್ಕರ್ ಅವರು ಹಿನ್ನೆಲೆ ಗಾಯನಕ್ಕಾಗಿ ಒಟ್ಟು ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 1972ರಲ್ಲಿ ತೆರೆಕಂಡಿದ್ದ ಪರಿಚಯ್, 1974ರಲ್ಲಿ ತೆರೆಕಂಡಿದ್ದ ಕೋರಾ ಕಾಗಜ್ ಹಾಗೂ 1990ರಲ್ಲಿ ತೆರೆಕಂಡಿದ್ದ ಲೇಕಿನ್.. ಚಿತ್ರಗಳಿಗಾಗಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿಯ ರಾಷ್ಟ್ರ ಪ್ರಶಸ್ತಿಗಳು ದೊರಕಿದ್ದವು.
Published by:Vasudeva M
First published: