Rajamouli: ರಾಜಮೌಳಿ ಅವರಿಗೆ ಇದೇ ಕಾರಣಕ್ಕೆ ನೆಟ್‌ಫ್ಲಿಕ್ಸ್ ಮೇಲೆ ಕೋಪವಂತೆ

‘ಆರ್‌ಆರ್‌ಆರ್’ ಚಿತ್ರದ ಭಾರಿ ಯಶಸ್ಸಿನ ಬಗ್ಗೆ ರಾಜಮೌಳಿ ಅವರು ಈಗಾಗಲೇ ಬಹಳಷ್ಟು ಸಾರಿ ಮಾತಾಡಿದ್ದಾರೆ. ಆದರೆ ಈ ಬಾರಿ ಅವರಿಗೆ ಯಾರ ಬಗ್ಗೆಯೋ ಕೋಪ ಇದೆಯಂತೆ, ಕೋಪ ಅಷ್ಟೇ ಅಲ್ಲ ಖುಷಿ ಸಹ ಇದೆಯಂತೆ ಎಂಬುದರ ಬಗ್ಗೆ ಹೇಳಿದ್ದಾರೆ. ಯಾರಪ್ಪಾ ಅದು ಅಂತ ನೀವು ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರುತ್ತೀರಿ ಅಂತ ನಮಗೆ ಗೊತ್ತು. ಇಲ್ಲಿದೆ ನೋಡಿ ಯಾರು ಅಂತ

ರಾಜಮೌಳಿ

ರಾಜಮೌಳಿ

  • Share this:
ಈ 2022 ರಲ್ಲಿ ಯಾರಾದರೂ ಸಿನೆಮಾಗಳ (Cinema) ಬಗ್ಗೆ ಮಾತಾಡಲು ಶುರು ಮಾಡಿದರೆ ಅಲ್ಲಿ ಮುಖ್ಯವಾಗಿ ಎರಡು ಪ್ಯಾನ್ ಇಂಡಿಯಾ ಚಿತ್ರಗಳ (Pan India Movies) ಬಗ್ಗೆ ಅವರು ಮಾತಾಡದೆ ಮುಂದೆ ಹೋಗುವುದಕ್ಕೆ ಆಗುವುದಿಲ್ಲ. ಹೌದು.. 2022 ರಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಗಲ್ಲಾ ಪೆಟ್ಟಿಗೆಯಲ್ಲಿ (Box office) ಭಾರಿ ಸದ್ದು ಮಾಡಿದ್ದ ಎರಡು ಚಿತ್ರಗಳು ಎಂದರೆ ಅವುಗಳು ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ (Rocking Star) ಅಂತಾಲೇ ಖ್ಯಾತಿಯಾಗಿರುವ ಯಶ್ ಅವರ ಅಭಿನಯದ ಚಿತ್ರವಾದ ‘ಕೆಜಿಎಫ್: ಚಾಪ್ಟರ್ 2’ ಮತ್ತು ತೆಲುಗಿನ ಚಿತ್ರ ನಿರ್ಮಾಪಕ ಎಸ್.ಎಸ್.ರಾಜಮೌಳಿ ಅವರ ಪ್ಯಾನ್ ಇಂಡಿಯಾ ಚಿತ್ರ ‘ಆರ್‌ಆರ್‌ಆರ್’ (RRR) ಅಂತ ಹೇಳಬಹುದು.

‘ಆರ್‌ಆರ್‌ಆರ್’ ಚಿತ್ರದ ಭಾರಿ ಯಶಸ್ಸಿನ ಬಗ್ಗೆ ರಾಜಮೌಳಿ ಅವರು ಈಗಾಗಲೇ ಬಹಳಷ್ಟು ಸಾರಿ ಮಾತಾಡಿದ್ದಾರೆ. ಆದರೆ ಈ ಬಾರಿ ಅವರಿಗೆ ಯಾರ ಬಗ್ಗೆಯೋ ಕೋಪ ಇದೆಯಂತೆ, ಕೋಪ ಅಷ್ಟೇ ಅಲ್ಲ ಖುಷಿ ಸಹ ಇದೆಯಂತೆ ಎಂಬುದರ ಬಗ್ಗೆ ಹೇಳಿದ್ದಾರೆ. ಯಾರಪ್ಪಾ ಅದು ಅಂತ ನೀವು ತಿಳಿದುಕೊಳ್ಳಲು ತುಂಬಾನೇ ಕಾತುರರಾಗಿರುತ್ತೀರಿ ಅಂತ ನಮಗೆ ಗೊತ್ತು.

ಗಲ್ಲಾಪೆಟ್ಟಿಗೆಯಲ್ಲಿ ಬಹುತೇಕ ಎಲ್ಲಾ ದಾಖಲೆ ಮುರಿದ ಆರ್‌ಆರ್‌ಆರ್ ಸಿನೆಮಾ
ತೆಲುಗು ಚಿತ್ರೋದ್ಯಮದ ಜನಪ್ರಿಯ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ನಟ ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್’ ಚಿತ್ರವು ಇದೇ ವರ್ಷದ ಮಾರ್ಚ್ ನಲ್ಲಿ ಬಿಡುಗಡೆಯಾಗಿತ್ತು ಮತ್ತು ನಂತರದಲ್ಲಿ ಭಾರತದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಬಹುತೇಕವಾಗಿ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದು ಹೇಳಬಹುದು. ಆದರೆ ಪಾಶ್ಚಿಮಾತ್ಯ ಪ್ರೇಕ್ಷಕರು ಅದರಲ್ಲೂ ವಿಶೇಷವಾಗಿ ಯುಎಸ್ ನಲ್ಲಿ ಈ ಚಿತ್ರವನ್ನು ಸ್ಟ್ರೀಮಿಂಗ್ ನಲ್ಲಿ ಹಾಕಿದ ನಂತರವೇ ನೋಡಿ ಚೆನ್ನಾಗಿದೆ ಅಂತ ಮೆಚ್ಚಿಕೊಂಡರು.

ತಮ್ಮ ಆಕ್ಷನ್ ಚಿತ್ರವಾದ ‘ದಿ ಗ್ರೇ ಮ್ಯಾನ್’ ಬಿಡುಗಡೆಯ ನಂತರ ಸಹೋದರರಾದ ಜೋ ಮತ್ತು ಆಂಥೋನಿ ರುಸ್ಸೊ ಅವರೊಂದಿಗಿನ ಸಂಭಾಷಣೆಯಲ್ಲಿ, ರಾಜಮೌಳಿ ಅವರನ್ನು ‘ಆರ್‌ಆರ್‌ಆರ್’ ಕ್ರಾಸ್ ಓವರ್ ಯಶಸ್ಸಿನ ಬಗ್ಗೆ ಕೇಳಲಾಯಿತು. ಚಿತ್ರದಲ್ಲಿ ಆಸಕ್ತಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನೆಟ್‌ಫ್ಲಿಕ್ಸ್ ಅನ್ನು ಅವರು ಪ್ರಶಂಸಿಸಿದರೆ, ಅವರು ಈ ಸ್ಟ್ರೀಮರ್ ಬಗ್ಗೆ ಒಂದು ರೀತಿಯ ಅಸಮಾಧಾನವನ್ನು ಸಹ ಹೊಂದಿದ್ದಾರೆ ಎಂದು ಅವರು ಹೇಳಿದರು.

ನೆಟ್‌ಫ್ಲಿಕ್ಸ್ ಬಗ್ಗೆ ರಾಜಮೌಳಿಗೆ ಕೋಪವೇಕೆ?
"ಮೊದಲನೆಯದಾಗಿ, ನೆಟ್‌ಫ್ಲಿಕ್ಸ್ ಬಗ್ಗೆ ನನಗೆ ನಿಜವಾಗಿಯೂ ಕೋಪವಿದೆ, ಏಕೆಂದರೆ ಅವರು ಹಿಂದಿ ಆವೃತ್ತಿಯನ್ನು ಮಾತ್ರ ತೆಗೆದು ಕೊಂಡಿದ್ದಾರೆ ಮತ್ತು ಉಳಿದ ನಾಲ್ಕು ಭಾಷೆಗಳ ಆವೃತ್ತಿಗಳನ್ನು ತೆಗೆದುಕೊಂಡಿಲ್ಲ. ಆದ್ದರಿಂದ, ನನಗೆ ಅವರ ಬಗ್ಗೆ ಅಸಮಾಧಾನವಿದೆ. ಆದರೆ, ಪಾಶ್ಚಿಮಾತ್ಯರಿಂದ ಬಂದ ಪ್ರತಿಕ್ರಿಯೆಯಿಂದ ನಾನು ಆಶ್ಚರ್ಯಚಕಿತನಾದೆ. ಒಳ್ಳೆಯ ಕಥೆ ಎಲ್ಲರಿಗೂ ಇಷ್ಟವಾಗುತ್ತದೆ ಅಂತ ಗೊತ್ತಿತ್ತು, ಆದರೆ ಪಾಶ್ಚಿಮಾತ್ಯರು ಸಹ ಇಷ್ಟಪಡುವಂತಹ ಚಿತ್ರವನ್ನು ನಾನು ಮಾಡಬಹುದು ಎಂದು ನಾನು ಎಂದಿಗೂ ಭಾವಿಸಿರಲಿಲ್ಲ" ಎಂದು ರಾಜಮೌಳಿ ಹೇಳಿದರು.

ಇದನ್ನೂ ಓದಿ:  Samantha: ಸಮಂತಾ ಫಿಟ್​ ಆಗಿರೋಕೆ ಇದೇ ಕಾರಣವಂತೆ, ಅವ್ರ ಮಾಡೋ ವ್ಯಾಯಾಮ ಎಷ್ಟು ಸುಲಭ ನೋಡಿ

"ಅದು ನೆಟ್‌ಫ್ಲಿಕ್ಸ್ ನಲ್ಲಿ ಮೂಡಿ ಬಂದಾಗ ಮತ್ತು ಜನರು ಅದನ್ನು ನೋಡಲು ಪ್ರಾರಂಭಿಸಿದಾಗ ಮತ್ತು ವಿಮರ್ಶಕರು ಉತ್ತಮ ವಿಮರ್ಶೆಗಳನ್ನು ನೀಡಲು ಪ್ರಾರಂಭಿಸಿದಾಗ ಇದು ಹೆಚ್ಚು ಹೆಚ್ಚು ಜನರಿಗೆ ತಲುಪಿತು. ನಾನು ನಿಜವಾಗಿಯೂ ಆಶ್ಚರ್ಯಚಕಿತನಾಗಿದ್ದೆ ಮತ್ತು ನೆಟ್‌ಫ್ಲಿಕ್ಸ್ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಬಿಡಿ ಮತ್ತು ಅದಕ್ಕಾಗಿ ನನಗೆ ಅವರ ಬಗ್ಗೆ ಅಪಾರ ಗೌರವವಿದೆ" ಎಂದು ರಾಜಮೌಳಿ ಅವರು ಖುಷಿಯಿಂದ ಹೇಳಿದರು.

ಹಾಲಿವುಡ್ ನಿರ್ದೇಶಕರಿಗೂ ಇಷ್ಟವಾದ ಸಿನೆಮಾ
ನೆಟ್‌ಫ್ಲಿಕ್ಸ್ ನಲ್ಲಿ ಡಬ್ ಮಾಡಿದ ಹಿಂದಿ ಭಾಷಾ ಆವೃತ್ತಿಯಲ್ಲಿ ‘ಆರ್‌ಆರ್‌ಆರ್’ ಲಭ್ಯವಿದೆ, ಆದರೆ ಮೂಲ ತೆಲುಗು ಮತ್ತು ಇತರ ಭಾಷೆಯ ಆವೃತ್ತಿಗಳು ಝೀ 5 ನಲ್ಲಿ ಲಭ್ಯವಿದೆ. ಜೇಮ್ಸ್ ಗನ್ ಮತ್ತು ಸ್ಕಾಟ್ ಡೆರಿಕ್ಸನ್ ಅವರಂತಹ ದೊಡ್ಡ-ಹೆಸರಿನ ಹಾಲಿವುಡ್ ನಿರ್ದೇಶಕರು ‘ಆರ್‌ಆರ್‌ಆರ್’ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದಾರೆ. ಜೋ ರುಸ್ಸೊ ಕೂಡ ಈ ಚಿತ್ರದ ಬಗ್ಗೆ ತುಂಬಾನೇ ಮೆಚ್ಚಿಕೊಂಡು ಮಾತನಾಡಿದರು.

ಇದನ್ನೂ ಓದಿ:  Salaar: ಸಲಾರ್ ಸಿನಿಮಾವನ್ನು ಮತ್ತೆ ರೀ ಶೂಟ್​ ಮಾಡ್ತಾರಾ ನೀಲ್? ಈ ಬಾರಿ ದೊಡ್ಡದಾಗಿ ಪ್ಲಾನ್​ ಮಾಡಿದ್ದಾರಂತೆ KGF ಡೈರೆಕ್ಟರ್​!

ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಬಗ್ಗೆ ಕಾಲ್ಪನಿಕ ಕಥೆಯನ್ನು ಹೇಳಿದ ಈ ಚಿತ್ರ ವಿಶ್ವದಾದ್ಯಂತ 1100 ಕೋಟಿ ರೂಪಾಯಿ ಸಂಪಾದಿಸಿತು. ಕೆಜಿಎಫ್: ಚಾಪ್ಟರ್ 2 ಚಿತ್ರದ ನಂತರ ಗಲ್ಲಾಪೆಟ್ಟಿಗೆಯಲ್ಲಿ ವರ್ಷದ ಎರಡನೇ ಅತಿದೊಡ್ಡ ಭಾರತೀಯ ಚಿತ್ರವಾಗಿ ಹೊರ ಹೊಮ್ಮಿದ್ದು ‘ಆರ್‌ಆರ್‌ಆರ್’ ಅಂತ ಹೇಳಬಹುದು.
Published by:Ashwini Prabhu
First published: