RRR Update: 'ಆರ್​ಆರ್​ಆರ್' ಚಿತ್ರದ ಅಪ್ಡೇಟ್​ ಕೊಟ್ಟ ರಾಜಮೌಳಿ: ಬೇಸರಗೊಂಡ ಜೂನಿಯರ್​ ಎನ್​ಟಿಆರ್ ಅಭಿಮಾನಿಗಳು..!

ಮಾರ್ಚ್​ ತಿಂಗಳಿನಿಂದ ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಮಾಡಲಾಗಿತ್ತು. ಆಗಿನಿಂದ ಇಡೀ ಪ್ರಪಂಚವೇ ಲಾಕ್​ ಆಗಿತ್ತು. ಆಗ ನಿಂತಿದ್ದ ಸಿನಿಮಾ ಚಿತ್ರೀಕರಣ ಈಗ ಮತ್ತೆ ಆರಂಭವಾಗಿದೆ. ರಾಜಮೌಳಿ ತಮ್ಮದೇ ಆದ ಸ್ಟೈಲ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಕುರಿತಾಗಿ ಅಪ್ಡೇಟ್​ ಕೊಟ್ಟಿದ್ದಾರೆ.

ಎನ್​ಟಿಆರ್​, ರಾಜಮೌಳಿ ಹಾಗೂ ರಾಮ್​ ಚರಣ್​ ತೇಜ

ಎನ್​ಟಿಆರ್​, ರಾಜಮೌಳಿ ಹಾಗೂ ರಾಮ್​ ಚರಣ್​ ತೇಜ

  • Share this:
ಸ್ಟಾರ್​ ನಿರ್ದೇಶಕ ರಾಜಮೌಳಿ ಅವರ ಮಲ್ಟಿಸ್ಟಾರರ್​ ಸಿನಿಮಾ 'ಆರ್​ಆರ್​ಆರ್​'ಗಾಗಿ ಇಡೀ ಸಿನಿ ರಂಗವೇ ಎದುರು ನೋಡುತ್ತಿದೆ. ರಾಮ್​ ಚರಣ್​ ತೇಜ ಹಾಗೂ ಜೂನಿಯರ್​ ಎನ್​ಟಿಆರ್​ ನಟಿಸಿರುವ ಈ ಸಿನಿಮಾದ ಬಗ್ಗೆ ಅಪ್ಡೇಟ್​ ನೀಡುವಂತೆ ಅಭಿಮಾನಿಗಳು ಲಾಕ್​ಡೌನ್​ ಆಂಭವಾದಾಗಿನಿಂದ ಕೇಳುತ್ತಲೇ ಇದ್ದರು. ಅದರಲ್ಲೂ ಜೂನಿಯರ್​ ಎನ್​ಟಿಆರ್​ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾದರು. ಅದಕ್ಕೂ ಮುನ್ನ ರಾಮ್​ ಚರಣ್​ತೇಜ ಅವರ ಹುಟ್ಟುಹಬ್ಬಕ್ಕೆ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ರಿಲೀಸ್​ ಮಾಡಲಾಗಿತ್ತು. ಮಲಯಾಳಂ ಹೊರತುಪಡಿಸಿ, ಉಳಿದ ಭಾಷೆಗಳಲ್ಲಿ ಆ ವಿಡಿಯೋಗೆ ಜೂನಿಯರ್​ ಎನ್​ಟಿಆರ್​ ಕಂಠದಾನ ಮಾಡಿದ್ದರು. ಅಂತೆಯೇ ಜೂನಿಯರ್​ ಎನ್​ಟಿಆರ್​ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋಗೆ ರಾಮ್​ ಚರಣ್​  ಅವರ ಕಂಠದಾನ ಇರಲಿದೆ ಎಂದೂ ಹೇಳಲಾಗುತ್ತಿತ್ತು. ಅದಕ್ಕಾಗಿಯೇ ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಗಳು ಈಗ ಕಾತರರಾಗಿ ಕಾಯುತ್ತಿದ್ದಾರೆ. 

ಮಾರ್ಚ್​ ತಿಂಗಳಿನಿಂದ ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಮಾಡಲಾಗಿತ್ತು. ಆಗಿನಿಂದ ಇಡೀ ಪ್ರಪಂಚವೇ ಲಾಕ್​ ಆಗಿತ್ತು. ಆಗ ನಿಂತಿದ್ದ ಸಿನಿಮಾ ಚಿತ್ರೀಕರಣ ಈಗ ಮತ್ತೆ ಆರಂಭವಾಗಿದೆ. ರಾಜಮೌಳಿ ತಮ್ಮದೇ ಆದ ಸ್ಟೈಲ್​ನಲ್ಲಿ ಆರ್​ಆರ್​ಆರ್​ ಸಿನಿಮಾ ಕುರಿತಾಗಿ ಅಪ್ಡೇಟ್​ ಕೊಟ್ಟಿದ್ದಾರೆ.ಮಾರ್ಚ್​ ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರೀಕರಣದ ಸೆಟ್​ನ ಚಿತ್ರಗಣ ಹಾಗೂ ಅದನ್ನು ಸ್ವಚ್ಛಗೊಳಿಸಿ, ಶೂಟಿಂಗ್​ ಆರಂಭಿಸಿರುವ ವಿಡಿಯೋವನ್ನು ಸಖತ್ತಾಗಿ ಮಾಡಿದ್ದಾರೆ. ಜೊತೆಗೆ ಅಕ್ಟೋಬರ್​ 22ಕ್ಕೆ ಒಂದು ಸರ್ಪ್ರೈಸ್​ ಕೊಡುವುದಾಗಿ ಒಂದು ಸುಳಿವು ಸಹ ಕೊಟ್ಟಿದ್ದಾರೆ. ಆ ಸರ್ಪ್ರೈಸ್​ ಮತ್ತೇನೂ ಅಲ್ಲ. ಜೂನಿಯರ್​ ಎನ್​ಟಿಆರ್​ ಅವರ ಪರಿಚಯಿಸುವ ಟೀಸರ್​.ಇನ್ನು ನಿನ್ನೆಯಷ್ಟೆ 'ಆರ್​ಆರ್​ಆರ್'​ ಟ್ವಿಟರ್​ ಖಾತೆಯಲ್ಲಿ ಇಂದಿನ ಸರ್ಪ್ರಸ್​ ಬಗ್ಗೆ ಟ್ವೀಟ್​ ಮಾಡುತ್ತಿದ್ದಂತೆಯೇ, ಎನ್​ಟಿಆರ್​ ಅಭಿಮಾನಿಗಳು ಫುಲ್​ ಖುಷಿಯಲ್ಲಿದ್ದರು. ಜೊತೆಗೆ ಇಂದು ನೀಡಲಿರುವ ಅಪ್ಡೇಟ್​ ಜೂನಿಯರ್​ ಎನ್​ಟಿಆರ್​ ಅವರ ಬಗ್ಗೆ ಇರದಿದ್ದರೆ ಸರಿ ಇರುವುದಿಲ್ಲ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದರು. ಆದರೆ ಇಂಗೂ ಸಹ ಅವರಿಗೆ ನಿರಾಸೆಯೇ ಕಾದಿತ್ತು. ಸಿನಿಮಾ ಕುರಿತಾದ ಒಂದು ಅಪ್ಡೇಟ್​ ಕೊಡಲು ಈ ವಿಡಿಯೋ ರಿಲೀಸ್​ ಮಾಡುವ ಅಗತ್ಯವಿತ್ತಾ ಎಂದೆಲ್ಲ ಅಭಿಮಾಣಿಗಳು ಟ್ವೀಟ್​ ಮಾಡುತ್ತಿದ್ದಾರೆ.

ಸಿನಿಮಾ ಚಿತ್ರೀರಕರದ ಸೆಟ್​ಗೆ ಮರಳಲು ಕಾತರರಾಗಿರುವುದಾಗಿ ಜೂನಿಯರ್​ ಎನ್​ಟಿಆರ್ ಹಾಗೂ ರಾಮ್​ ಚರಣ್​ ಟ್ವೀಟ್​ ಮಾಡಿದ್ದಾರೆ. ಸದ್ಯ ರಿಲೀಸ್​ ಆಗಿರುವ ವಿಡಿಯೋದಲ್ಲಿ ಒಬ್ಬ ನಾಯಕ ಬೈಕ್​ ಮೇಲೆ ಬಂದರೆ, ಮತ್ತೊಬ್ಬ ಹೀರೋ ಕುದುರೆ ಮೇಲೆ ಬರುತ್ತಾನೆ. ಆದರೆ ಇಬ್ಬರ ಮುಖ ಬ್ಲರ್​ ಮಾಡಲಾಗಿದೆ.
Published by:Anitha E
First published: