• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದುಬಾರಿ ಬೆಲೆ ತೆತ್ತ ರಾಜಮೌಳಿ! ಅಲ್ಲಿ ಏನೆಲ್ಲಾ ಆಗಿದ್ಯಂತೆ ನೋಡಿ

Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದುಬಾರಿ ಬೆಲೆ ತೆತ್ತ ರಾಜಮೌಳಿ! ಅಲ್ಲಿ ಏನೆಲ್ಲಾ ಆಗಿದ್ಯಂತೆ ನೋಡಿ

ಆಸ್ಕರ್​ 2023

ಆಸ್ಕರ್​ 2023

ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರವು ಹಲವಾರು ದಾಖಲೆಗಳನ್ನು ಮುರಿದಿದೆ ಮತ್ತು ಚಿತ್ರ ಬಿಡುಗಡೆಯಾದಾಗಿನಿಂದಲೂ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

  • Share this:

ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ನಡೆದ ಆಸ್ಕರ್‌ ಪ್ರಶಸ್ತಿ (Oscar Award) ಪ್ರದಾನ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ನಿರ್ದೇಶಿಸಿದ ಮತ್ತು ತೆಲುಗು ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಮಗ ಮತ್ತು ನಟ ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್’ ಚಿತ್ರದಲ್ಲಿರುವ (RRR Film) ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಇಡೀ ವಿಶ್ವಕ್ಕೆ ತಿಳಿದ ಸುದ್ದಿಯಾಗಿದೆ. ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಚಿತ್ರವು ಹಲವಾರು ದಾಖಲೆಗಳನ್ನು ಮುರಿದಿದೆ ಮತ್ತು ಚಿತ್ರ ಬಿಡುಗಡೆಯಾದಾಗಿನಿಂದಲೂ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಚಿತ್ರದ ನಾಟು ನಾಟು ಹಾಡು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮೂಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಡೀ ಚಿತ್ರತಂಡಕ್ಕೆ ತುಂಬಾನೇ ಹೆಮ್ಮೆ ತಂದಿರುವ ವಿಷಯವಾಗಿದೆ. ಈಗಂತೂ ಈ ಚಿತ್ರತಂಡದವರು ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ ಅಂತ ಹೇಳಬಹುದು.


ರಾಜಮೌಳಿ ಮತ್ತು ತಂಡಕ್ಕೆ ಕಾರ್ಯಕ್ರಮವನ್ನು ಲೈವ್ ಆಗಿ ನೋಡಲು ಉಚಿತ ಪಾಸ್ ನೀಡಿಲ್ವಂತೆ..


ಈ ಚಿತ್ರದ ನಿರ್ದೇಶಕರಿಂದ ಹಿಡಿದು ಪ್ರಮುಖ ನಟರವರೆಗೆ, ಹಲವಾರು ತಂಡದ ಸದಸ್ಯರು ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.


ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ರಿಷಬ್ ಭಾಷಣಕ್ಕೆ ತಡೆ! ಕಾಂತಾರ ಹೀರೋ ಮಾತಾಡಿದ್ದು ಬರೀ 12 ಸೆಕೆಂಡ್ಸ್


ಆದರೆ ಅಕಾಡೆಮಿ ಸಿಬ್ಬಂದಿ, ರಾಜಮೌಳಿ ಮತ್ತು ತಂಡಕ್ಕೆ ಸಮಾರಂಭದ ಹಾಲ್ ನಲ್ಲಿ ಕುಳಿತು ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಲು ಉಚಿತ ಪಾಸ್ ಗಳನ್ನು ನೀಡಿಲ್ಲ ಎಂದು ಇದೀಗ ವರದಿಯಾಗಿದೆ.


ಏನಿದು? ಹೊಸ ಸುದ್ದಿ ಅಂತೀರಾ? ಹೌದು, ನೀವು ಓದಿದ್ದು ಸರಿಯಾಗಿಯೇ ಇದೆ. ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ ಅನೇಕ ವರದಿಗಳ ಪ್ರಕಾರ, ಚಂದ್ರಬೋಸ್ ಮತ್ತು ಅವರ ಕುಟುಂಬ ಸದಸ್ಯ ಕೀರವಾಣಿ ಮತ್ತು ಅವರ ಪತ್ನಿಗೆ ಮಾತ್ರ ಈ ಪ್ರಶಸ್ತಿ ಸಮಾರಂಭದ ಹಾಲ್ ನಲ್ಲಿ ಕುಳಿತುಕೊಳ್ಳಲು ಉಚಿತ ಪಾಸ್ ನೀಡಲಾಗಿತ್ತಂತೆ ಎಂದು ಹೇಳಲಾಗುತ್ತಿದೆ.


ತಂಡದ ಸದಸ್ಯರು ಈವೆಂಟ್ ಅನ್ನು ನೋಡಲು ಟಿಕೆಟ್ ಖರೀದಿಸಿದ್ದಾರಂತೆ..


ನಿಯಮದ ಪ್ರಕಾರ, ಪ್ರಶಸ್ತಿ ವಿಜೇತರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸಮಾರಂಭದ ಈ ಹಾಲ್ ನಲ್ಲಿ ಕುಳಿತುಕೊಳ್ಳಲು ಉಚಿತ ಪಾಸ್ ನೀಡಲಾಗುತ್ತದೆ ಅಂತ ಹೇಳಲಾಗಿದೆ.


ಆದರೆ ಭಾರತದಿಂದ ಚಿತ್ರತಂಡದ ಅನೇಕ ಸದಸ್ಯರು ಅಲ್ಲಿಗೆ ಹೋಗಿದ್ದರು ಮತ್ತು ಅವರಿಗೆಲ್ಲಾ ಉಚಿತವಾದ ಪಾಸ್ ದೊರೆಯದ ಕಾರಣ, ಅವರೆಲ್ಲರೂ ಈ ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಲು ಟಿಕೆಟ್ ಗಳಿಗೆ ಹಣ ನೀಡಬೇಕಾಯಿತಂತೆ ಎಂದು ಹೇಳಲಾಗುತ್ತಿದೆ.


ಈ ಲೈವ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾಲ್ ನಲ್ಲಿ ಕೂತು ವೀಕ್ಷಿಸಲು, ನಿರ್ದೇಶಕ ರಾಜಮೌಳಿ ಅವರು ತಮಗಾಗಿ ಮತ್ತು ಇತರ ತಮ್ಮ ತಂಡದ ಪ್ರಮುಖ ಸದಸ್ಯರಿಗಾಗಿ 25,000 ಯುಎಸ್ ಡಾಲರ್ ಹಣ ಖರ್ಚು ಮಾಡಿ ಪಾಸ್ ಗಳನ್ನು ಖರೀದಿಸಿದರಂತೆ.


ಇದನ್ನೂ ಓದಿ: ಹೊಸ ಮೆಟ್ರೋ ಮಾರ್ಗ ಉದ್ಘಾಟನೆಗೆ ದಿನಗಣನೆ


ಎಂದರೆ ಭಾರತದ ಮೌಲ್ಯದಲ್ಲಿ ಇದು ಪ್ರತಿ ವ್ಯಕ್ತಿಗೆ ಸುಮಾರು 20.6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಮತ್ತು ಟಿಕೆಟ್ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ರಾಜಮೌಳಿ ಅವರು ಈ ಸಭಾಂಗಣದ ಕೊನೆಯ ಸಾಲನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ದೊಡ್ಡ ಈವೆಂಟ್ ನಲ್ಲಿ ಯಾರೆಲ್ಲಾ ಇದ್ರು ನೋಡಿ..


ರಾಜಮೌಳಿ, ರಮಾ ರಾಜಮೌಳಿ, ಕಾರ್ತಿಕೇಯ ಮತ್ತು ಅವರ ಪತ್ನಿ, ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಸಹ ಈ ಈವೆಂಟ್ ನಲ್ಲಿ ಉಪಸ್ಥಿತರಿದ್ದರು.


ಎಂ ಎಂ ಕೀರವಾಣಿ ಸಂಯೋಜಿಸಿರುವ 'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಭಾಷೆಯ ಗೀತೆಯಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು