ಕೊನೆಗೂ ಬಹಿರಂಗವಾಯ್ತು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಚಿತ್ರದ ಬಿಡುಗಡೆ ದಿನಾಂಕ

ಸದ್ಯ ಚಿತ್ರದ ಶೂಟಿಂಗ್​ ಪ್ರಗತಿಯಲ್ಲಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಂತೆ. ಬಜೆಟ್​ ವಿಚಾರಕ್ಕೂ ಈ ಚಿತ್ರ ಸದ್ದು ಮಾಡಿದ್ದು, ಬರೋಬ್ಬರಿ 350-400 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. 

Rajesh Duggumane | news18
Updated:March 14, 2019, 1:46 PM IST
ಕೊನೆಗೂ ಬಹಿರಂಗವಾಯ್ತು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಚಿತ್ರದ ಬಿಡುಗಡೆ ದಿನಾಂಕ
ರಾಜಮೌಳಿ, ಎನ್​ಟಿಆರ್​, ರಾಮ್​
Rajesh Duggumane | news18
Updated: March 14, 2019, 1:46 PM IST
ರಾಜಮೌಳಿ ನಿರ್ದೇಶನ ಮಾಡುತ್ತಿರುವ ‘ಆರ್​ಆರ್​ಆರ್​’ ಸಿನಿಮಾ ತುಂಬಾನೇ ಕುತೂಹಲ ಹುಟ್ಟುಹಾಕಿದೆ. ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ನಂತರ ರಾಜಮೌಳಿ ಕೈಗೆತ್ತಿಕೊಂಡಿರುವ ಮೊದಲ ಚಿತ್ರ ಇದಾದ್ದರಿಂದ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಸೆಟ್ಟೇರಿದ್ದು ಬಿಟ್ಟರೆ ಮತ್ತಾವುದೇ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಚಿತ್ರ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ವಿಚಾರ ಬಹಿರಂಗಗೊಂಡಿದೆ.

‘ಆರ್​ಆರ್​ಆರ್​’ಗೆ ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ ​​ಎಂಬುದು ಒಂದು ಕಡೆಯಾದರೆ, ರಾಮ್​ ಚರಣ್​ ತೇಜ ಹಾಗೂ ಜ್ಯೂ.ಎನ್​ಟಿಆರ್​ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ ಎಂಬುದು ಮತ್ತೊಂದು ಕಡೆ.  ಬೇಸರದ ಸಂಗತಿ ಎಂದರೆ, ಈ ಸಿನಿಮಾ ತೆರೆಗೆ ಬರಲು ಇನ್ನೂ ಒಂದು ವರ್ಷಕ್ಕೂ ಅಧಿಕ ಸಮಯ ಕಾಯಬೇಕು. ಕಾರಣ, ‘ಆರ್​ಆರ್​ಆರ್​’ 2020ರ ಜುಲೈ 30ರಂದು ತೆರೆಗೆ ಬರುತ್ತಿದೆ!

ಇಂದು ಈ ಚಿತ್ರದ ಸುದ್ದಿಗೋಷ್ಠಿ ನಡೆದಿತ್ತು. ಈ ವೇಳೆ ರಾಜಮೌಳಿ ಈ ವಿಚಾರ ಬಹಿರಂಗಗೊಳಿಸಿದ್ದಾರೆ. “ನಾನು ಜ್ಯೂ.ಎನ್​ಟಿಆರ್​ ಹಾಗೂ ರಾಮ್​ ಚರಣ್​​ಗೋಸ್ಕರವೇ ಈ ಸಿನಿಮಾ ಮಾಡಿದ್ದೆ. ಒಂದೊಮ್ಮೆ ಇಬ್ಬರಲ್ಲಿ ಒಬ್ಬರು ಚಿತ್ರವನ್ನು ರಿಜೆಕ್ಟ್​ ಮಾಡಿದ್ದರೂ ನಾನು ಈ ಪ್ರಾಜೆಕ್ಟ್​​ಅನ್ನೇ ಕೈಬಿಡುತ್ತಿದ್ದೆ,” ಎಂದು ಹೇಳಿದ್ದಾರೆ ರಾಜಮೌಳಿ.

ಇದನ್ನೂ ಓದಿ: ಆಲಿಯಾ ಭಟ್​ಗೆ ಆಫರ್​ ನೀಡಿದ ನಿರ್ದೇಶಕ ರಾಜಮೌಳಿ!; ದಕ್ಷಿಣ ಭಾರತಕ್ಕೆ ಕ್ಯೂಟಿ ಗರ್ಲ್​?

ಇದೊಂದು ಕಾಲ್ಪನಿಕ ಕಥೆಯಾಗಿದ್ದು, ನೋಡುಗರಿಗೆ ನಿಜವಾದ ಘಟನೆಯೇನೋ ಎನ್ನುವ ಭಾವನೆ ಬರಲಿದೆಯಂತೆ. ಸದ್ಯ ಚಿತ್ರದ ಶೂಟಿಂಗ್​ ಪ್ರಗತಿಯಲ್ಲಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಂತೆ. ಬಜೆಟ್​ ವಿಚಾರಕ್ಕೂ ಈ ಚಿತ್ರ ಸದ್ದು ಮಾಡಿದ್ದು, ಬರೋಬ್ಬರಿ 350-400 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ.

‘ಬಾಹುಬಲಿ’ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಇದರಿಂದ ರಾಜಮೌಳಿ ನಿರ್ದೇಶನದ ಮೇಲೆ ಪ್ರೇಕ್ಷಕರಿಗಿದ್ದ ನಂಬಿಕೆ ದ್ವಿಗುಣಗೊಂಡಿದೆ. ಇದೇ ಕಾರಣಕ್ಕೆ ಹೆಚ್ಚೆಚ್ಚು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ.
Loading...

ಇದನ್ನೂ ಓದಿ: 'ಕೆಜಿಎಫ್​'ಗೆ ರಾಜಮೌಳಿ ಬೆಂಬಲ; 'ರಾಕಿಂಗ್ ಸ್ಟಾರ್' ಯಶ್​ ಹೊಗಳಿದ 'ಬಾಹುಬಲಿ' ನಿರ್ದೇಶಕ

First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626