RRR Movie: ಬೆಂಗಳೂರಿಗೆ ಬರ್ತಿದ್ದಾರೆ ರಾಜಮೌಳಿ, ಜೂ.ಎನ್​ಟಿಆರ್​: ಇಂದು ಆರ್​ಆರ್​ಆರ್​​​ ಸಿನಿಮಾದ ಭರ್ಜರಿ ಪ್ರಚಾರ!

RRR Movie: ಬರೋಬ್ಬರಿ 350 ರಿಂದ 400 ಕೋಟಿ ಬಜೆಟ್​ ಹೊಂದಿರುವ ಈ ಪ್ಯಾನ್​ ಇಂಡಿಯಾ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣಲಿದೆ.  2022 ಜನವರಿ 7ರಂದು ಇಡೀ ವಿಶ್ವದಾದ್ಯಂತ ಸಿನಿಮಾ ತೆರೆಕಾಣಲಿದೆ. ಈಗಿನಿಂದಲೇ ಸಿನಿಮಾ ತಂಡ ಪ್ರಮೋಷನ್​ ಮಾಡುತ್ತಿದೆ. ಅದರಂತೆ ಇಂದು ಬೆಂಗಳೂರಿ(Bengaluru)ಗೆ ಇಡೀ ಆರ್​ಆರ್​ಆರ್ ಸಿನಿಮಾ ತಂಡ ಆಗಮಿಸಲಿದೆ.

ರಾಜಮೌಳಿ, ಜೂ.ಎನ್​ಟಿಆರ್​, ರಾಮ್​ ಚರಣ್​

ರಾಜಮೌಳಿ, ಜೂ.ಎನ್​ಟಿಆರ್​, ರಾಮ್​ ಚರಣ್​

  • Share this:
ಆರ್​ಆರ್​ಆರ್(RRR) ಇಡೀ ಭಾರತೀಯ ಚಿತ್ರರಂಗ ಈ ಸಿನಿಮಾ ತೆರೆಕಾಣಲು ತುದಿಗಾಲಲ್ಲಿ ನಿಂತಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ. ಸಿನಿಮಾ ರಂಗದ ಅನೇಕ ಗಣ್ಯರು ಕೂಡ ಸಿನಿಮಾ ನೋಡಲು ಕಾತುರದಿಂದ ಕಾಯತ್ತಿದ್ದಾರೆ. ಇದಕ್ಕೆ ಕಾರಣ ನಿರ್ದೇಶಕ ರಾಜಮೌಳಿ(Director Rajamouli). ಹೌದು, ಬಾಹುಬಲಿ(Bahubhali) ಸಿನಿಮಾದಂಥ ಬ್ಲಾಕ್​ಬ್ಲಸ್ಟರ್​ ಹಿಟ್​ ಕೊಟ್ಟ ಸ್ಟಾರ್​ ಡೈರೆಕ್ಟರ್​. ಜೊತೆಗೆ ತೆಲುಗು ಸಿನಿಮಾ ರಂಗದ ಇಬ್ಬರು ಸೂಪರ್​ ಸ್ಟಾರ್​ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್​​ ಚರಣ್(Ram Charan)​ ಹಾಗೂ ಜೂ.ಎನ್​ಟಿಆರ್(Jr.NTR)​ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಿನಿಮಾ ಮೇಲಿರುವ ಕುತೂಹಲ ಹೆಚ್ಚತ್ತಲೇ ಇದೆ. ಟೀಸರ್(Teaser)​, ಸಾಂಗ್(Song)​, ಸ್ಟಾರ್ ಕ್ಯಾಸ್ಟ್(Star Cast)​ ನೋಡಿಯೇ ಅಭಿಮಾನಿಗಳು ಸಿನಿಮಾ ಯಾವಾಗ ತೆರೆಕಾಣುತ್ತೋ ಅಂತ ಕಾಯುತ್ತಿದ್ದಾರೆ.ಬರೋಬ್ಬರಿ 350 ರಿಂದ 400 ಕೋಟಿ ಬಜೆಟ್​ ಹೊಂದಿರುವ ಈ ಪ್ಯಾನ್​ ಇಂಡಿಯಾ ಸಿನಿಮಾ ಐದು ಭಾಷೆಗಳಲ್ಲಿ ತೆರೆಕಾಣಲಿದೆ.  2022 ಜನವರಿ 7ರಂದು ಇಡೀ ವಿಶ್ವದಾದ್ಯಂತ ಸಿನಿಮಾ ತೆರೆಕಾಣಲಿದೆ. ಈಗಿನಿಂದಲೇ ಸಿನಿಮಾ ತಂಡ ಪ್ರಮೋಷನ್​ ಮಾಡುತ್ತಿದೆ. ಅದರಂತೆ ಇಂದು ಬೆಂಗಳೂರಿ(Bengaluru)ಗೆ ಇಡೀ ಆರ್​ಆರ್​ಆರ್ ಸಿನಿಮಾ ತಂಡ ಆಗಮಿಸಲಿದೆ. ರಾಜಮೌಳಿ, ಜ್ಯೂ. ಎನ್​ಟಿಆರ್​ ಸೇರಿ ಹಲವು ಗಣ್ಯರು ಇಂದು ಬೆಂಗಳೂರಿಗೆ ಆಗಮಿಸಿದಲಿದ್ದಾರೆ. ಆರ್​ಆರ್​ಆರ್​ ಸಿನಿಮಾದ  ಪ್ರಮೋಷನ್(Promotion)​ ಮಾಡಲಿದ್ದಾರೆ. 

ಬೆಂಗಳೂರಿನಲ್ಲಿ ‘RRR’​ ಸಿನಿಮಾ ಪ್ರಮೋಷನ್​

ಬಾಹುಬಲಿ ಸಿನಿಮಾದಿಂದ ರಾಜಮೌಳಿ ಅವರ ಕೆರಿಯರ್​​ ಬದಲಾಗಿತ್ತು. ಬಾಹುಬಲಿ ಸಿನಿಮಾ ಸೃಷ್ಟಿಸಿದ್ದ ಹವಾ ಇಂದಿಗೂ ಕಡಿಮೆಯಾಗಿಲ್ಲ. ಈ ಸಿನಿಮಾ ಬರೀ ತೆಲುಗು ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ನಂತರ ಅದನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿತ್ತು. ಆದರೆ ಆರ್​ಆರ್​ಆರ್​​ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ  ಪ್ರೇಕ್ಷಕರು ಕೂಡ ಕನ್ನಡ ಭಾಷೆಯಲ್ಲಿಯೇ ಈ ಸಿನಿಮಾವನ್ನು ನೋಡಿ ಆನಂದಿಸಿಬಹುದು. ಅದರಲ್ಲೂ ನಿರ್ದೇಶಕ ರಾಜಮೌಳಿ ಕನ್ನಡಿಗರು ಅನ್ನುವುದು ಹೆಮ್ಮೆಯ  ವಿಚಾರ. ಹೀಗಾಗಿ ಇಂದು ಬೆಂಗಳೂರಿಗೆ ಇಡಿ ಚಿತ್ರತಂಡ ಆಗಮಿಸಿ ಸಿನಿಮಾ ಪರ  ಪ್ರಮೋಷನ್​ ಮಾಡಲಿದ್ದಾರೆ.

ಇದನ್ನು ಓದಿ : ತ್ರಿಬಲ್​ ಆರ್​ `ಹಳ್ಳಿ ನಾಟು’ ಸಾಂಗ್​ ಕನ್ನಡದಲ್ಲೂ ವಕೌರ್ಟ್​, ಫ್ಯಾನ್ಸ್​ ದಿಲ್​ಖುಷ್​!

ಡಿಸೆಂಬರ್​ ಮೊದಲ  ವಾರದಲ್ಲಿ ಟ್ರೈಲರ್​​!

ಇನ್ನೂ ಸಿನಿಮಾ ತಂಡ ಚಿತ್ರದ ಟ್ರೈಲರ್​ಅನ್ನು ಬಿಡುಗಡೆ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್​ ಮೊದಲ ವಾರದಲ್ಲಿ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಲು ಚಿತ್ರಂಡ ಪ್ಲ್ಯಾನ್​ ಮಾಡಿಕೊಂಡಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಲಿ ಟ್ರೈಲರ್​​ ಬಿಡುಗಡೆಯಾಗಲಿದೆ. ಇಂದು ಬೆಂಗಳೂರಿನಲ್ಲಿ ಪ್ರಮೋಷನ್​ ಮಾಡಲಿದ್ದಾರೆ. ಬಳಿಕ ಆಯಾ ಭಾಷೆಗಳ ರಾಜ್ಯಕ್ಕೆ ಹೋಗಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ಬಿಡುಗಡೆಯಾಗುವ ಮುನ್ನ ಮತ್ತೊಮ್ಮೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದನ್ನು ಓದಿ : ಒಬ್ಬ ಸಾಲಲ್ಲ, ಇಬ್ಬರೂ ಬೇಕು ಎನ್ನುತ್ತಿರುವ Sara Ali Khan, ಬಾಲಿವುಡ್​​ನಲ್ಲಿ Dhanush ಮೋಡಿ!

ಹಳ್ಳಿನಾಟು ಕನ್ನಡ ಹಾಡು ಸಖತ್​ ಫೇಮಸ್​!

ನಾಟು ನಾಟು ಅನ್ನೋ ಈ ಹಾಡಿನ ಲಿರಿಕಲ್‌ ವೀಡಿಯೋ ಮಾತ್ರ ರಿಲೀಸ್‌ ಆಗಿದೆ. ಹಾಡಿನಲ್ಲಿ ಮೇಕಿಂಗ್‌ ದೃಶ್ಯಗಳು ಕೂಡ ಗಮನ ಸೆಳೆಯುತ್ತವೆ. ರೆಟ್ರೋ ಕಾಸ್ಟ್ಯೂಂನಲ್ಲಿ ರಾಮ್‌ ಚರಣ್ ಮತ್ತು ಜೂ.ಎನ್‌ಟಿಆರ್‌ ಮಿಂಚಿದ್ದಾರೆ. ಇನ್ನೂ ಅದ್ದೂರಿ ಸೆಟ್‌ ಮತ್ತು ನೂರಾರು ನೃತ್ಯ ಕಲಾವಿದರು ಹಾಡಿನ ಹೈಲೈಟ್. ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶನ ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದು ಲಿರಿಕಲ್ ವೀಡಿಯೋ ಆಗಿರುವುದರಿಂದ 2 ರಿಂದ 3 ನೃತ್ಯ ದೃಶ್ಯಗಳು ಮಾತ್ರ ಇವೆ. ಇದುವೆ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.  ಐದು ಭಾಷೆಗಳಲ್ಲೂ ಈ ಸಾಂಗ್​ ಬಿಡುಗಡೆಯಾಗಿದೆ. ಕನ್ನಡದಲ್ಲೂ ತುಂಬಾ ಅದ್ಭುತವಾಗಿ ಲಿರಿಕ್ಸ್​ ಮ್ಯಾಚ್​ ಆಗಿದ್ದು ಸಖತ್​ ಕ್ಯಾಚಿಯಾಗಿದೆ. ​ಕನ್ನಡದಲ್ಲಿ ಸಾಂಗ್​ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.
Published by:Vasudeva M
First published: