• Home
  • »
  • News
  • »
  • entertainment
  • »
  • Arya: ಸಖತ್​ ವರ್ಕೌಟ್​ ವಿಡಿಯೋ ಹಂಚಿಕೊಂಡ ರಾಜ ರಾಣಿ ಖ್ಯಾತಿಯ ನಟ ಆರ್ಯ

Arya: ಸಖತ್​ ವರ್ಕೌಟ್​ ವಿಡಿಯೋ ಹಂಚಿಕೊಂಡ ರಾಜ ರಾಣಿ ಖ್ಯಾತಿಯ ನಟ ಆರ್ಯ

ಕಾಲಿವುಡ್​ ನಟ ಆರ್ಯ

ಕಾಲಿವುಡ್​ ನಟ ಆರ್ಯ

Arya Workout Video: ಆರ್ಯ ತಮ್ಮ ವಿವಾಹವಾದ ನಂತರ ಹೊಸ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟು ಫಿಟ್ನೆಸ್​ ಕಾಯ್ದುಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಪ ರಂಜಿತ್​ ಅವರ ಜೊತೆ ಮಾಡುತ್ತಿರುವ ಹೊಸ ಸಿನಿಮಾಗಾಗಿ ಹಗಲಿರುಳು ಜಿಮ್​ನಲ್ಲೇ ಬೆವರಿಳಿಸುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲಿ ಆರ್ಯ ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಬಾಕ್ಸಿಂಗ್​ ಅಭ್ಯಾಸ ಸಹ ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಖ್ಯಾತ ಕಾಲಿವುಡ್​ ನಟ ಆರ್ಯ ಲಾಕ್​ಡೌನ್​ನಲ್ಲಿ ಹೆಚ್ಚಿನ ಸಮಯವನ್ನು ಜಿಮ್​ ಹಾಗೂ ವರ್ಕೌಟ್​ ಮಾಡುವುದರಲ್ಲೇ ಕಳೆಯುತ್ತಿದ್ದಾರೆ. ಒಮ್ಮೆ 18ಕಿ.ಮೀ ಓಡುವುದು, ತಮ್ಮ ತರಬೇತುದಾರರ ಜೊತೆ ಜಿಮ್​ನಲ್ಲಿ ಬೆವರಿಳಿಸುವುದು. ಇಲ್ಲ ಅಂದ್ರೆ ಬಾಕ್ಸಿಂಗ್​ ಅಭ್ಯಾಸ ಮಾಡುವುದು. ಅದೂ ಇಲ್ಲ ಅಂದ್ರೆ ವಾರದಲ್ಲಿ 2-3 ದಿನ ಸೈಕ್ಲಿಂಗ್​ ಮಾಡುವುದು. ಆರ್ಯ ತಮ್ಮ ನಿತ್ಯದ ಫಿಟ್ನೆಸ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೆ, ಅಂದರೆ ಲಾಕ್​ಡೌನ್​ ಆರಂಭವಾದಾಗ ಚೆನ್ನೈನ ರಸ್ತೆಯಲ್ಲಿ 18 ಕಿಮೀ ಜಾಗಿಂಗ್ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು. ಜೊತೆಗೆ ತಮ್ಮ ತರಬೇತುದಾರರ ಜೊತೆ ಇದ್ದ ಫೋಟೋವನ್ನೂ ಹಂಚಿಕೊಂಡಿದ್ದರು. ಆರ್ಯ ಅವರು ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಅವರಿಗೆ ಆಗ ದಂಡ ವಿಧಿಸಲಾಗಿತ್ತು. ಈ ವಿಷಯದಿಂದಾಗಿ ಅವರು ಸಾಕಷ್ಟು ಸುದ್ದಿಯಲ್ಲಿದ್ದರು. ಆದರೆ ಆರ್ಯ ಈಗ ತಮ್ಮ ಫಿಟ್ನೆಸ್​ ವಿಡಿಯೋದಿಂದಾಗಿ ಸದ್ದು ಮಾಡುತ್ತಿದ್ದಾರೆ. ಹೌದು, ನಿನ್ನೆಯಷ್ಟೆ ಆರ್ಯ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಹೊಸ ವರ್ಕೌಟ್​ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್​ ಆಗುತ್ತಿದೆ.


ಆರ್ಯ ತಮ್ಮ ವಿವಾಹವಾದ ನಂತರ ಹೊಸ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟು ಫಿಟ್ನೆಸ್​ ಕಾಯ್ದುಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಪ ರಂಜಿತ್​ ಅವರ ಜೊತೆ ಮಾಡುತ್ತಿರುವ ಹೊಸ ಸಿನಿಮಾಗಾಗಿ ಹಗಲಿರುಳು ಜಿಮ್​ನಲ್ಲೇ ಬೆವರಿಳಿಸುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲಿ ಆರ್ಯ ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಬಾಕ್ಸಿಂಗ್​ ಅಭ್ಯಾಸ ಸಹ ಮಾಡುತ್ತಿದ್ದಾರೆ.

View this post on Instagram

Long deep breath before Heavy squatting 😍😍#gymlife @ryders_teamjammy @johnson_monsters


A post shared by Arya (@aryaoffl) on

ವೈಯಕ್ತಿಕ ತರಬೇತುದಾರರ ಬಳಿ ಬಾಕ್ಸಿಂಗ್​ ಮಾತ್ರವಲ್ಲದೆ ಬಾಡಿಯನ್ನೂ ಸಖತ್​ ಫಿಟ್​ ಆಗಿ ಇಟ್ಟುಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ ಆರ್ಯ. ಈ ಹಿಂದೆ ಅಂದರೆ, ಫೆಬ್ರುವರಿಯಲ್ಲಿ ಒಂದು ಫೋಟೋವನ್ನು ಪೋಸ್ಟ್​ ಮಾಡಿದ್ದು, ಆಗ ಅದು ವೈರಲ್​ ಆಗಿತ್ತು. ಈಗಲೂ ಸಹ ಆರ್ಯ 150 ಕೆಜಿ ತೂಕವನ್ನು ಎತ್ತಿಕೊಂಡು ಫುಲ್​ ಸ್ಕ್ವಾಟ್​ ಮಾಡುತ್ತಿದ್ದಾರೆ. ಈ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾಗೆ ಕಿಕ್​ ಸ್ಟಾರ್ಟ್​ ಸಿಗಲಿದೆ ಅನ್ನೋ ಸುದ್ದಿ ಸಹ ಕೊಟ್ಟಿದ್ದಾರೆ.
ಇದು ಆರ್ಯ ಅಭಿನಯದ 30ನೇ ಚಿತ್ರವಾಗಿದ್ದು, ಇದರಲ್ಲಿ ಚೆನ್ನೈನ ಉತ್ತರ ಭಾಗದಿಂದ ಬರುವ ಬಾಕ್ಸರ್​ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ತುಷಾರಾ ಹಾಗೂ ಕಲೈಯರಸನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

View this post on Instagram

#cycling #Ryders #fitness


A post shared by Arya (@aryaoffl) on

ಇನ್ನು ಆರ್ಯ ಅವರಿಗೆ ಸೈಕ್ಲಿಂಗ್​ ಮಾಡುವ ಹವ್ಯಾಸವಿದ್ದು, ಆಗಾಗ ಸ್ನೇಹಿತರೊಂದಿಗೆ ರೈಡ್​ ಹೋಗುತ್ತಾರೆ. ಅವರ ಸೈಕ್ಲಿಂಗ್​ ವಿಡಿಯೋಗಳೂ ಸಹ ಸಾಕಷ್ಟು ವೈರಲ್​ ಆಗಿವೆ.
ಇನ್ನು ಆರ್ಯ ಜೊತೆ ಈಗ ಪತ್ನಿ ಸಯೇಷಾ ಸಹ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸಯೇಷಾ, ಇತ್ತೀಚೆಗಷ್ಟೆ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

View this post on Instagram

My new boxing partner 🥊🥊🥊🥊💪💪💪😍😍😍 @sayyeshaa #boxing #fitness @chennaimmatrainingacademy


A post shared by Arya (@aryaoffl) on

ಪ ರಂಜಿತ್​ ನಿರ್ದೇಶನದ ಈ ಸಿನಿಮಾಗೆ ಸಂತೋಷ್​ ನಾರಾಯಣ್​ ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ ಆರ್ಯ ಹಂಚಿಕೊಂಡಿದ್ದ ಅವರ ಫೋಟೋ ನೋಡಿದ್ದ ಅಭಿಮಾನಿಗಳು ಕಾಲಿವುಡ್ ಹಲ್ಕ್​ ಎಂದು ಕರೆಯಲಾರಂಭಿಸಿದ್ದರು. ತಮ್ಮ ಸಿನಿಮಾಗಾಗಿ ಹಲ್ಕ್​ ಅಂತೆಯೇ ಸಖತ್ ಬಾಡಿ ಬಿಲ್ಡ್​ ಮಾಡಿದ್ದಾರೆ ಎಂದು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದರು.

Published by:Anitha E
First published: