ಕಲರ್ಸ್ ಕನ್ನಡ (Colors Kannada) ವಾಹಿನಿಯೂ ವಿಭಿನ್ನ ಧಾರಾವಾಹಿಗಳು (Serial) ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಇದರಲ್ಲಿ ಬರುವ ಕನ್ನಡತಿ (Kannadati) ಧಾರಾವಾಹಿ ಎಂದರೆ ವೀಕ್ಷಕರಿಗೆ ಅಚ್ಚು ಮೆಚ್ಚು. ಕೇವಲ ಇದೊಂದೆ ಅಲ್ಲ ಎದೆ ತುಂಬಿ ಹಾಡುವೆನು, ಬಿಗ್ಬಾಸ್ (Bigboss) ಹೀಗೆ ರಿಯಾಲಿಟಿ ಶೋಗಳು ಎಂದರೆ ಸಹ ಜನರಿಗರ ಬಹಳ ಇಷ್ಟ. ಹಾಗೆಯೇ ಜನರ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಜನಪ್ರಿಯ ಶೋ ಎಂದರೆ ರಾಜ - ರಾಣಿ. ಇದೀಗ ಇದರ ಎರಡನೇ ಸೀಸನ್ ಆರಂಭವಾಗುತ್ತಿದ್ದು, ಜನರ ಕುತೂಹಲಕ್ಕೆ ಸದ್ಯದಲ್ಲಿ ತೆರೆ ಬೀಳಲಿದೆ.
ಈಗಾಗಲೇ ಯಶಸ್ವಿಯಾಗಿ ಮೊದಲನೆ ಸೀಸನ್ ಪೂರ್ಣಗೊಳಿಸಿರುವ ಈ ಶೋ ಮತ್ತೆ ಬಂದಿದ್ದು, ವೀಕ್ಷಕರಿಗೆ ಬಹಳ ಸಂತೋಷವಾಗಿದೆ. ಈ ಶೋದಲ್ಲಿ ಸೆಲೆಬ್ರಿಟಿಗಳು ತಮ್ಮ ಸಂಗಾತಿಯೊಂದಿಗೆ ಬಂದು ಆಟವಾಡುವುದರ ಜೊತೆಗೆ ಅವರ ಜೀವನದ ಬಗ್ಗೆ ಗುಟ್ಟುನ್ನು ಬಿಚ್ಚುಡುತ್ತಾರೆ. ಅವರ ಬದುಕಿನಲ್ಲಿ ನಡೆದ ಸಿಹಿ, ಕಹಿ ಘಟನೆಗಳನ್ನು ಜನರ ಮುಂದೆ ತೆರೆದಿಟ್ಟು ಮನಸ್ಸನ್ನು ಹಗುರಗೊಳಿಸಿಕೊಳ್ಳಲು ಒಂದು ಅವಕಾಶ ಎನ್ನಬಹುದು.
ಹೊಸ ಪ್ರೊಮೋ ನೋಡಿ ಜನರು ಖುಷ್
ಈ ಶೋ ಜನರಿಗೆ ಮನರಂಜನೆ ನೀಡುವುದರ ಜೊತೆ ಸೆಲೆಬ್ರಿಟಿಗಳ ಜೀವನ ಹೇಗಿರುತ್ತದೆ ಎಂಬುದನ್ನ ಸಹ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಕಾಮಿಡಿ, ನೋವು, ನಲಿವುಗಳ ಮಿಶ್ರಣದ ಈ ಕಾರ್ಯಕ್ರಮದ ಮತತೆ ತೆರೆ ಮೇಲೆ ಬರುತ್ತಿದ್ದು, ಕಲರ್ಸ್ ವಾಹಿನಿ ಮತ್ತೊಂದು ಹೊಸ ಪ್ರೊಮೋ ಮೂಲಕ ಸಮಯ ಹಾಗೂ ದಿನಾಂಕವನ್ನು ಬಹಿರಂಗಪಡಿಸಿದೆ.
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ತಾರಾ ಅನುರಾಧ ಇರುವ ಈ ಪ್ರೊಮೋದಲ್ಲಿ ತಾರಾ ಮದುವೆಯಾಗುತ್ತಿರುವ ಜೋಡಿ ನೋಡಿ ಹೊಗಳುತ್ತಿದ್ರೆ, ಸೃಜನ್ ಅದಕ್ಕೆ ತಕ್ಕಂತೆ ಕಾಮಿಡಿ ಮಾಡ್ತಾರೆ.
ಯಾವಾಗಿಂದ ಆರಂಭ?
ಇನ್ನು ಈ ಕಾರ್ಯಕ್ರಮ ಇದೇ ಜೂನ್ 11 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತದೆ. ಕಳೆದ ಬಾರಿಯಂತೆಯೇ ಈ ಬಾರಿ ಸಹ ಸೃಜನ್ ಲೋಕೇಶ್ ಹಾಗೂ ತಾರಾ ಜಡ್ಜ್ ಆಗುತ್ತಿದ್ದು, ಕಳೆದ ಬಾರಿ ನಿರೂಪಣೆ ಮಾಡಿದ್ದ ಅನುಪಮಾ ಅವರೇ ನಿರೂಪಣೆ ಮಾಡಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ನನ್ನ ಫ್ರೆಂಡ್ಸ್ ಆಗುವ ಯೋಗ್ಯತೆ ಬಾಲಿವುಡ್ಗಿಲ್ಲ! ಹೀಗೆಂದಿದ್ದೇಕೆ ಕ್ವೀನ್ ಕಂಗನಾ?
ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ರಿಯಾಲಿಟಿ ಶೋ ರಾಜಾ-ರಾಣಿ ಮತ್ತೆ ಬರುತ್ತಿದೆ ಎಂದು ಕಲರ್ಸ್ ವಾಹಿನಿ ತಿಳಿಸಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
12 ಸೆಲೆಬ್ರಿಟಿ ಜೋಡಿಗಳನ್ನು ಒಳಗೊಂಡ ಗೇಮ್ ಶೋ ಇದಾಗಿದ್ದು, ಒಬ್ಬರನ್ನೊಬ್ಬರು ಬಿಟ್ಟುಕೊಡದೇ ಆಡಿ ಗೆಲ್ಲುವ ಅವಕಾಶ ಇಲ್ಲಿದೆ. ಈ ಶೋ ಮೂಲಕ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ವಾಹಿ ಮಾತ್ರವಲ್ಲದೇ ಕಳೆದ ಸೀಸನ್ನಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳ ಅಂಬೋಣ.
ಕಳೆದ ಸೀಸನ್ನಲ್ಲಿ ಗೊಂಬೆ ಖ್ಯಾತಿಯ ನೇಹಾ ಹಾಗೂ ಚಂದನ್, ಸಿಲ್ಲಿ ಲಲ್ಲಿಯ ರೂಪ ಪ್ರಭಾಕರ್ ಮತ್ತು ಪ್ರಶಾಂತ್, ಬಾರ್ಬಿ ಡಾಲ್ ನಿವೇದಿತಾ ಹಾಗೂ ಚಂದನ್ ಶೆಟ್ಟಿ, ಮುರುಗ, ಇಶಿತಾ ಸೇರಿದಂತೆ 12 ಜೋಡಿಗಳು ಭಾಗವಹಿಸಿದ್ದರು. ಫಿನಾಲೆಯಲ್ಲಿ ನೇಹಾ ಹಾಗೂ ಚಂದನ್ ರಾಜ ರಾಣಿ ಟ್ರೋಫಿಯನ್ನು ಗೆದ್ದು ಬೀಗಿದ್ದರು.
ಇದನ್ನೂ ಓದಿ: ಹೆಂಡತಿ ಜೊತೆ ಫೋಟೋಶೂಟ್ನಲ್ಲಿ ತ್ರಿಶೂಲ್ ಮಿಂಚಿಂಗ್ - ನೂರ್ ಕಾಲ ಒಟ್ಟಿಗೆ ಬಾಳಿ ಎಂದ ಅಭಿಮಾನಿಗಳು
ಅಲ್ಲದೇ, ಈ ಪ್ರೋಮೋದ ಕಮೆಂಟ್ ಬಾಕ್ಸ್ನಲ್ಲಿ ಫ್ಯಾನ್ಸ್ 'ಬಿಗ್ ಬಾಸ್ ಹಾಗೂ ಮಜಾ ಟಾಕೀಸ್ ಹೊಸ ಸೀಸನ್ ಯಾವಾಗ' ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ವಾಹಿನಿ ಕಡೆಯಿಂದ ಉತ್ತರ ಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ