Raj Kundra: ರಾಜ್ ಕುಂದ್ರಾ ಮುಂಚೆ ಮಾಡಿದ್ದ ಅಶ್ಲೀಲ ಟ್ವೀಟ್​​ಗಳಿಗೆ ಈಗ ಹೊಸ ಅರ್ಥ !

ವೇಶ್ಯಾವಾಟಿಕೆ ಮತ್ತು ಅಶ್ಲೀಲತೆಯ ಕಾನೂನುಬದ್ಧತೆಯನ್ನು ಪ್ರಶ್ನಿಸುವ ರಾಜ್​​ ಕುಂದ್ರಾ ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

 • Share this:
  ಮುಂಬೈ (ಜು.20): ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ ತಡರಾತ್ರಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆ ಬೇರೆ ಮೊಬೈಲ್​ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ರಾಜ್​ ಕುಂದ್ರಾ ಅವರನ್ನು ಅರೆಸ್ಟ್​ ಮಾಡಲಾಗಿದೆ. ಪಾರ್ನ್ ಸಿನಿಮಾಗಳನ್ನು ಮಾಡುತ್ತಿದ್ದ ಜಾಲ ಆ್ಯಕ್ಟಿವ್​ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲೇ ದೂರು ದಾಖಲಾಗಿತ್ತು. ರಾಜ್​ ಕುಂದ್ರಾ ಈ ಪ್ರಕರಣದ ಪ್ರಮುಖ ರೂವಾರಿ ಎಂದು ತಿಳಿದು ಬಂದಿದೆ. ಈ ಪ್ರಕರಣದ ಕುರಿತು ಮುಂಬೈ ಪೊಲೀಸರು ಸಾಕ್ಷಿಗಳನ್ನು ಸಹ ಸಂಗ್ರಹ ಮಾಡಿದ್ದಾರೆ.

  ಸೋಮವಾರ ತಡರಾತ್ರಿ 11 ಗಂಟೆಗೆ ರಾಜ್​ ಕುಂದ್ರ ಅವರನ್ನು ಬಂಧಿಸಿದ ಬಳಿಕ ಮುಂಬೈನ ಜೆಜೆ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ಇಂದು ಪೊಲೀಸರು ರಾಜ್​ ಕುಂದ್ರಾ ಅವರನ್ನು ಕೋರ್ಟ್​ ಮುಂದೆ ಹಾಜರುಪಡಿಸಲಿದ್ದಾರೆ.

  ರಾಜ್​ ಕುಂದ್ರಾ ಅವರನ್ನು ಅರೆಸ್ಟ್​ ಮಾಡಿದ ಬಳಿಕ ಅವರು ಮಾಡಿದ್ದ ಹಳೆಯ ಟ್ವೀಟ್​ಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ವೇಶ್ಯಾವಾಟಿಕೆ ಮತ್ತು ಅಶ್ಲೀಲತೆಯ ಕಾನೂನುಬದ್ಧತೆಯನ್ನು ಪ್ರಶ್ನಿಸುವ ರಾಜ್​​ ಕುಂದ್ರಾ ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

  ಇದನ್ನೂ ಓದಿ:Bengaluru Crime: ಹಾಡಹಗಲೇ ಬ್ಯಾಂಕ್​ನಲ್ಲಿ ರೌಡಿಶೀಟರ್​ ಬರ್ಬರ ಕೊಲೆ..!

  ರಾಜ್​ಕುಂದ್ರಾ ಅವರು 2012 ರ ಮಾರ್ಚ್​ 29ರಂದು ಮಾಡಿರುವ ಟ್ವೀಟ್​​ನಲ್ಲಿ, ಕ್ಯಾಮೆರಾ ಮುಂದೆ ಸೆಕ್ಸ್ ಮಾಡೋಕೆ ಯಾರಿಗಾದ್ರೂ ಹಣ ಕೊಡೋದು ಕಾನೂನಾತ್ಮಕ ಆಗಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ. ವೇಶ್ಯಾವಾಟಿಕೆ ಅಶ್ಲೀಲತೆಗಿಂತ ಹೇಗೆ ಭಿನ್ನವಾಗಿದೆ ಎಂದು ಕುಂದ್ರಾ ತಮ್ಮ ಟ್ವೀಟ್​​ನಲ್ಲಿ ಕೇಳಿದ್ದಾರೆ.


  2012 ಮೇ 3ರಂದಯ ಕುಂದ್ರಾ ಅವರು ಮಾಡಿರುವ ಮತ್ತೊಂದು ಟ್ವೀಟ್ ಈಗ ಸಾಕಷ್ಟು ವೈರಲ್ ಆಗುತ್ತಿದೆ. ನಟರು ಕ್ರಿಕೆಟ್​ ಆಡುತ್ತಿದ್ದಾರೆ. ಕ್ರಿಕೆಟಿಗರು ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣಿಗಳು ಪಾರ್ನ್​ ವಿಡಿಯೋ ನೋಡುತ್ತಿದ್ದರೆ, ಪಾರ್ನ್​​ ಸ್ಟಾರ್ಸ್​​ಗಳು ನಟರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

  ರಾಜ್​ ಕುಂದ್ರಾ ಬಂಧನದ ಬಳಿಕ ನೆಟ್ಟಿಗರು ಈ ಎರಡು ಟ್ವೀಟ್​​ ​​​ಗಳನ್ನು ಈಗ ಶೇರ್ ಮಾಡಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.

  ‘ಫೆಬ್ರವರಿ 2021ರಂದು ಕ್ರೈಮ್​ ಬ್ರ್ಯಾಂಚ್​ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್​ಗಳ ಮೂಲಕ ಇದನ್ನು ಅಪ್​ಲೋಡ್​ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಸೋಮವಾರ ರಾತ್ರಿ ನಾವು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರೂವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಕೆಂಡ್ರಿಂಗ್​ ಹೆಸರಿನ ಇಂಗ್ಲೆಂಡ್​ ಮೂಲದ ಕಂಪನಿ ಮೇಲೆ ರಾಜ್​ ಕುಂದ್ರಾ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಕುಂದ್ರಾ ಹಾಗೂ ಉಮೇಶ್​ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: