ತನ್ನ ಆಸ್ತಿಯನ್ನು Shilpa Shetty ಹೆಸರಿಗೆ ಟ್ರಾನ್ಸ್​ಫರ್ ಮಾಡ್ತಿದ್ದಾರೆ Raj Kundra, ಏನಾಗ್ತಿದೆ ಇವ್ರಿಬ್ರ ಮಧ್ಯೆ??

ರಾಜ್​ ಕುಂದ್ರಾ ಜೈಲಿನಿಂದ ಹೊರ ಬಂದ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ನೋಡಿದರೆ ಭಾರಿ ಬೆಲೆ ಬಾಳುವ ಆಸ್ತಿಗಳನ್ನು ರಾಜ್ ಕುಂದ್ರಾ, ಪತ್ನಿ ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ.

ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

  • Share this:
ರಾಜ್​ ಕುಂದ್ರಾ (Raj Kundra) ಹೆಸರು ಕೇಳಿದರೆ ಥಟ್​ ಅಂತ ಸೆಕ್ಸ್ (Sex)​ ರಾಕೆಟ್​ ಕೇಸ್​ ನೆನಪಾಗುತ್ತೆ. ಮೊದಲೆಲ್ಲ ಇವರನ್ನು ಬ್ಯುಸಿನೆಸ್​ ಮ್ಯಾನ್ (Business Man)​, ಐಪಿಎಲ್​ ಟೂರ್ನಿಯ ರಾಜಸ್ಥಾನ್​ ರಾಯಲ್ಸ್​​ ಮಾಲೀಕ ಎಂದು ಮೊದಲು ಹೇಳುತ್ತಿದ್ದಾರೆ. ಯಾವಾಗ ರಾಜ್​ ಕುಂದ್ರಾ ಜೈಲಿಗೆ ಹೋಗಿ ಬಂದರು ಅವರ ಹೆಸರನ್ನು ಹಾಳುಮಾಡಿಕೊಂಡಿದ್ದಾರೆ. ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಮುಂಬೈ (Mumbai) ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ (Shilpa Shetty) ಪತಿ, ಉದ್ಯಮಿ ರಾಜ್ ಕುಂದ್ರಾ ಈಗ ತಮ್ಮ ಪತ್ನಿಗೆ ಕೋಟ್ಯಂತರ ಬೆಲೆ ಬಾಳುವ ಕೆಲವು ಆಸ್ತಿಗಳನ್ನು ನೀಡಿದ್ದಾರೆ. ಇದನ್ನು ಕೇಳಿ ಶಾಕ್​ ಆಗಬೇಡಿ. ಇದಕ್ಕೂ ಒಂದು ಕಾರಣವಿದೆ. ಅದನ್ನು ಮುಂದೆ ಹೇಳುತ್ತೇವೆ ನೋಡಿ. ಹೀಗೆ ಕೋಟಿ ಕೋಟಿ ಆಸ್ತಿ ಬರೆಯಲು ಅಸಲಿ ಕಾರಣವಾದರೂ ಏನು ಎಂದು ಎಲ್ಲರೂ ಕೇಳುತ್ತಿದ್ದಾರೆ. ಸೆಕ್ಸ್​ ರಾಕೆಟ್ (Sex Rocket)​ ಪ್ರಕರಣದ ಬಗ್ಗೆ ಶಿಲ್ಪಾ ಶೆಟ್ಟಿ ನನಗೆ ನನ್ನ ಗಂಡ ಏನು ಮಾಡುತ್ತಿದ್ದರು ಎಂದು ಗೊತ್ತಿಲ್ಲ ಎಂದು ಹೇಳಿದ್ದರು. ರಾಜ್​ ಕುಂದ್ರಾ ಜೈಲಿನಿಂದ ಹೊರ ಬಂದ ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ನೋಡಿದರೆ ಭಾರಿ ಬೆಲೆ ಬಾಳುವ ಆಸ್ತಿಗಳನ್ನು ರಾಜ್ ಕುಂದ್ರಾ, ಪತ್ನಿ ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ.

ಮುಂಬೈನಲ್ಲಿರುವ ಆಸ್ತಿ ಹೆಂಡ್ರಿ ಹೆಸ್ರಿಗೆ ಬರೆದ ರಾಜ್​ಕುಂದ್ರಾ!

ಉದ್ಯಮಿಯಾಗಿರುವ ರಾಜ್ ಕುಂದ್ರಾ ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಈಗ ಮುಂಬೈನಲ್ಲಿರುವ ಕೋಟ್ಯಾಂತರ ಮೌಲ್ಯದ ಕೆಲವು ಆಸ್ತಿಗಳನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ್ದಾರೆ. ಮುಂಬೈನ ಜುಹುವಿನಲ್ಲಿನ ಒಂದು ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಐದು ಫ್ಲ್ಯಾಟ್‌ಗಳನ್ನು ರಾಜ್ ಕುಂದ್ರಾ ಹೊಂದಿದ್ದರು. ಆ ಐದೂ ಫ್ಲ್ಯಾಟ್‌ಗಳನ್ನು ಶಿಲ್ಪಾ ಶೆಟ್ಟಿಗೆ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಐದು ಫ್ಲ್ಯಾಟ್​ಗಳ ಬೆಲೆ ಬರೋಬ್ಬರಿ 38.50 ಕೋಟಿ ರೂಪಾಯಿಗಳು. ಏಕಾಏಕಿ ಹೀಗೆ ಯಾಕೆ ಮಾಡಿದ್ದಾರೆ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಿಸ್​ ಇಲ್ದೇ ಪ್ರತಿದಿನ ಈ ಶಾಲೆಯಲ್ಲಿ ಅಪ್ಪುಗೆ ಪೂಜೆ.. ದೇವರ ರೂಪ ನೀವೇ `ರಾಜರತ್ನ’!

ಆಸಿ ನೊಂದಾವಣೆ ಶುಲ್ಕವೇ 1.92 ಕೋಟಿ! 

ಓಷನ್ ವೀವ್ ಹೆಸರಿನ ಐಷಾರಾಮಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳನ್ನು ರಾಜ್​ಕುಂದ್ರಾ ಹೆಂಡತಿ ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಈ ಆಸ್ತಿಯ ಒಟ್ಟು ವಿಸ್ತೀರ್ಣ 5996 ಚದರ ಅಡಿ. ಆಸ್ತಿಯು ಶಿಲ್ಪಾ ಶೆಟ್ಟಿ ಹೆಸರಿನ ಜನವರಿ 24 ರಂದು ನೊಂದಾವಣಿ ಆಗಿದೆ. ಆಸ್ತಿ ನೊಂದಾವಣಿ ಶುಲ್ಕವೇ 1.92 ಕೋಟಿ ಪಾವತಿಸಲಾಗಿದೆ. ಈಗ ನೊಂದಾವಣೆ ಆಗಿರುವ ಮನೆಯನ್ನೇ ತಮ್ಮ ವಾಸ್ತವ್ಯದ ವಿಳಾಸವೆಂದೂ ಈ ದಂಪತಿ ದಾಖಲೆಗಳಲ್ಲಿ ಹೇಳಿದ್ದಾರೆ ಎಂದು ಸ್ಕ್ವೇರ್‌ಫೀಟ್ ಇಂಡಿಯಾ ಹೇಳಿದೆ.

ಇದನ್ನೂ ಓದಿ: Gangubai Kathiawadi ಟ್ರೈಲರ್​ ರಿಲೀಸ್​, ಕಾಮಾಟಿಪುರದಲ್ಲಿ ಅಬ್ಬರಿಸಿದ ಆಲಿಯಾ ಭಟ್​!

ಶಿಲ್ಪಾ ಶೆಟ್ಟಿ ಮೇಲೂ ಕೇಳಿಬಂದಿತ್ತು ಆರೋಪ!

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸುಮಾರು 60 ದಿನಗಳ ಕಾಲ ಕುಂದ್ರಾ ಜೈಲು ವಾಸ ಅನುಭವಿಸಿದರು. ರಾಜ್ ಕುಂದ್ರಾ ಜೈಲು ಸೇರಿದ ಸಂದರ್ಭ ಶಿಲ್ಪಾ ಶೆಟ್ಟಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಇದೇ ಸಮಯದಲ್ಲಿ ಕೆಲವು ಮಂದಿ ಶಿಲ್ಪಾ ಶೆಟ್ಟಿ ಮೇಲೆಯೂ ವಂಚನೆ ಪ್ರಕರಣಗಳನ್ನು ದಾಖಲಿಸಿದರು. ಶಿಲ್ಪಾ ಶೆಟ್ಟಿ ವಿರುದ್ಧ ಕೆಲವು ಮಾಧ್ಯಮಗಳು ಮಾನಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಿದವು. ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರುಗಳು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯೂ ಆರೋಪಿ ಎಂದರು. ಈ ಪ್ರಕರಣದ ಬಗ್ಗೆ ಶಿಲ್ಪಾ ಶೆಟ್ಟಿ ಬಹುತೇಕ ಮೌನವಾಗಿಯೇ ಇದ್ದರು.
Published by:Vasudeva M
First published: