ಟಾಪ್ ಲೆಸ್ ಆಗೋಕೆ ರೆಡಿ ಇದ್ದವ್ರು ಮಾತ್ರ ಅಪ್ಲೈ ಮಾಡಿ...! ರಾಜ್ ಕುಂದ್ರಾ ಕಂಪೆನಿಯ ಅಗ್ರಿಮೆಂಟ್ ಕಾಪಿ ಲೀಕ್

Raj Kundra Porn Case: ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು.

ರಾಜ್ ಕುಂದ್ರಾ

ರಾಜ್ ಕುಂದ್ರಾ

 • Share this:
  ನವದೆಹಲಿ(ಜು.23): ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಒಟ್ಟಾರೆ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಟ್ರೀಮಿಂಗ್ ಅಪ್ಲಿಕೇಶನ್​​ ಹಾಟ್​ ಶಾಟ್ಸ್​ನ್ನು ಗೂಗಲ್ ಮತ್ತು ಆ್ಯಪಲ್​ ಪ್ಲೇ ಸ್ಟೋರ್​ ಡಿಲೀಟ್ ಮಾಡಿದೆ. ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ ಬಗ್ಗೆ ಪ್ರತಿದಿನ ಹೊಸ-ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ವಿವಾದಿತ ಹಾಟ್​ಶಾಟ್ಸ್ ​​ಕಂಪನಿಯು ಖ್ವಾಬ್​ ಪ್ರಾಜೆಕ್ಟ್​ಗಾಗಿ ಬೋಲ್ಡ್​ ಮತ್ತು ಟಾಪ್​ಲೆಸ್​ ಆರ್ಟಿಸ್ಟ್​​ಗಳು ಬೇಕಾಗಿದ್ದಾರೆ ಎಂದು ಇ-ಮೇಲ್ ಮಾಡಿತ್ತು ಎಂದು ತಿಳಿದು ಬಂದಿದೆ. ಈಗ ರಾಜ್ ಕುಂದ್ರಾ ಕಂಪನಿಯ ಆ ಅಗ್ರಿಮೆಂಟ್ ಕಾಪಿ ಲೀಕ್ ಆಗಿದೆ.

  ಹಾಟ್​ ಶಾಟ್ಸ್​​ ಕಂಪನಿಯು ಪರಾಸ್ ರಾಂಧವ ಮತ್ತು ಜ್ಯೋತಿ ಠಾಕೂರ್​ ಎಂಬುವವರಿಗೆ 2020ರ ಆಗಸ್ಟ್​ 14ರಂದು ಸಂಜೆ 5.25ಕ್ಕೆ ಮೇಲ್​ ಮಾಡಿದೆ. ಇ-ಮೇಲ್​ನಲ್ಲಿ, ಕಂಪನಿಯ ಮುಂಬರುವ ಖ್ವಾಬ್ ಪ್ರಾಜೆಕ್ಟ್​ಗಾಗಿ ಬೋಲ್ಡ್​ ಮತ್ತು ಟಾಪ್​ಲೆಸ್​ ಕಲಾವಿದರು ಬೇಕಾಗಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ ಇ-ಮೇಲ್​ನಲ್ಲಿ ಹಾಟ್​​ಶಾಟ್ಸ್​ ಕಂಪನಿ ಪ್ರಾಜೆಕ್ಟ್​ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿತ್ತು. ಗೈಡ್​​ಲೈನ್ಸ್​​ಗಳನ್ನು ನೀಡಿದ್ದ ಕಂಪನಿ, ಹೇಗೆ ಶೂಟಿಂಗ್ ನಡೆಯುತ್ತದೆ ಹಾಗೂ ಯಾವ ಆ್ಯಂಗಲ್​ನಲ್ಲಿ ಕ್ಯಾಮೆರಾ ಶೂಟ್ ಮಾಡಲಾಗುತ್ತದೆ ಎಂಬುದನ್ನು ಹೇಳಲಾಗಿತ್ತು.

  ಇದನ್ನೂ ಓದಿ:Karnataka Rains: ಮಲೆನಾಡಲ್ಲಿ ಮಳೆಯ ಆರ್ಭಟ; ಕುಸಿದ ರಸ್ತೆ- ಮನೆಗಳು, ಮುಳುಗಿದ ಸೇತುವೆಗಳು

  ಬೋಲ್ಟ್​ ವಿಡಿಯೋಗಳಲ್ಲಿ ನಟಿಸಿರುವ ಪ್ರಮುಖ ನಟಿ ಟಾಪ್​ಲೆಸ್​ ಆಗಿ ಹೋಗಿ ತನ್ನ ಬೆನ್ನನ್ನು ಕ್ಯಾಮೆರಾಗೆ ತೋರಿಸಲು ಸಿದ್ಧರಿರಬೇಕು ಎಂದು ಸಹ ಇ-ಮೇಲ್​ನಲ್ಲಿ ಹೇಳಲಾಗಿತ್ತು. ಅಪ್ಲಿಕೇಶನ್​​ನ ಮುಖ್ಯಸ್ಥರು ಖ್ವಾಬ್​ ಪ್ರಾಜೆಕ್ಟ್​​ಗಾಗಿ ಟೀಸರ್​​ಗಳ ಸಮಯವನ್ನು ನಿಗದಿಪಡಿಸಿದ್ದರು.  5.15 ಸೆಕೆಂಡ್​​ಗಳ ಸಾಮಾನ್ಯ ಟೀಸರ್ ಮೊದಲನೆಯದಾಗಿರುತ್ತದೆ. 60-90 ಸೆಕೆಂಡ್​ಗಳ ಬೋಲ್ಡ್​ ಟ್ರೈಲರ್​ನ್ನು ಅಪ್ಲಿಕೇಶನ್​ನಲ್ಲಿ ಇಡಲಾಗುತ್ತದೆ. 2-3ರಿಂದ ನಿಮಿಷಗಳ ಬೋಲ್ಡ್​ ಅಲ್ಲದ ವಿಡಿಯೋ ಹಾಡುಗಳನ್ನು ತೋರಿಸಲಾಗುತ್ತದೆ.

  ಪ್ಯಾರಾಸ್​ ರಾಂಧವ ಮತ್ತು ಜ್ಯೋತಿ ಠಾಕೂರ್​ ಅವರು ಮಾಡಿದ ವಿಡಿಯೋವನ್ನು ತಮ್ಮ ತಂಡ ಅಂಗೀಕರಿಸಿದರೆ ಅದನ್ನು ಖರೀದಿಸಲಾಗುವುದು. ಜೊತೆಗೆ 3 ಲಕ್ಷ ರೂ ಪಾವತಿಸಲಾಗುವುದು ಎಂದು ಹೇಳಲಾಗಿತ್ತು.

  ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಹೆಚ್ಚಾದ ಮಳೆಯ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್​ ಅಲರ್ಟ್​ ಘೋಷಣೆ

  ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್‌ ಭಕ್ಷಿ ಎಂಬಾತನ ಕೆನ್ರಿನ್‌ ಲಿಮಿಟೆಡ್‌ ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು.

  ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್‌ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು. ಹದಿನೆಂಟು ತಿಂಗಳ ಹಿಂದೆ ಶುರು ಮಾಡಿದ ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
  Published by:Latha CG
  First published: