Raj Kundra: ರಾಜ್​ ಕುಂದ್ರಾ ನೀಲಿ ಚಿತ್ರಗಳ ದಂಧೆ ಪ್ರಕರಣ: ಬೆದರಿಕೆ, ಬಲವಂತ, ಅತ್ಯಾಚಾರ ಮತ್ತು ಚಿತ್ರೀಕರಣದ ಆರೋಪ

ರಾಜ್​ ಕುಂದ್ರಾ ಅವರಿಗೆ ಅಶ್ಲೀಲ ವಿಡಿಯೋಗಳ ಕಂಟೆಂಟ್​ ಮಾರಾಟ ಮಾಡುತ್ತಿದ್ದ ಆರೋಪಿಗಳು ಚಿತ್ರೀಕರಣಕ್ಕೆ ಹೇಗೆ ಒತ್ತಾಯಿಸುತ್ತಿದ್ದರು ಎನ್ನುವ ಮಾಹಿತಿ ಬಯಲಾಗಿದೆ.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

  • Share this:

ಮುಂಬೈ : ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದ ಆರೋಪದ ಮೇಲೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ, ಬಾಲಿವುಡ್​ ನಟಿ ಶಿಲ್ಪಾಶೆಟ್ಟಿ ಪತಿ ರಾಜ್​ಕುಂದ್ರಾ ಪ್ರಕರಣಕ್ಕೆ ಹಲವಾರು ತಿರುವುಗಳು ಕಂಡು ಬರುತ್ತಿವೆ. ನೀಲಿ ಚಿತ್ರಗಳ ದಂಧೆ ಆರೋಪದಲ್ಲಿ ಸಿಲುಕಿರುವ ರಾಜ್​ ಕುಂದ್ರಾ ಆ್ಯಪ್​ ಮೂಲಕ ಸಿನಿಮಾ ವಿತರಣೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದು ಹಲವು ತಿಂಗಳಲ್ಲಿ ಆ್ಯಪ್​ ಮೂಲಕ ಲಾಭವನ್ನು ಕೂಡ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಆದರೆ ಇದೆಲ್ಲದ್ದಕ್ಕೂ ಮಿಗಿಲಾಗಿ ಈ ನೀಲಿ ಚಿತ್ರಗಳ ದಂಧೆಯಲ್ಲಿ ಸಂತ್ರಸ್ತೆಯರು ಅನೇಕ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹಲವರು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಡುತ್ತಿದೆ.


ಉದ್ಯಮಿ ರಾಜ್​ಕುಂದ್ರಾ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಅಚ್ಚರಿಯ ಮಾಹಿತಿಗಳು ಹೊರ ಬೀಳುತ್ತಿವೆ. ರಾಜ್​ ಕುಂದ್ರಾ ಅವರಿಗೆ ಅಶ್ಲೀಲ ವಿಡಿಯೋಗಳ ಕಂಟೆಂಟ್​ ಮಾರಾಟ ಮಾಡುತ್ತಿದ್ದ ಆರೋಪಿಗಳು ಚಿತ್ರೀಕರಣಕ್ಕೆ ಹೇಗೆ ಒತ್ತಾಯಿಸುತ್ತಿದ್ದರು ಎನ್ನುವ ಮಾಹಿತಿ ಬಯಲಾಗಿದೆ. ಈ ವಿಷಯವನ್ನು ಸಂತ್ರಸ್ತೆಯರು ಬಯಲು ಮಾಡಿದ್ದಾರೆ. ಇನ್ನೂ ವಿಡಿಯೋ ಮಾರಾಟಗಾರರು ಇದೇ ಕಂಟೆಂಟ್​ಗಳನ್ನು ಇನ್ನಿತರ ಆ್ಯಪ್​ಗಳಿಗೂ ಮಾರಾಟ ಮಾಡುತ್ತಿದ್ದರು ಎನ್ನುವ ಅಂಶವೂ ಕೂಡ ಬಹಿರಂಗವಾಗಿದೆ.


ಇನ್​​ಸ್ಟಾಗ್ರಾಮ್​ನಲ್ಲಿ ಆಡಿಷನ್​ ಬಗ್ಗೆ ಮಾಹಿತಿ ಪಡೆದುಕೊಂಡ ಸಂತ್ರಸ್ತೆ ಲೊಕೇಷನ್​ ತಲುಪಿದ್ದಾರೆ. ಮೊದಲು ಒಂದಷ್ಟು ಪೋಸ್​ಗಳನ್ನು ನೀಡಲು ಕೇಳಿದ್ದಾರೆ. ಆ ನಂತರ ಅಶ್ಲೀಲ ಭಂಗಿಯನ್ನು ಪ್ರದರ್ಶಿಸುವಂತೆ ಒತ್ತಾಯ ಹೇರಲಾಯಿತು ಎಂದು ಸಂತ್ರಸ್ತೆಯೊಬ್ಬರು ಹೇಳಿಕೊಂಡಿದ್ದಾರೆ.


ಈ ಎಲ್ಲಾ ಘಟನೆಗಳಿಂದ ಸಿಡಿದೆದ್ದ ಸಂತ್ರಸ್ತೆ ಆಡಿಷನ್​ ಕ್ರಮವನ್ನು ವಿರೋಧಿಸಿದ್ದಾಳೆ. ಆದರೆ ಆರೋಪಿಗಳು ಕಾನೂನು ಕ್ರಮ ಮತ್ತು ಮೊಕದ್ದಮ್ಮೆ ಹೂಡುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಇಡೀ ದಿನದ ಸಂಪೂರ್ಣ ಶೂಟಿಂಗ್​ ವೆಚ್ಚವನ್ನು ಭರಿಸುವಂತೆ ಹೇಳಿದ್ದಾರೆ. ಆದರೆ ಲಾಕ್​ಡೌನ್​ ಪರಿಣಾಮವಾಗಿ ಅತಂತ್ರ ಆರ್ಥಿಕ ಪರಿಸ್ಥಿತಿಯಲ್ಲಿದ್ದ ಕಾರಣ ಈ ಕೆಲಸಕ್ಕೆ ಒಪ್ಪಿದ್ದಾಗಿ ಮತ್ತೊಬ್ಬ ಸಂತ್ರಸ್ತೆ ತಿಳಿಸಿದ್ದಾರೆ.


ಇದನ್ನು ಓದಿ: ರಾಜ್​ ಕುಂದ್ರಾಗೆ ಜೈಲೇ ಗತಿ; ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

ಇನ್ನೂ ಸಂತ್ರಸ್ತೆ ಆಡಿಷನ್​ಗೆ ತೆರಳಿದಾಗ ಮೊದ ಮೊದಲು ಸ್ಕ್ರಿಪ್ಟ್​​ ನೀಡಲಾಯಿತು. ಬಳಿಕ ರಾಣಿಯ ಪಾತ್ರ ನಿರ್ವಹಿಸುವಂತೆ ತಿಳಿಸಲಾಯಿತು. ತಂಡದ ಮಾತಿನಂತೆ ಸಂತ್ರಸ್ತೆ ಶಾಟ್​ಗೆ ರೆಡಿಯಾಗಿ ಬಂದಾಗಲೇ ಆಕೆಗೆ ನಡೆಯುತ್ತಿರುವುದು ಏನು ಎನ್ನುವ ಅಂಶ ಮನದಟ್ಟಾಯಿತು ಎಂದಿದ್ದಾರೆ.


ವಿಷಯ ತಿಳಿದ ಕೂಡಲೇ ಸಂತ್ರಸ್ತೆ ಆಡಿಷನ್​​ನಿಂದ ಹಿಂದೆ ಸರಿದಿದ್ದಾರೆ. ಆದರೆ ಆರೋಪಿಗಳು ಬ್ಲ್ಯಾಕ್​ ಮೇಲ್​​ ತಂತ್ರವನ್ನು ಅನುಸರಿಸಿ ಆಕೆಯನ್ನು ಬಿಡಲಿಲ್ಲ. ಪರಿಸ್ಥಿತಿ ಬಿಗಡಾಯಿಸಿದಾಗ ಆಕೆ ಅಳುವುದಕ್ಕೆ ಆರಂಭಿಸಿದ್ದಾರೆ. ಆದರೆ ಆರೋಪಿಗಳು ಅಳುವುದನ್ನು ಪರಿಗಣಿಸದೇ, ಕಣ್ಣೀರಿನ ಕಲೆ ಕಾಣದಂತೆ ಹೆಚ್ಚಿನ ಮೇಕಪ್​ ಹಚ್ಚಿಕೊಂಡು ಶೂಟಿಂಗ್​ ಮಾಡಲು ಒತ್ತಾಯ ಹೇರಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.


ಈ ಎಲ್ಲಾ ಘಟನೆಗಳ ಬಳಿಕ ಸಂತ್ರಸ್ತೆ ಪೊಲೀಸ್​ ಠಾಣೆಗೆ ವಿಷಯ ಮುಟ್ಟಿಸಿದ್ದಾಳೆ. ವಿಡಿಯೋದಲ್ಲಿರುವ ನಟ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಆರೋಪಿಗಳು ಇದನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಶೂಟಿಂಗ್​ ಸಮಯದಲ್ಲಿ ಆಕೆ ಅಳುವನ್ನು ನಿಯಂತ್ರಿಸಿಕೊಂಡು ಹಲವಾರು ಬಾರಿ ಮೇಕಪ್ ಹಾಕಿಕೊಳ್ಳಬೇಕಿತ್ತು ಎನ್ನುವ ಅಂಶವನ್ನು ತಿಳಿಸಿದ್ದಾಳೆ.


ಇನ್ನೂ ಚಿತ್ರೀಕರಣದ ಬಳಿಕ ಆಕೆಗೆ 10,000 ರೂಗಳ ಚಿಕ್ಕ ಮೊತ್ತವನ್ನು ಸಂಭಾವನೆಯಾಗಿ ನೀಡಲಾಯಿತು. ಅಲ್ಲಿಂದ ಹೊರಡುವಂತೆ ಆಕೆಗೆ ಹೇಳಲಾಯಿತು ಎಂದು ಸಂತ್ರಸ್ತೆ ವಿವರಿಸಿದ್ದಾರೆ.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: