ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದೆ, ರಾಜ್​ ಏನ್​ ಮಾಡುತ್ತಿದ್ರು ಅಂತ ತಿಳಿಯಲಿಲ್ಲ ಎಂದ Shilpa Shetty

ಪತಿ ರಾಜ್ ಕುಂದ್ರಾ ಅವರ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದಾಗ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ನಾನು ನನ್ನ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಿದೆ. ಪತಿ ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದ್ದಾರೆ. 

ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ.

ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾ.

  • Share this:
ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಕುಟುಂಬ ತುಂಬಾ ಸಂಕಷ್ಟದಲ್ಲಿದೆ. ಅದ್ಕಕಾಗಿಯೇ ಶಿಲ್ಪಾ ಶೆಟ್ಟಿ ಅವರು ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟು ಬಂದಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ (Raj Kundra) ಅವರು ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದಾರೆ. ಇಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ನ್ಯಾಯಾಲಯಕ್ಕೆ 1,500 ಪುಟಗಳ ಪೂರಕ ಚಾರ್ಜ್‌ಶೀಟ್ (Charge Sheet) ಸಲ್ಲಿಸಿದೆ‌. ಈ ಚಾರ್ಜ್‌ಶೀಟ್ ನಲ್ಲಿ ನಟಿಯರಾದ ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾ (Sharlin Chopra) ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ. 

ಪತಿ ರಾಜ್ ಕುಂದ್ರಾ ಅವರ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದಾಗ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ನಾನು ನನ್ನ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಿದೆ. ಪತಿ ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದ್ದಾರೆ.

ಅಶ್ಲೀಲ ಚಿತ್ರಗಳ ಪ್ರಕಟಣೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಮತ್ತಿತರರ ವಿರುದ್ಧ ಫೆಬ್ರವರಿಯಲ್ಲಿ ಎಫ್ಐಆರ್ (FIR) ದಾಖಲಾಗಿತ್ತು. ಈ ಎಫ್ಐಆರ್ ಆಧರಿಸಿ ಮುಂಬೈ ಪೊಲೀಸರು (Mumbai Police) ಜುಲೈ 19 ರಂದು ರಾಜ್ ಕುಂದ್ರಾ ಸೇರಿದಂತೆ 11 ಜನರನ್ನು ಬಂಧಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಕಾರಣವಾಗುವ ಮೊದಲು ಐದು ತಿಂಗಳ ಸುದೀರ್ಘವಾದ ತನಿಖೆ ನಡೆಸಿ ಆರೋಪಿಗಳು ಅಶ್ಲೀಲ ವಿಷಯವನ್ನು ಹಾಟ್​ಹಿಟ್​ ಚಲನಚಿತ್ರಗಳು ಮತ್ತು ಹಾಟ್‌ಶಾಟ್‌ಗಳಂತಹ ಚಂದಾದಾರಿಕೆ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಹಾಟ್​ಹಿಟ್ ಮೂವೀಸ್, ನ್ಯೂಫ್ಲಿಕ್ಸ್ ಮತ್ತು ಎಸ್ಕೇಪನೋವ್‌ಗಳ ಮೂಲಕ ವಿತರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ Boycott Shah Rukh Khan: ಕಾರಣವೇನು ಗೊತ್ತಾ..?

ಆರೋಪಿಗಳು ಚಲನಚಿತ್ರ (Cinema) ಅಥವಾ ವೆಬ್ ಸರಣಿಗಳಲ್ಲಿ (Web Seris) ಅವಕಾಶದ ದೊಡ್ಡ ನಿರೀಕ್ಷೆಯಲ್ಲಿದ್ದ ಕಲಾವಿದರಿಗೆ ಬೆದರಿಕೆ ಹಾಕಿದ್ದರು ಎಂದು ಖಚಿತಪಡಿಸಿಕೊಳ್ಳಲಾಗಿತ್ತು. ಈಗ ಚಾರ್ಜ್‌ಶೀಟ್ ನಲ್ಲಿ ಇವೆಲ್ಲವನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಜುಲೈ 19 ರಂದು ರಾಜ್ ಕುಂದ್ರಾ ಸೇರಿ 11 ಜನರ ಬಂಧನವಾಗಿತ್ತು. ಆಗಸ್ಟ್ 2ರಂದು ಯಾವುದೇ ನೋಟಿಸ್ ನೀಡದ ಕಾರಣ ತಮ್ಮ ಬಂಧನ ಕಾನೂನುಬಾಹಿರ ಎಂದು ರಾಜ್ ಕುಂದ್ರಾ ಮತ್ತು ಆತನ ಸಹಚರ ರಯಾನ್ ಥಾರ್ಪೆ ಸಲ್ಲಿಸಿದ ಮನವಿಯ ಮೇಲೆ ಬಾಂಬೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತು. ಆಗಸ್ಟ್ 5ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ಥೋರ್ಪೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಆಗಸ್ಟ್ 8ರಂದು ಬಾಂಬೆ ಹೈಕೋರ್ಟ್ ಕೂಡ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಸ್ಟಡಿಯಿಂದ ಬಿಡುಗಡೆ ಕೋರಿ ನೀಡಿದ್ದ ರಿಮಾಂಡ್ ಆದೇಶವನ್ನು ಎತ್ತಿಹಿಡಿಯಿತು. ಆಗಸ್ಟ್ 13ರಂದು ರಾಜ್ ಕುಂದ್ರಾ ಪ್ರಮುಖ ಆರೋಪಿಯಾಗಿರುವ ಪೋರ್ನ್ ರಾಕೆಟ್ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಆಗಸ್ಟ್ 18ರಂದು ಅಶ್ಲೀಲ ಚಲನಚಿತ್ರಗಳ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕುಂದ್ರಾ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡಿತು. ಆಗಸ್ಟ್ 25ರಂದು ಅಶ್ಲೀಲ ಚಲನಚಿತ್ರಗಳ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಉದ್ಯಮಿ ಕುಂದ್ರಾ ಮತ್ತು ಆತನ ಸಹವರ್ತಿ ಉಮೇಶ್ ಕಾಮತ್ ಅವರಿಗೆ ಸೆಪ್ಟೆಂಬರ್ 8 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿತು.

Sherlyn Chopra, Raj Kundra, Shilpa Shetty, ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರ, ಶಿಲ್ಪಾ ಶೆಟ್ಟಿ, Sherlyn Chopra Urges Shilpa Shetty to Accept Her Mistakes
ರಾಜ್​ ಕುಂದ್ರಾ -ಶಿಲ್ಪಾ ಶೆಟ್ಟಿ ಹಾಗೂ ಶರ್ಲಿನ್​ ಚೋಪ್ರಾ


ಸೆಪ್ಟೆಂಬರ್ 13ಕ್ಕೆ ಬಾಂಬೆ ಹೈಕೋರ್ಟ್ ಸೈಬರ್ ಕ್ರೈಂ ಸೆಲ್ ನಿಂದ ದಾಖಲಾಗಿರುವ ಆಪಾದಿತ ಪೋರ್ನ್ ಫಿಲ್ಮ್ ರಾಕೆಟ್ ಪ್ರಕರಣದಲ್ಲಿ ಸೆಪ್ಟೆಂಬರ್ 20 ರವರೆಗೆ ಬಂಧನದ ವಿರುದ್ಧ ರಕ್ಷಣೆ ವಿಸ್ತರಿಸಿತು. ಸೆಪ್ಟೆಂಬರ್ 15ರಂದು ರಾಜ್ ಕುಂದ್ರಾ ಮತ್ತು ಸಹಚರರ ವಿರುದ್ಧ ಅಶ್ಲೀಲ ಚಲನಚಿತ್ರಗಳ ಪ್ರಕರಣದಲ್ಲಿ ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಆತನ ಸಹವರ್ತಿ ರಯಾನ್ ಥಾರ್ಪ್ ವಿರುದ್ಧದ ಸುಮಾರು 1,500 ಪುಟಗಳ ಚಾರ್ಜ್ ಶೀಟ್ ಅನ್ನು ಅಪರಾಧ ವಿಭಾಗವು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಯಿತು. ಚಾರ್ಜ್‌ಶೀಟ್ ನಲ್ಲಿ ರಾಜ್ ಕುಂದ್ರಾ ಅವರನ್ನು ಪ್ರಕರಣದ "ಮುಖ್ಯ ಸಂಚಾಲಕ" (Main facilitator) ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಾಲಿವುಡ್​ನ ಬಿಕಿನಿ ಬ್ಯೂಟಿ Disha Patani ಸೆಲ್ವಾರ್​ನಲ್ಲಿ ಕಂಡಾಗ...!

ಸದ್ಯ ಜೈಲಿನಲ್ಲಿರುವ ಉದ್ಯಮಿ ರಾಜ್​ ಕುಂದ್ರಾ ಅವರು ಜಾಮೀನು ಅರ್ಜಿ ವಾಪಸ್ ಪಡೆದಿದ್ದಾರಂತೆ. ಮುಂಬೈ ಸೆಷನ್​​ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ರಾಜ್ ಕುಂದ್ರಾಗೆ ಜಾಮೀನು ನಿರಾಕರಿಸಿದ ಹಿನ್ನಲೆಯಲ್ಲಿ ಅರ್ಜಿ ವಾಪಸ್ ಪಡೆದು, ಹೊಸ ಅರ್ಜಿ ಸಲ್ಲಿಸಿದ್ದಾರಂತೆ ರಾಜ್​ ಕುಂದ್ರಾ.
Published by:Anitha E
First published: