Raj Kundra: ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ..!

ರಾಜ್​ ಕುಂದ್ರಾ ಅವರು ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ. ಬಾಲಿವುಡ್​ನಷ್ಟೇ ದೊಡ್ಡದಾಗಿ ಈ ಅಶ್ಲೀಲ ಸಿನಿಮಾಗಳ ಉದ್ಯಮವನ್ನು ಬೆಳೆಸಬೇಕು ಅನ್ನೋದು ರಾಜ್ ಕುಂದ್ರಾ ಪ್ಲಾನ್​ ಆಗಿತ್ತಂತೆ.

ರಾಜ್​ ಕುಂದ್ರಾ

ರಾಜ್​ ಕುಂದ್ರಾ

  • Share this:
ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪಾರ್ನ್​ ವಿಡಿಯೋಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿಯಾಗಿರುವ ರಾಜ್​ ಕುಂದ್ರಾ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿತ್ತು. ಬಂಧಿಸಿದ್ದ ರಾಜ್​ ಕುಂದ್ರಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು.  ಪೊಲೀಸರ ಮನವಿಗೆ ಒಪ್ಪಿದ ನ್ಯಾಯಾಲಯ ರಾಜ್​ ಕುಂದ್ರಾ ಅವರನ್ನು ಜು.23ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ನೀಡಿತು. ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ದಿನ ಕಳೆದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.ಅಕ್ಟೋಬರ್​ನಲ್ಲಿ ನಡೆದ ಕೆಲವು ವಾಟ್ಸ್​ಆ್ಯಪ್​ ಚಾಟ್​ ವಿವರಗಳು ಹೊರ ಬಂದಿವೆ. ಈ ಅಶ್ಲೀಲ ಸಿನಿಮಾಗಳ ವ್ಯವಹಾರಗಳಿಂದ ರಾಜ್​ ಕುಂದ್ರಾ ತುಂಬಾ ಹಣ ಗಳಿಸಿದ್ದಾರೆ ಅನ್ನೋದು ಸಹ ಅವರ ಬಂಧನದ ನಂತರ ಬಹಿರಂಗವಾಗಿದೆ.

ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ರಾಜ್​ ಕುಂದ್ರಾ ಅವರು ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ. ಬಾಲಿವುಡ್​ನಷ್ಟೇ ದೊಡ್ಡದಾಗಿ ಈ ಅಶ್ಲೀಲ ಸಿನಿಮಾಗಳ ಉದ್ಯಮವನ್ನು ಬೆಳೆಸಬೇಕು ಅನ್ನೋದು ರಾಜ್ ಕುಂದ್ರಾ ಪ್ಲಾನ್​ ಆಗಿತ್ತು ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ ಎಂದು ಇಂಗ್ಲಿಷ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಈ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರೇ ಪ್ರಮುಖ ಸಂಚುಕೋರ ಎಂದು ಪರಿಗಣಿಸಿರುವ ಪೊಲೀಸರು, ‘ಹಾಟ್‌ಶಾಟ್ಸ್’ ಆ್ಯಪ್ ಮೂಲಕ ಅಶ್ಲೀಲ ವಿಡಿಯೋಗಳ ಪ್ರಸಾರದಲ್ಲಿ ಕುಂದ್ರಾ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ‘ಹಾಟ್‌ಶಾಟ್‌’ ಆ್ಯಪ್​ ಪ್ರಸ್ತುತ ಎಲ್ಲಿಯೂ ಸಿಗುವುದಿಲ್ಲ, ಇದನ್ನು ಗೂಗಲ್​ ಪ್ಲೇಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ಗಳು ತೆಗೆದು ಹಾಕಿವೆ. ಕುಂದ್ರಾ ಹಾಟ್​ಶಾಟ್​ ಆ್ಯಪ್​ಗೆ ಬೇಕಾದ ಕಟೆಂಟ್​ಗಳನ್ನು ಕೊಡುತ್ತಿದ್ದರು ಹಾಗೂ ಯುಕೆಯಲ್ಲಿ ಇರುವ ತನ್ನ ವಿಹಾನ್​ ಇಂಡಸ್ಟ್ರೀಸ್ ಕಚೇರಿಯಿಂದ ನಿಯಂತ್ರಿಸಲಾಗುತ್ತಿತ್ತು ಎಂದು ಹೇಳಲಾಗಿದೆ.. 2019 ರಲ್ಲಿ ‘ಹಾಟ್‌ಶಾಟ್‌’ ಆ್ಯಪ್​ಅನ್ನು $25,000 ಡಾಲರ್​ಗೆ ಮಾರಾಟ ಮಾಡಿದ್ದೇನೆ ಎಂದು ಕುಂದ್ರಾ ಹೇಳಿದ್ದರು.

ಇದನ್ನೂ ಓದಿ: Genelia Dsouza: ತುಂಡುಡುಗೆಯಲ್ಲಿ ಮಡದಿಯನ್ನು ನೋಡಿ ನನ್ನ ಹುಡುಗಿ ಹಾಟ್​ ಎಂದ ನಟ ರಿತೇಶ್​..!

ಕುಂದ್ರಾ ತನ್ನ ಆ್ಯಪ್ ‘ಹಾಟ್‌ಶಾಟ್ಸ್’ ಅನ್ನು ಯುಕೆ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಆದರೆ ಇದು ಅವವ ಸಂಬಂಧಿ ಪ್ರದೀಪ್ ಬಕ್ಷಿ ಒಡೆತನದಲ್ಲಿ ಇದೆ ಎಂದು ಹೇಳಿದ್ದರು. ಅದರ ಎಲ್ಲಾ ಚಟುವಟಿಕೆಗಳು ಮುಂಬೈಯಿಂದ ನಿಯಂತ್ರಿಸಲ್ಪಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕುಂದ್ರಾ ಮತ್ತು ಆತನ ಸಹಚರ ರಿಯಾನ್ ಥಾರ್ಪ್ ಅವರನ್ನು ಜುಲೈ 23 ರವರೆಗೆ ಬಂಧನದಲ್ಲಿ ಇಡಲಾಗಿದೆ.

ಇದನ್ನೂ ಓದಿ: Bigg Boss Kannada Season 8: ಅರವಿಂದ್​-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!

ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಬುಧವಾರ ಹೇಳಿದ್ದಾರೆ. ಈ ಅಶ್ಲೀಲ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ಅವರು ಭಾಗಿಯಾಗಿಲ್ಲ ಎನ್ನುವದು ಇನ್ನಷ್ಟೇ ತಿಳಿಯಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ . ಆದರೆ ನಾವು ಇನ್ನೂ ವಿಶೇಷ ತಂಡ ರಚಿಸಿ ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಮುಂಬೈ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದ್ದಾರೆ.

ಸದ್ಯಕ್ಕೆ ಶಿಲ್ಪಾ ಶೆಟ್ಟಿಗೆ ಸಮನ್ಸ್ ಇಲ್ಲ

ನಾವು ಶೆಟ್ಟಿ ಮತ್ತು ಕುಂದ್ರಾ ಜಂಟಿಯಾಗಿ ಹೊಂದಿರುವ ಅವರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದೇವೆ. ಹಾಗೂ ಆದಾಯದ ಮೂಲಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಹಾಗೂ ಇದನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಸ್ತುತ, ಕುಂದ್ರಾ ಅವರು ಮುಖ್ಯ ಆರೋಪಿಯಾಗಿರುವುದರಿಂದ ಅವರೇ ಪ್ರಸ್ತುತ ತನಿಖೆಯ ಕೇಂದ್ರಬಿಂದುವಾಗಿದ್ದಾರೆ ಎಂದು ಒತ್ತಿಹೇಳಿದ ಅಧಿಕಾರಿ, ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ ಈಗ ಯಾವುದೇ ಸಮನ್ಸ್ ನೀಡುವುದಿಲ್ಲ ಎಂದು ಹೇಳಿದರು.
Published by:Anitha E
First published: