ಮನರಂಜನೆಯ ಹೆಸರಿನಲ್ಲಿ ಅಂಗಾಂಗ ಪ್ರದರ್ಶನ: ಇದೇ ರಾಜ್‌ ಕುಂದ್ರಾ-ಒಟಿಟಿ ಆ್ಯಪ್‌ಗಳ ಹಣ ಮಾಡುವ ಪ್ಲ್ಯಾನ್..!

ಕೆಲವು ಆ್ಯಪ್‌ಗಳು ಬರೋಬ್ಬರಿ 3,500 ಕೋಟಿ ಹಣವನ್ನು ಮನರಂಜನೆಯ ಹೆಸರಿನಲ್ಲಿ ಗಳಿಸಿವೆ ಎಂದರೆ ನೀವು ನಂಬಲೇಬೇಕು. ಆ್ಯಪ್‌ಗಳಲ್ಲಿ ಬರುವ ಕೆಲವು ವೆಬ್ ಸೀರಿಸ್‌ಗಳು ಸೆನ್ಸರ್‌ಶಿಪ್ ಪರವಾನಗಿ ಪಡೆದುಕೊಂಡು ಪ್ರದರ್ಶನ ಕಾಣುತ್ತಿವೆಯೇ ಎಂಬುದು ಸಂಶಯಾತ್ಮಕವಾಗಿದೆ.

ರಾಜ್ ಕುಂದ್ರಾ

ರಾಜ್ ಕುಂದ್ರಾ

  • Share this:
ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮನರಂಜನೆಯ ಹೆಸರಿನಲ್ಲಿ ಅಶ್ಲೀಲ ಚಿತ್ರಗಳ ಪ್ರದರ್ಶನ ಈಗ ಬೆಳಕಿಗೆ ಬಂದಿದೆ. ಆದರೂ ಕೆಲವು ಒಟಿಟಿ ಆ್ಯಪ್‌ಗಳು ಬಹಿರಂಗವಾಗಿ ಅಶ್ಲೀಲ  ಹಾಗೂ ಬೋಲ್ಡ್​ ಚಿತ್ರಗಳ ಸರಣಿಗಳನ್ನೇ ವೀಕ್ಷಕರಿಗೆ ಒದಗಿಸುತ್ತಿದೆ. ಈ ಆ್ಯಪ್‌ಗಳು ಟಾರ್ಗೆಟ್ ಮಾಡಿಕೊಂಡಿರುವುದೇ ಮೊಬೈಲ್ ಫೋನ್‌ ಹಾಗೂ 4 ಜಿ ನೆಟ್‌ವರ್ಕ್ ಹೊಂದಿರುವ ಮನರಂಜನೆ-ಬಯಕೆ ಇರುವ ಬಳಕೆದಾರರನ್ನು. ಲಾಕ್‌ಡೌನ್ ಸಮಯದಲ್ಲಿ ಮನರಂಜನೆಗೆ ಸೀಮಿತ ಅವಕಾಶವಿತ್ತು. ಆ ಸಂದರ್ಭದಲ್ಲಿ ಕೈಗೆಟಕುವ ಬೆಲೆಗಳಲ್ಲಿ ಈ ಆ್ಯಪ್‌ಗಳು ಭರಪೂರ ಮನರಂಜನೆ ಒದಗಿಸುವ ಪ್ರಯತ್ನ ನಡೆಸಿದವು. ಸರ್ಕಾರದ ನಿರ್ಬಂಧನೆಗಳ ನಡುವೆಯೂ ಅಶ್ಲೀಲ ಚಿತ್ರಗಳ ಪ್ರಸಾರ ಎಗ್ಗಿಲ್ಲದೆ ನಡೆಯುತ್ತಿತ್ತು. ನಾವು ಪ್ರಸಾರ ಮಾಡುವ ವಿಷಯಗಳಲ್ಲಿ ಅಶ್ಲೀಲ ವಿಷಯಗಳಿಲ್ಲ ಎಂಬುದನ್ನು ಹೇಳುತ್ತಲೇ ಈ ಆ್ಯಪ್‌ಗಳು ಬಳಕೆದಾರರಿಗೆ  ಬೋಲ್ಡ್​ ಕಂಟೆಟ್​ ಇರುವ ವೆಬ್ ಸರಣಿಗಳ ಪ್ರದರ್ಶನ ಒದಗಿಸಿದವು. ಅಂತೆಯೇ ಕೈತುಂಬಾ ಹಣವನ್ನು ಬಾಚಿಕೊಂಡವು.

ಈ ಆ್ಯಪ್‌ಗಳು ಬರೋಬ್ಬರಿ 3,500 ಕೋಟಿ ಹಣವನ್ನು ಮನರಂಜನೆಯ ಹೆಸರಿನಲ್ಲಿ ಗಳಿಸಿವೆ ಎಂದರೆ ನೀವು ನಂಬಲೇಬೇಕು. ಆ್ಯಪ್‌ಗಳಲ್ಲಿ ಬರುವ ಕೆಲವು ವೆಬ್ ಸೀರಿಸ್‌ಗಳು ಸೆನ್ಸರ್‌ಶಿಪ್ ಪರವಾನಗಿ ಪಡೆದುಕೊಂಡು ಪ್ರದರ್ಶನ ಕಾಣುತ್ತಿವೆಯೇ ಎಂಬುದು ಸಂಶಯಾತ್ಮಕವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಪ್ರಮಾಣೀಕೃತ ಸಿನಿಮಾಗಳು ನಿರ್ಬಂಧಗಳಡಿಯಲ್ಲಿದ್ದರೆ ಇಂತಹ ಆ್ಯಪ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಅಶ್ಲೀಲ ಹಾಗೂ ಬೋಲ್ಡ್​ ವೆಬ್ ಸೀರಿಸ್‌ಗಳು ಎಗ್ಗಿಲ್ಲದ ಮನರಂಜನೆಯನ್ನು ನೀಡಿದವು. ಜೊತೆಗೆ ಉತ್ತಮ ಮಾರುಕಟ್ಟೆಯನ್ನು ಸ್ಥಾಪಿಸಿದವು ಎಂದು ಇಂಗ್ಲಿಷ್ ವೆಬ್ ಸೈಟ್ ಒಂದು ವರದಿ ಮಾಡಿದೆ.

OTT Porn, Apps, 4G, Raj kundra, web-series, Pornography, ಒಟಿಟಿ ಪೋರ್ನ್, ಆ್ಯಪ್‌ಗಳು, ರಾಜ್ ಕುಂದ್ರಾ, ವೆಬ್-ಸರಣಿಗಳು, ಅಶ್ಲೀಲತೆ
ವೆಬ್ ಸರಣಿಯ ಪೋಸ್ಟರ್​


ರಾಜ್ ಕುಂದ್ರಾ ನಡೆಸುತ್ತಿದ್ದ ಸಾಫ್ಟ್‌ವೇರ್ ಕಂಪೆನಿ ಸ್ಟಾರ್‌ಗಳು ಹಾಗೂ ಇತರ ಗಣ್ಯ ವ್ಯಕ್ತಿಗಳಿಗಾಗಿ ಆ್ಯಪ್‌ಗಳನ್ನು ನಿರ್ಮಿಸುತ್ತಿತ್ತು. ಕೆಲಸವಿಲ್ಲದೆ ಖಾಲಿಯಾಗಿದ್ದ ನಟ ನಟಿಯರು ತಮ್ಮದೇ ಆದ ವಿಡಿಯೋಗಳು ಹಾಗೂ ಚಿತ್ರಗಳನ್ನೇ ಅಭಿಮಾನಿಗಳಿಗೆ ಮುಕ್ತವಾಗಿ ಪ್ರದರ್ಶಿಸಿದಾಗ ಸ್ಟಾರ್‌ಗಳಂತೆಯೇ ದುಡ್ಡು ಮಾಡಬಹುದು ಎಂಬುದನ್ನು ಮನಗಂಡರು. ರಾಜ್ ಕುಂದ್ರಾರ ಆರ್ಮ್ಸ್‌ಪ್ರೈಮ್ ಕಂಪೆನಿಯು ಯುವ ನಟಿಯರಿಗಾಗಿ ಆ್ಯಪ್‌ಗಳನ್ನು ತಯಾರಿಸುತ್ತಿತ್ತು ಹಾಗೂ ಈ ಆ್ಯಪ್‌ಗಳ ಮೂಲಕ ಬಳಕೆದಾರರು ನಟಿಯರ ವೈಯಕ್ತಿಕ ಜೀವನವನ್ನು ನೋಡಬಹುದಿತ್ತು. ಹೀಗೆ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ತಯಾರಿಯಲ್ಲಿ ಮುಕ್ತವಾಗಿ ತೊಡಗಿಕೊಂಡಿದ್ದರು. ಇನ್ನು ಇಂತಹ ವೆಬ್ ಸೀರಿಸ್‌ಗಳಲ್ಲಿ ನಟಿಸುವವರು ಕೂಡ ಮುಕ್ತವಾಗಿ ತಾವು ನಟಿಸುವ ವೆಬ್ ಸೀರಿಸ್‌ ಘೋಷಣೆಗಳನ್ನು ಸಾಮಾಜಿಕ ತಾಣದಲ್ಲಿ ಮಾಡಿದರು.

ಇದನ್ನೂ ಓದಿ: Raj Kundra Arrest: ರಾಜ್​ ಕುಂದ್ರಾ ಪೊಲೀಸ್​ ಕಸ್ಟಡಿ ಅವಧಿ ವಿಸ್ತರಣೆ: ಮೌನ ಮುರಿದ ನಟಿ ಶಿಲ್ಪಾ ಶೆಟ್ಟಿ..!

ಹೀಗೆ ಒಂದು ರೀತಿಯಲ್ಲಿ ಅಶ್ಲೀಲತೆಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಬೆಂಬಲ ನೀಡಿದ ಬೆನ್ನಲ್ಲೇ ರಾಜ್ ಕುಂದ್ರಾ ಕೂಡ ಸ್ವತಂತ್ರವಾಗಿ ಪೋರ್ನ್ ವಿಡಿಯೋಗಳ ದಂಧೆಗೆ ಕೈಹಾಕಿದರು. ಜಲ್ದಿ ಲೈವ್ ಹೆಸರಿನ ಸ್ಟ್ರೀಮಿಂಗ್ ಒಂದನ್ನು ರಾಜ್ ಆರಂಭಿಸಿದರು. ಇದರಲ್ಲಿ ಯಾರು ಬೇಕಾದರೂ ಲೈವ್ ಆಗಿ ಬಂದು ಫಾಲೋವರ್‌ಗೆ ಕನಿಷ್ಠ 30 ಗಂಟೆಗಳವರೆಗೆ 10 ದಿನಗಳ ಕಾಲ ಪಾಲ್ಗೊಂಡರಾಯಿತು. ತಿಂಗಳಿಗೆ 13,000 ಕ್ಕಿಂತಲೂ ಹೆಚ್ಚಿನ ಹಣವನ್ನು ಡಾಲರ್‌ಗಳಲ್ಲಿ ಗಳಿಸುವ ಆಮಿಷ ಕೂಡ ಒಡ್ಡಲಾಯಿತು. ಹೆಚ್ಚಿನ ಮಹಿಳೆಯರು, ಹುಡುಗಿಯರು ಇದರಲ್ಲಿ ಹಣ ಗಳಿಸಲು ಆರಂಭಿಸಿದರು. ಇನ್ನು ಬೋಲ್ಡ್ ಅಭಿನಯ ನೀಡಿದರೆ ಲಕ್ಷಾಂತರ ಹಣ ಗಳಿಸಬಹುದು ಎಂಬುದನ್ನು ನಟಿಸುವವರು ಮನಗಂಡರು.

ತನ್ನ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲವೆಂದು ಗೂಗಲ್ ಪ್ಲೇ ಈ ಆ್ಯಪ್ ಡಿಲೀಟ್ ಮಾಡಿದರೂ ಬೇರೆ ಹೆಸರಿನಿಂದ ಪುನಃ ಚಲಾವಣೆಗೆ ಬಂದಿತು. ಹೀಗೆ ಕೋಟ್ಯಂತರ ಹಣ ಗಳಿಸಲು ಆರಂಭಿಸಿತು. ಪಾಲ್ಗಾರ್‌ ನಿವಾಸಿಯೊಬ್ಬರು ಮೊಬೈಲ್ ಫೋನ್‌ನಲ್ಲಿ ಈ ಅಶ್ಲೀಲ ದೃಶ್ಯಾವಳಿಗಳ ಕುರಿತು ದೂರು ನೀಡಿದ್ದು, ಇದರಿಂದ ಮಕ್ಕಳಿಗೂ ಸುಲಭವಾಗಿ ದೊರೆಯುತ್ತಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾ ಪ್ರಕಾಶ್​ ವಾರಿಯರ್​ ಸಿಟ್ಟಾಗಿದ್ದೇಕೆ ಗೊತ್ತಾ..?

ಈ ಸಮಯದಲ್ಲಿ ಸೈಬರ್ ಸೆಲ್ ಕ್ರಮ ಕೈಗೊಂಡಿತು ಹಾಗೂ ಮುಕ್ತವಾಗಿ ಮೊಬೈಲ್‌ನಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸುತ್ತಿದ್ದ ಕೆಲವೊಂದು ಆ್ಯಪ್‌ಗಳಿಗೆ ಹಾಗೂ ಮಾಲೀಕರನ್ನು ಬಂಧಿಸಿತು. ಈಗ ರಾಜ್ ಕುಂದ್ರಾರನ್ನು ಕೂಡ ಸೈಬರ್ ಸೆಲ್ ಬಂಧಿಸಿದ್ದು ಈ ಎಲ್ಲಾ ಆರೋಪಗಳ ಪ್ರಮುಖ ರೂವಾರಿ ರಾಜ್ ಎಂದು ತಿಳಿದು ಬಂದಿದೆ. ಪ್ರಸ್ತುತ ಅಂಗ ಪ್ರದರ್ಶನ ಮಾಡಿ ಹಣ ಗಳಿಸುತ್ತಿದ್ದ ಇನ್‌ಫ್ಲುಯೆನ್ಸರ್‌ಗಳು ಓನ್ಲಿಫ್ಯಾನ್ಸ್ ಎಂಬ ಬ್ರಿಟಿಷ್ ವೆಬ್‌ಸೈಟ್‌ಗೆ ತೆರಳಿದ್ದಾರೆ. ಎಲ್ಲಿಯವರೆಗೆ ಬಳಕೆದಾರರು ಇಂತಹದ್ದಕ್ಕೆ ಕುಮ್ಮಕ್ಕು ನೀಡುತ್ತಾರೋ ಅಲ್ಲಿಯವರೆಗೆ ಈ ಜಾಲಗಳು ಜೀವಂತವಾಗಿಯೇ ಇರುತ್ತವೆ ಎಂಬುದು ಸತ್ಯ.
First published: