`ಅಲ್ಲಾ ನವೀನಾ’ ಅಂತಿದ್ದಾರೆ ರಾಜ್​ ಬಿ ಶೆಟ್ಟಿ: ಫಸ್ಟ್​ ಟೈಮ್​ ಸಿಂಗಲ್​ ಟ್ರ್ಯಾಕ್​ನಲ್ಲಿ ಶಿವ!

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಎಲ್ಲರನ್ನು ಬೆರಗುಗೊಳಿಸಿರುವ ರಾಜ್ ಬಿ ಶೆಟ್ಟಿ ಈಗ ಮೊದಲ ಬಾರಿಗೆ ಸಿಂಗಲ್ ಆಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡು ಡಿಸೆಂಬರ್​ 20ರಂದು ರಿಲೀಸ್​ ಆಗುತ್ತಿದೆ.

ಅಲ್ಲಾ ನವೀನಾ ಪೋಸ್ಟರ್​

ಅಲ್ಲಾ ನವೀನಾ ಪೋಸ್ಟರ್​

  • Share this:
ಗರುಡ ಗಮನ ವೃಷಭ ವಾಹನ ಸಿನಿಮಾ ಕನ್ನಡ ಚಿತ್ರರಂದಗಲ್ಲಿ ಹೊಸ ಅಧ್ಯಾಯ ಬರೆದಿದೆ. ರಾಜ್​ ಬಿ ಶೆಟ್ಟಿ(Raj B Shetty) ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಸಕ್ಸಸ್(Success​) ಆಗಿದ್ದರು. ರಿಷಬ್​​ ಶೆಟ್ಟ(Rishab Shetty), ರಾಜ್​ ಬಿ ಶೆಟ್ಟಿ ಜೋಡಿ ಕಮಾಲ್​ ಮಾಡಿತ್ತು. ರೌಡಿಸಂ ಸಿನಿಮಾವನ್ನು ಈ ರೀತಿ ಮಾಡಬಹುದು ಎಂದು ರಾಜ್​ ಬಿ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಇದಾದ ಬಳಿಕ ರಾಜ್​ ಬಿ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಆದ್ರೆ, ಅವರು ಇದೇ ಮೊದಲ ಬಾರಿಗೆ ಸಿಂಗಲ್ ಹಾಡಿ(Single Track Song)ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ಎಲ್ಲರನ್ನು ಬೆರಗುಗೊಳಿಸಿರುವ ರಾಜ್ ಬಿ ಶೆಟ್ಟಿ ಈಗ ಮೊದಲ ಬಾರಿಗೆ ಸಿಂಗಲ್ ಆಗಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಹಾಡು ಡಿಸೆಂಬರ್​ 20ರಂದು ರಿಲೀಸ್​ ಆಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್​ ಬಿ ಶೆಟ್ಟಿ ಸಿಂಗಲ್ ಹಾಡಿನಲ್ಲಿ ನಟಿಸಿರುವುದನ್ನು ನೋಡುವುದಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. 

ಅಲ್ಲಾ ನವೀನಾ ಅಂತಿದ್ದಾರೆ ರಾಜ್​ ಬಿ ಶೆಟ್ಟಿ!

ಅಲ್ಲಾ ನವೀನಾ ಟೈಟಲ್ ಹಾಡನ್ನು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸ್ ಅಪ್ ಹಾಡಿಗೆ ಸಾಹಿತ್ಯ ಬರೆದಿದ್ದ ನಾಗಾರ್ಜುನ ಶರ್ಮಾ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಪೆಪ್ಪಿ ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಹೊಸಬರಾದ ಅಥರ್ವ ಮತ್ತು ಸ್ಫೂರ್ತಿ ಉಡಿಮನೆ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ನಿರ್ದೇಶಕರೇ ಬರೆದಿರುವ ಈ ಹಾಡು ಕಾಮಿಡಿ-ಪಾಥೋ ಸಾಂಗ್ ಆಗಿದೆ. ರಾಜಾ ರಾಣಿ ಖ್ಯಾತಿಯ ರಿಯಾಲಿಟಿ ಶೋ ಮುರುಗಾ ಮಾಸ್ಟರ್ ಮತ್ತು ಆನಂದ್ ರಾಗ ಸಂಯೋಜಿಸಿದ್ದಾರೆ.


ಇದನ್ನು ಓದಿ : ಓಟಿಟಿಗೆ ಬಂದ ಜೇಮ್ಸ್ ಬಾಂಡ್ ಸರಣಿಯ 24 ಸಿನಿಮಾಗಳು: ಅಮೇಜಾನ್​ ಪ್ರೈಮ್​ನಲ್ಲಿ ಮಾತ್ರ ಲಭ್ಯ..!

ಡಿಸೆಂಬರ್​ 20ಕ್ಕೆ ಹಾಡು ಬಿಡುಗಡೆ!
ಎರಡು ಆವೃತ್ತಿಗಳನ್ನು ದಾಸನ್ ಈ ಹಾಡು ಹಾಡಿದ್ದಾರೆ, ವಿಶ್ವಾಸ್ ಕೌಂಡಿನ್ಯ ಛಾಯಾಗ್ರಹಣ ಮಾಡಿದ್ದಾರೆ. ಇಡೀ ಹಾಡನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಡಿಸೆಂಬರ್ 20 ರಂದು ಪರಮಾವ್ ಮ್ಯೂಸಿಕ್ ಮತ್ತು ಐರಾ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಫಸ್ಟ್​ ಲುಕ್​ ಪೋಸ್ಟರ್​​ ರಿಲೀಸ್ ಆಗಿದೆ. ಅಟ್ಲಾಸ್​ ಸೈಕಲ್​ನಲ್ಲಿ ಅಥರ್ವ ಹಾಗೂ ರಾಜ್​ ಬಿ ಶೆಟ್ಟಿ ಕೂತಿರುವ ಪೋಸ್ಟರ್​ ಸಖತ್​ ಕ್ಯೂರಿಯಾಸಿಟಿ ಮೂಡಿಸಿದೆ. ಪೋಸ್ಟರ್​ನಲ್ಲೇ ನಗು ಬರುತ್ತಿದೆ. ಇನ್ನೂ ಈ ಹಾಡು ಎಷ್ಟು ನಗು ತರಿಸುತ್ತೋ ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನು ಓದಿ : ಎರಡೇ ದಿನಕ್ಕೆ `ಪುಷ್ಪ’ 116 ಕೋಟಿ ಕಲೆಕ್ಷನ್​: ಬುರುಡೆ ಬಿಡೋದು ನಿಲ್ಸಿ ಎಂದ ಟ್ರೋಲಿಗರು!

ಹೊಸಬರ ಬೆನ್ನಿಗೆ ನಿಂತಿರುವ ರಾಜ್​ ಬಿ ಶೆಟ್ಟಿ!

ರಾಜ್​ ಬಿ ಶೆಟ್ಟಿ ಕೂಡ ಯಾರ ಸಪೋರ್ಟ್​ ಇಲ್ಲದೇ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಎಂಟ್ರಿಯಾಗಿದ್ದರು. ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು. ಎರಡನ್ನು ನಿಭಾಯಿಸಿಕೊಂಡು ಬಂದಿದ್ದರು. ಇದೀಗ ಇವರಂತೆ ಯಾರ ಸಪೋರ್ಟ್ ಇಲ್ಲದೇ ಸಿನಿಮಾ ಮಾಡಿರುವ ತಂಡಗಳಿಗೆ ಬೆಂಬಲ ತೋರುತ್ತಿದ್ದಾರೆ. ಎಲ್ಲ ನಟ, ನಟಿಯರಿಗೂ ಮಾದರಿಯಾಗುತ್ತಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಿಂದ ತಾನೊಬ್ಬ ಅದ್ಭುತ ನಟ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದರ ಜೊತೆ ಹೊಸಬರ ಬೆನ್ನಿಗೆ ನಿಂತಿರುವುದು ಖುಷಿಯ ಸಂಗತಿ.Published by:Vasudeva M
First published: