ರಾಜ್ ಬಿ. ಶೆಟ್ಟಿ (Raj B Shetty) ಎಂದ ಕೂಡಲೇ ಒಂದು ಮೊಟ್ಟೆಯ ಕಥೆ ನೆನಪಾಗುತ್ತದೆ. ಗರುಡ ಗಮನ ವೃಷಭ ವಾಹನ ಸಿನಿಮಾ (Cinema) ನೆನಪಾಗುತ್ತದೆ. ಪ್ರತಿಬಾರಿ ಸಿನಿಮಾ ಮಾಡಿದಾಗಲೂ ಡಿಫರೆಂಟ್ ಕಾನ್ಸೆಪ್ಟ್ ಇಟ್ಟು ಸಿನಿಮಾ ಮಾಡುವ ನಟ ರಾಜ್. ಬಿ ಶೆಟ್ಟಿ ಪ್ರಾಜೆಕ್ಟ್ಗಳ (Project) ಬಗ್ಗೆ ಕನ್ನಡ ಸಿನಿಪ್ರೇಕ್ಷಕರು ಯಾವಾಗಲೂ ಹೆಚ್ಚು ಕುತೂಹಲ ಹೊಂದಿರುತ್ತಾರೆ. ಇತ್ತೀಚೆಗಷ್ಟೇ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶೂಟಿಂಗ್ ಮುಗಿಸಿರುವ ರಾಜ್ ಬಿ. ಶೆಟ್ಟಿ ಅವರು ಈಗ ತಮ್ಮ ಮುಂದಿನ ಸಿನಿಮಾಗೆ ಕಾಸ್ಟಿಂಗ್ ಕಾಲ್ (Casting call) ಕೊಟ್ಟಿದ್ದಾರೆ. ಒಂದು ಮೊಟ್ಟೆಯ ಕಥೆ ಹೀರೋ ಸಿನಿಮಾದಲ್ಲಿ (Cinema) ನೀವೂ ಕೆಲಸ ಮಾಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲೊಂದು ಬಂಪರ್ ಅವಕಾಶವಿದೆ.
ಕಾಸ್ಟಿಂಗ್ ಕಾಲ್ ಕೊಟ್ಟ ರಾಜ್. ಬಿ. ಶೆಟ್ಟಿ
ನಟ ರಾಜ್ ಬಿ. ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಅವರ ಮುಂದಿನ ಚಿತ್ರಕ್ಕೆ ಕಲಾವಿದರನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಾಸ್ಟಿಂಗ್ ಕಾಲ್ ಕೊಟ್ಟು ಕಲಾವಿದರನ್ನು ತಮ್ಮ ಮುಂದಿನ ಸಿನಿಮಾಗೆ ಸೇರಿಸಿಕೊಳ್ಳಲು ನಟ ಮುಕ್ತ ಅವಕಾಶವೊಂದನ್ನು ಇಟ್ಟಿದ್ದಾರೆ.
ಯಾವ್ಯಾವ ವಯಸ್ಸಿನವರಿಗಿದೆ ಅವಕಾಶ
ಗರುಡ ಗಮನ ವೃಷಭ ವಾಹನ ತಯಾರಕರಿಂದ ಪ್ರೊಡಕ್ಷನ್ ನಂಬರ್ 2. ಕಾಸ್ಟಿಂಗ್ ಕಾಲ್. ಕನ್ನಡ ಚಿತ್ರಕ್ಕಾಗಿ ಕಾಸ್ಟಿಂಗ್ ಕರೆ. ನಾವು ಕಲಾವಿದರಿಗಾಗಿ ಹುಡುಕುತ್ತಿದ್ದೇವೆ. 5-8 ವರ್ಷ ವಯಸ್ಸಿನ ಹೆಣ್ಣು ಮಗು (ತೆಳ್ಳನೆ, ಎಣ್ಣೆಗಪ್ಪು ಮೈಬಣ್ಣ), 6ರಿಂದ 10 ವರ್ಷ ಹಾಗೂ 10ರಿಂದ 15 ವರ್ಷದ ಬಾಲಕ (ತೆಳ್ಳನೆ-ಎಣ್ಣೆಗಪ್ಪು ಮೈಬಣ್ಣ), 35 ವರ್ಷ ಅಥವಾ 35 ವರ್ಷ ಮೇಲ್ಪಟ್ಟ ವಯಸ್ಸಿನ ಪುರುಷ ಹಾಗೂ ಮಹಿಳಾ ಕಲಾವಿದರು.
View this post on Instagram
ಸ್ವಾತಿ ಮುತ್ತಿನ ಮಳೆ ಹನಿಯೇ ಪ್ರೇರಣಾ ಲುಕ್ ರಿವೀಲ್
ಹಚ್ಚ ಹಸಿರಿನ ದಾರಿ ಮಧ್ಯೆ ತುಂಬಾ ಸಿಂಪಲ್ ಆಗಿರುವ ಸೀರೆ ಉಟ್ಟಿರುವ ಲುಕ್ನಲ್ಲಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ಸೀರೆಗೆ ಚೆನ್ನಾಗಿ ಹೊಂದಿಕೊಳ್ಳುವಂತೆ ಸಡಿಲವಾಗಿ ಬಾಚಿ ಕಟ್ಟಿದ ಕೂದಲು, ಸರಳವಾದ ಮೇಕಪ್, ಸಿಂಪಲ್ ಸೌಂದರ್ಯವತಿಯಾಗಿ ಮಿಂಚಿದ್ದಾರೆ ನಟಿ. ಈ ಫೋಟೋಗಳನ್ನು ಶೇರ್ ಮಾಡಿದ ಆ್ಯಪಲ್ ಬಾಕ್ಸ್ ಸ್ಟೂಡಿಯೋ, ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ಪ್ರೇರಣಾ ಆಗಿ ಟ್ಯಾಲೆಂಡೆಟ್ ಸಿರಿ ರವಿಕುಮಾರ್ ಅವರನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಪೋಸ್ಟ್ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಇದನ್ನೂ ಓದಿ: Amrutha Prem: ಅಮೃತಾ ಪ್ರೇಮ್ಗೆ ಅಪ್ಪು ಅಂದ್ರೆ ಅಚ್ಚುಮೆಚ್ಚು
ಪ್ರೇರಣಾ ಎಂದರೇನು?
ಪ್ರೇರಣಾ ಎನ್ನುವ ಪದದ ಅರ್ಥವನ್ನೂ ರಿವೀಲ್ ಮಾಡಲಾಗಿದೆ. ಸಂಸ್ಕೃತದಲ್ಲಿ ಮೂಲವನ್ನು ಹೊಂದಿರುವ ಈ ಪ್ರೇರಣಾ ಎನ್ನುವ ಪದದ ಅರ್ಥ ಸ್ಪೂರ್ಥಿ. ನಿಮಗೆ ಏನು ಸ್ಪೂರ್ಥಿ ನೀಡುತ್ತದೆ ಎಂದು ನಮಗೆ ತಿಳಿಸಿದ ಎಂದು ಪೋಸ್ಟ್ನ ಕೊನೆಯಲ್ಲಿ ಬರೆಯಲಾಗಿದೆ.
ಟ್ರೈಲರ್ಗೆ ಕಾಯ್ತಿದ್ದಾರೆ ಫ್ಯಾನ್ಸ್
ಶೂಟಿಂಗ್ ಕಂಪ್ಲೀಟ್ ಆಗಿರುವ ವಿಚಾರ ತಿಳಿದಿರುವ ಫ್ಯಾನ್ಸ್ ಈಗ ಟ್ರೈಲರ್ಗಾಗಿ ಕಾಯುತ್ತಿದ್ದಾರೆ. ಆದರೆ ಈ ಕುರಿತು ಯಾವುದೇ ಅಪ್ಡೇಟ್ ಹೊರಬಿದ್ದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ