GGVV Movie: ಈ ಸಿನಿಮಾದಲ್ಲಿ ಹೀರೋಯಿನ್ ಯಾಕಿಲ್ಲ? ಕೊನೆಗೂ ರಹಸ್ಯ ಬಿಚ್ಚಿಟ್ಟ ರಾಜ್ ಬಿ ಶೆಟ್ಟಿ!

Garuda Gamana Vrishabha Vahana Movie: ಈ ಸಿನಿಮಾದಲ್ಲಿ ಡ್ಯೂಯೆಟ್​ ಸಾಂಗ್(Duet Song)​ ಇದೆ. ಆದರೆ ಹೀರೋಯಿನ್(Heroin)​ ಜೊತೆ ಅಲ್ಲ.. ಸ್ಯಾಡ್ ಸಾಂಗ್​(Sad Song) ಕೂಡ ಇದೆ. ಆದರೆ ಹೀರೋಯಿನ್​ ಜೊತೆ ಅಲ್ಲ. ಕೊನೆಗೂ ಯಾಕೆ ಈ ಸಿನಿಮಾದಲ್ಲಿ ಹೀರೋಯಿನ್​ ಇಲ್ಲ ಎಂಬುದನ್ನು ರಾಜ್​ ಬಿ ಶೆಟ್ಟಿ ಹೇಳಿದ್ದಾರೆ.

ಗರುಡ ಗಮನ ವೃಷಭ ವಾಹನ ಚಿತ್ರದ ಪೋಸ್ಟರ್​​

ಗರುಡ ಗಮನ ವೃಷಭ ವಾಹನ ಚಿತ್ರದ ಪೋಸ್ಟರ್​​

  • Share this:
‘ಗರುಡ ಗಮನ ವೃಷಭ ವಾಹನ’(Garuda Gamana Vrishabha Vahana Movie)ಸಿನಿಮಾ ಬಿಡುಗಡೆಯಾಗಿ ಸಖತ್​ ರೆಸ್ಪಾನ್ಸ್​​ ಪಡೆದುಕೊಳ್ಳುತ್ತಿದೆ. ಹಿಂದೆಂದೂ ನೋಡಿರದ ಹೊಸತನವನ್ನು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ನೋಡುಬಹುದಾಗಿದೆ. ಹೀಗೂ ರೌಡಿಸಂ ಸಿನಿಮಾ ಮಾಡಬಹುದು ಎಂಬುದನ್ನು ರಾಜ್​ ಬಿ ಶೆಟ್ಟಿ(Raj B Shetty) ತೋರಿಸಿಕೊಟ್ಟಿದ್ದಾರೆ. ಸಿನಿಮಾ ಎಲ್ಲೆಡೆ ಹೌಸ್​ಪುಲ್​ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ರಿಷಭ್​​ ಶೆಟ್ಟಿ(Rishabh Shetty) ಹಾಗೂ ರಾಜ್​ ಬಿ ಶೆಟ್ಟಿ(Raj B Shetty) ಅವರ ನಟನೆಯೆ ಹೈಲೆಟ್ಸ್. ಇಬ್ಬರೂ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಡ್ಯೂಯೆಟ್​ ಸಾಂಗ್(Duet Song)​ ಇದೆ. ಆದರೆ ಹೀರೋಯಿನ್(Heroin)​ ಜೊತೆ ಅಲ್ಲ.. ಸ್ಯಾಡ್ ಸಾಂಗ್​(Sad Song) ಕೂಡ ಇದೆ. ಆದರೆ ಹೀರೋಯಿನ್​ ಜೊತೆ ಅಲ್ಲ. ಹೌದು, ಈ ಸಿನಿಮಾದಲ್ಲಿ ಹೀರೋಯಿನ್​ ಇಲ್ಲ. ಸ್ನೇಹಿತರಿಬ್ಬರ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾಗೆ ರಾಜ್ಯದ ಮೂಲೆ ಮೂಲೆಯಿಂದ ಅಭೂತಪೂರ್ವ  ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಸುದ್ಧಿಗೋಷ್ಟಿ ಕರೆದಿತ್ತು. ಈ ವೇಳೆ ಸಿನಿಮಾದ ಬಗ್ಗೆ ಮಾತನಾಡಲಾಯಿತು. ಜೊತೆಗೆ ಈ ಸಿನಿಮಾದಲ್ಲಿ ಹೀರೋಯಿನ್​ ಯಾಕಿಲ್ಲ ಎಂಬ ವಿಚಾರವನ್ನು ಸ್ವತಃ ನಿರ್ದೇಶಕರಾದ ರಾಜ್​ ಬಿ ಶೆಟ್ಟಿ ಹೇಳಿದ್ದಾರೆ. ನಟಿ ಯಾಕಿಲ್ಲ ಎಂಬುಂದು ನಿಮಗೆ ತಿಳಿದರೆ ನೀವೂ ಕೂಡ ಶಾಕ್​ ಆಗುತ್ತೀರಾ.

ಹೀರೋಯಿನ್ ಬೇಡ ಎಂದಿದ್ರಾ ರಿಷಭ್​ ಶೆಟ್ಟಿ ಪತ್ನಿ!

‘ಗರುಡ ಗಮನ ವೃಷಭ ವಾಹನ’ ಚಿತ್ರ ಸಕ್ಸಸ್​ ಮೀಟ್​ ಆಯೋಜಿಸಿತ್ತು. ಈ ವೇಳೆ ರಾಜ್​ ಬಿ. ಶೆಟ್ಟಿಗೆ ಒಂದು ಪ್ರಶ್ನೆ ಎದುರಾಯಿತು. ‘ಈ ಸಿನಿಮಾದಲ್ಲಿ ಹೀರೋಯಿನ್​ ಇಲ್ಲ ಅಂತ ರಿಷಬ್​ ಬೇಜಾರಾಗಿದ್ದಾರಾ’ ಎಂದು ತಮಾಷೆಗೆ ಪ್ರಶ್ನಿಸಲಾಯಿತು. ಅದಕ್ಕೆ ಅಷ್ಟೇ ತಮಾಷೆಯಾಗಿ ರಾಜ್​ ಬಿ. ಶೆಟ್ಟಿ ಉತ್ತರಿಸಿದರು. ‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ, ನಾನ್​ ಬೇರೆ ಇರಲ್ಲ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ನನಗೆ ಫೋನ್​ ಮಾಡಿ ಹೇಳಿದ್ದರು’ ಎಂದು  ನಗೆಚಟಾಕಿ ಹಾರಿಸಿದರು. ಈ ಮಾತು ಕೇಳಿ ಅಲ್ಲಿ ನರೆದಿದ್ದವರೆಲ್ಲ ನಗೆಗಡಲಲ್ಲಿ ತೇಲಿದ್ದಾರೆ.

ಇದನ್ನು ಓದಿ : ಮಂಗಳಾದೇವಿ ಅಂಗಳದಲ್ಲಿ ರಕ್ತಸಿಕ್ತ ಚರಿತ್ರೆ, `ರಾ’ಕ್ಷಸನ ರೂಪ ತಾಳಿದ ರಾಜ್​ ಬಿ ಶೆಟ್ಟಿ!

ಹೀರೋಯಿನ್​ ಇಲ್ಲದೆ ತಲೆಬಿಸಿ ಇರಲಿಲ್ಲ ಎಂದ ರಿಷಭ್

​ಇನ್ನೂ ಈ ವಿಚಾರಕ್ಕೆ ರಿಷಭ್​ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನ್ಯಾವಾಗ ಹೀರೋಯಿನ್​ ಬೇಕು ಅಂದಿದ್ದೆ’ ಅಂತ ಕಾಮಿಡಿ ಮಾಡಿದ್ದಾರೆ. ಹೀರೋಯಿನ್​ನ ಮಿಸ್​ ಮಾಡಿಕೊಂಡ್ರಾ ಅಂತ ಮತ್ತೆ ರಿಷಭ್​ ಅವರನ್ನು ರಾಜ್​ ಬಿ ಶೆಟ್ಟಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಿಷಭ್​, ‘ಇಲ್ಲ ಇಲ್ಲ ಶೂಟಿಂಗ್​ನಲ್ಲಿ ತಲೆಬಿಸಿ ಇರಲಿಲ್ಲ, ಬರೀ ಹುಡಗುರೇ ಇದ್ದರು. ಆರಾಮಾಗಿ ಕೆಲಸ ಮಾಡಲು ಆಯ್ತು’ ಅಂತ ಹೇಳಿದ್ದಾರೆ. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಹಿರೋಯಿನ್​ ಇಲ್ಲ ಎಂಬುದು ನೆನಪಾಗದಂತೆ, ಪ್ರೇಕ್ಷಕರನ್ನು ರಾಜ್​ ಬಿ ಶೆಟ್ಟಿ ಹಾಗೂ ರಿಷಭ್​ ಶೆಟ್ಟಿ ಹಿಡಿದಿಟ್ಟುಕೊಳ್ಳುತ್ತಾರೆ.

ಇದನ್ನು ಓದಿ : ಮದುವೆಯಲ್ಲಿ ತನ್ನ ಹಣೆಗೂ ಸಿಂಧೂರ ಇಡಿಸಿಕೊಂಡ ಬಾಲಿವುಡ್​ ನಟ, ವಿಡಿಯೋ ವೈರಲ್​!

'ಮಂಗಳಾದೇವಿ' ಅಂಗಳ ಸುತ್ತುವ ಕಥೆ!

ಮಂಗಳೂರಿನ ಮಂಗಳಾದೇವಿ ಏರಿಯಾದಲ್ಲಿ ಹರಿ (ರಿಷಬ್‌) ಮತ್ತು ಶಿವ (ರಾಜ್‌) ಬಾಲ್ಯ ಸ್ನೇಹಿತರು. ಹರಿ ಸಾಧು ಸ್ವಭಾವದ ವ್ಯಕ್ತಿ, ಶಿವ ಹಾಗಲ್ಲ ರಫ್​ & ಟಫ್​. ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ. ಹರಿಗೆ ಯಾರದರೂ ತೊಂದರೆ ಕೊಟ್ಟರೆ ಶಿವ ಸುಮ್ಮನೆ ಬಿಡುವುದಿಲ್ಲ. ಈ ಸ್ನೇಹಿತರು ದೊಡ್ಡವರಾದ ಮೇಲೆ  ಗ್ಯಾಂಗ್​ಸ್ಟಾರ್​ಗಳಾಗಿ ಹೇಗೆ ಬದಲಾಗುತ್ತಾರೆ ಅನ್ನವುದೆ ಈ ಸಿನಿಮಾದ ಕಥೆ. ಹರಿ ಸಾಧು ಆದರೆ ಬುದ್ಧಿವಂತ ಎಲ್ಲಿ, ಯಾವಾಗ, ಏನು ಮಾಡಬೇಕೆಂದು ಗೊತ್ತಿರುವ ವ್ಯಕ್ತಿ. ಆದರೆ ಶಿವ ಆಗಲ್ಲ, ರಾಕ್ಷಸನ ಸ್ವಭಾವ. ಆತ ಚಾಕು ಚುಚ್ಚುವುದನ್ನ ನೋಡಿದರ ಭಯಬೀಳುವಂತಿದೆ. ಅಷ್ಟರ ಮಟ್ಟಿಗೆ ಕ್ರೂರಿ ಪಾತ್ರ. ಇವರಿಬ್ಬರ ಜುಗಲ್‌ಬಂದಿ, ಮಂಗಳಾದೇವಿ ಅಂಗಳದ ರಕ್ತದ ಹಾದಿ, ಶಿವನ ಕೋಪ, ರಕ್ಕಸತನ. ಹರಿಯ ಬುದ್ಧಿವಂತಿಕೆ. ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತವೆ ಅನ್ನೋದೇ ಈ ಸಿನಿಮಾದ ಅಂತ್ಯ.
Published by:Vasudeva M
First published: