ಕನ್ನಡದ ಪ್ರತಿಭಾನ್ವಿತ ನಟ (actor), ನಿರ್ದೇಶಕ (director), ನಿರ್ಮಾಪಕ (Producer) ರಾಜ್ ಬಿ. ಶೆಟ್ಟಿ (Raj B Shetty) ಯಾರಿಗೆ ಗೊತ್ತಿಲ್ಲ ಹೇಳಿ? ‘ಒಂದು ಮೊಟ್ಟೆಯ ಕಥೆ’ (Ondu Motteya Kathe) ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ರಾಜ್ ಬಿ ಶೆಟ್ಟಿ, ಹಲವು ಸಿನಿಮಾಗಳಲ್ಲಿ ನಟಿಸಿ, ಜನಮನ ಗೆದ್ದಿದ್ದಾರೆ. ಒಂದೆಡೆ ಸ್ವಾತಿ ಮುತ್ತಿನ ಮಳೆಹನಿಯೇ ಎಂಬ ಸಿನಿಮಾದಲ್ಲಿ ನಟಿಸ್ತಾ ಇದ್ದರೆ, ಮತ್ತೊಂದೆಡೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲೂ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಇದರ ನಡುವೆ ರಾಜ್ ಬಿ ಶೆಟ್ಟಿಯವರ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ. ರಾಜ್ ಬಿ ಶೆಟ್ಟಿಯವರ ಮುಂದಿನ ಸಿನಿಮಾ ಯಾವುದು? ನಿರ್ದೇಶನವೋ, ನಟನೆಯೋ, ನಿರ್ಮಾಣವೋ? ನಾಯಕಿ ಯಾರು? ಕಥೆ ಏನು? ಪಾತ್ರವೇನು ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆಲ್ಲ ಎಕ್ಸ್‌ಕ್ಲೂಸಿವ್ ಉತ್ತರ ಇಲ್ಲಿದೆ ಓದಿ…
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ
ಈಗೆಲ್ಲ ಪ್ಯಾನ್ ಇಂಡಿಯಾ ಮೂವಿಗಳದ್ದೇ ಜಮಾನ. ಅದರಲ್ಲೂ ಕನ್ನಡದ ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರಾ ಸಿನಿಮಾಗಳು ಭಾರತೀಯ ಚಿತ್ರರಂಗವಷ್ಟೇ ಅಲ್ಲ, ವಿಶ್ವಮಟ್ಟದಲ್ಲಿ ಗಮನ ಸೆಳೆದ ಮೇಲೆ ಕನ್ನಡದಲ್ಲೂ ಪ್ಯಾನ್ ಇಂಡಿಯಾ ಹವಾ ಜೋರಾಗಿದೆ. ಇದೀಗ ರಾಜ್ ಬಿ ಶೆಟ್ಟಿ ಕೂಡ ಪ್ಯಾನ್ ಇಂಡಿಯಾ ಸಿನಿಮಾಜಲ್ಲಿ ಮಿಂಚಲಿದ್ದಾರೆ ಎನ್ನುವುದು ಈ ಹೊತ್ತಿನ ಬಿಗ್ ಬ್ರೇಕಿಂಗ್ ನ್ಯೂಸ್.
16 ಕೋಟಿ ಬಜೆಟ್ ಸಿನಿಮಾದಲ್ಲಿ ರಾಜ್
ರಾಜ್ ಬಿ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸ್ತಿದ್ದಾರೆ ಎನ್ನಲಾಗಿದೆ. ಅದರ ಬಜೆಟ್ 16 ಕೋಟಿ ಅಂತ ಮೂಲಗಳು ತಿಳಿಸಿವೆ. ಅಗಸ್ತ್ಯ ಫಿಲ್ಮ್ ಮತ್ತು ಲೈಟರ್ ಬುದ್ಧ ಫಿಲ್ಮ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸ್ತಿದೆಯಂತೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: Raj B Shetty: ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಸೆಕೆಂಡ್ ಪೋಸ್ಟರ್ ರಿಲೀಸ್
ಯಾರೂ ಗೆಸ್ ಮಾಡೋಕೆ ಆಗದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ತಮ್ಮ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆಯಿಂದಲೂ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಒಂದು ಮೊಟ್ಟೆಯ ಕಥೆಯಲ್ಲಿ ಅವಿವಾಹಿತನ ಪಾತ್ರವಾದರೆ, ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ನಾಯಕಿಯನ್ನು ಕಾಡುವ ಪಾತ್ರ, ಅದಾದ ಬಳಿಕ ಗರುಡಗಮನ ವೃಷಭ ವಾಹನ ಸಿನಿಮಾದಲ್ಲಂತೂ ಅವರ ಪಾತ್ರ ಕನ್ನಡಿಗರ ಮನಗೆದ್ದಿತ್ತು. ಅದಾದ ಬಳಿಕ 777 ಚಾರ್ಲಿ ಸಿನಿಮಾದಲ್ಲಿ ಪಶು ವೈದ್ಯನ ಪಾತ್ರ ಮಾಡಿದ್ದರು. ಇದೀಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪಾತ್ರ ವಿಶೇಷವಾಗಿ ಇರಲಿದೆ ಎನ್ನಲಾಗಿದೆ. ಯಾರೂ ಊಹಿಸಿಕೊಳ್ಳಲೂ ಆಗದ ರೀತಿಯ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಿಂಚಲಿದ್ದಾರೆ ಎನ್ನುವುದು ಕನ್ಫರ್ಮ್ ಆಗಲಿದೆ.
ಈ ಸಿನಿಮಾದಲ್ಲಿ ಒಬ್ಬರಲ್ಲಿ ಇಬ್ಬರು ನಾಯಕಿಯರು!
ರಾಜ್ ಬಿ ಶೆಟ್ಟಿಗೆ ಇಲ್ಲಿ ಒಬ್ಬರಲ್ಲ ಇಬ್ಬರು ನಾಯಕಿಯರು ಜೊತೆಯಾಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಸಂಯುಕ್ತಾ ಹೊರನಾಡು ಹಾಗೂ ಗಾಯಕಿ ಕಮ್ ನಟಿ ಚೈತ್ರಾ ಆಚಾರ್ ಇದ್ರಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇದರಲ್ಲಿ ಚೈತ್ರಾ ಆಚಾರ್ ಮೇನ್ ಕ್ಯಾರೆಕ್ಟರ್‌ನಲ್ಲಿ ನಟಿಸಿದ್ದರೆ, ಸಂಯುಕ್ತಾ ಪಾತ್ರ ಇಡೀ ಕಥೆಗೆ ಟ್ವಿಸ್ಟ್ ನೀಡಲಿದ್ಯಂತೆ!
ಉತ್ತಮ ಮೊತ್ತಕ್ಕೆ ಟಿವಿ, ಒಟಿಟಿ ರೈಟ್ಸ್ ಸೇಲ್!
ಅಂದಹಾಗೆ ಈಗಾಗಲೇ ಉತ್ತಮ ಮೊತ್ತಕ್ಕೆ ಈ ಸಿನಿಮಾದ ಟಿವಿ ಹಾಗೂ ಒಟಿಟಿ ರೈಟ್ಸ್‌ಗಳು ಸೇಲ್ ಆಗಿವೆ ಎನ್ನಲಾಗಿದೆ. ಇನ್ನು ಮುಖ್ಯವಾಗಿ ಈ ಸಿನಿಮಾಕ್ಕೆ ಟೋಬಿ ಅಂತ ಹೆಸರಿಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ