ಚಾರ್ಲಿ ಸಿನಿಮಾ (777 Charlie Film) ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ನಾಯಿ (Dog) ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಈ ಸಿನಿಮಾ ಅದ್ಭುತವಾಗಿ ಬಿಡಿಸಿ ಹೇಳಿದೆ. ಈ ಸಿನಿಮಾ ನೋಡಿದ ನಂತರ ಹಲವಾರು ಜನರು ನಾಯಿ ಸಾಕಬೇಕು ಎಂದು ನಿರ್ಧರಿಸಿದ್ದಾರೆ. ಆದರೆ ಎಲ್ಲರು ಲ್ಯಾಬ್ರಡಾರ್ ನಾಯಿಯನ್ನು ಸಾಕಬೇಕು ಎನ್ನುವ ಆಸೆ ಹೊಂದಿದ್ದಾರೆ. ಈ ಬಗ್ಗೆ ಚಾರ್ಲಿ ಸಿನಿಮಾದ ನಟ ರಾಜ್ ಬಿ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Social Media) ಸ್ಟೋರಿ ಒಂದನ್ನು ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾಯಿ ಪ್ರೀತಿಗೆ ಯಾವುದೇ ಜಾತಿ ಇಲ್ಲ
ಹೌದು, ಯಾವುದೇ ಸಿನಿಮಾ ನೋಡಿ ಅದರಿಂದ ಸ್ಫೂರ್ತಿ ಪಡೆಯುವುದು ಸಾಮಾನ್ಯ. ಆ ಸಿನಿಮಾಗಳು ನಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಬಹುದು. ಆದರೆ ಆ ಸಿನಿಮಾದ ಆಶಯವೇ ಬೇರೆ ಇದ್ದು, ಜನರು ಅದನ್ನು ಮತ್ತೊಂದು ರೀತಿ ನೋಡಿದರೆ ಅದು ನಿಜಕ್ಕೂ ಬೇಸರದ ಸಂಗತಿ. ಚಾರ್ಲಿ ಸಿನಿಮಾ, ನಾಯಿ ಒಂದು ಹೇಗೆ ಮನುಷ್ಯನ ಬದುಕನ್ನು ಬದಲಾಯಿಸುತ್ತದೆ ಎಂಬುದನ್ನ ತೋರಿಸಿದೆ. ಆದರೆ ಇದು ಬೀದಿ ನಾಯಿಗಳಿಗೆ ಆಶ್ರಯ ನೀಡುವ ಬಗ್ಗೆ ಇದೆ. ಜನ ಮಾತ್ರ ಈ ಸಿನಿಮಾ ನೋಡಿ ಲ್ಯಾಬ್ರಡಾರ್ ನಾಯಿ ಸಾಕಲು ಆಲೋಚನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂಬುದು ನಟ ರಾಜ್ ಬಿ ಶೆಟ್ಟಿಯವರ ಅಭಿಪ್ರಾಯ.
ಈ ಬಗ್ಗೆ ಸ್ಟೋರಿ ಹಾಕಿರುವ ಅವರು, ಚಾರ್ಲಿ ಸಿನಿಮಾದ ಉದ್ದೇಶ ಬೀದಿ ನಾಯಿಗಳಿಗೆ ಉತ್ತಮ ಬದುಕು ನೀಡುವುದು. ಆದರೆ ಸಿನಿಮಾ ನೋಡಿ ಎಲ್ಲರೂ
ಲ್ಯಾಬ್ರಡಾರ್ ನಾಯಿ ಖರೀದಿಸುವ ಆಲೋಚನೆ ಮಾಡಿದಂತಿದೆ. ಇದು ಸರಿಯಲ್ಲ. ಇದನ್ನು ನಿಲ್ಲಿಸಿ. ನಾಯಿಯ ಪ್ರೀತಿಗೆ ಯಾವುದೇ ತಳಿ ಇಲ್ಲ. ಭಾರತೀಯ ತಳಿಯ ಬೀದಿ ನಾಯಿಯನ್ನು ಸಹ ನೀವು ತಂದು ಸಾಕಬಹುದು ಎಂದಿದ್ದಾರೆ. ಅಲ್ಲದೇ ಈ ಪೋಸ್ಟ್ನಲ್ಲಿ 8 ಇಂಡಿ ತಳಿಯ ನಾಯಿಗಳ ಹೆಮ್ಮೆಯ ತಂದೆ ಎಂದು ಬರೆದುಕೊಂಡು, ತಾವೂ ನಾಯಿ ಸಾಕಿರುವುದನ್ನ ಹೇಳಿದ್ದಾರೆ.
ಇದನ್ನೂ ಓದಿ: ಪರಭಾಷೆಯಲ್ಲಿ ಫೇಮಸ್ ಆಗಿರುವ ನಟಿಯರ ಕನ್ನಡದ ಮೊದಲ ಸಿನಿಮಾ ಇದಂತೆ
ಇದು ಕೇವಲ ನಟ ರಾಜ್ ಬಿ ಶೆಟ್ಟಿಯವರ ಅಭಿಪ್ರಾಯವಲ್ಲ, ಈ ಸಿನಿಮಾ ನೋಡಿ ಬಂದ ಹಲವಾರು ಜನರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಿಯ ಪ್ರೀತಿ ಬೆಲೆಕಟ್ಟಲಾಗದ್ದು, ಹಾಗಾಗಿ ಅವುಗಳ ತಳಿ ನೊಡುತ್ತಾ ಕೂತರೆ ಉಪಯೋಗವಿಲ್ಲ, ನಾಯಿ ಸಾಕುವ ಮನಸ್ಸಿದ್ದರೆ ಬೀದಿ ನಾಯಿ ಸಾಕಿ ಎಂದು ಹಲವಾರು ಜನರು ಸಲಹೆ ನೀಡಿದ್ದಾರೆ.
ನಾಯಿ ಸಾಕುವ ಮುನ್ನ ಈ ಬಗ್ಗೆ ಎಚ್ಚರ
ಅಲ್ಲದೇ, ನಾಯಿ ಸಾಕುವುದು ಸುಲಭದ ಮಾತಲ್ಲ. ಅವುಗಳಿಗೆ ಸರಿಯಾಗಿ ಹೊಂದಿಕೆ ಆಗುವ ವಾತಾವರಣ ಮನೆಯಲ್ಲಿರಬೇಕು. ಅವುಗಳಿಗೆ ಮುಖ್ಯವಾಗಿ ನಮ್ಮ ಸಮಯ ಬೇಕು. ನಾವು ಮನೆಯಲ್ಲಿ ತಂದು ಇಟ್ಟು, ಆಹಾರ ನೀಡಿದರೆ ನಮ್ಮ ಜವಾಬ್ದಾರಿ ಮುಗಿದ ರೀತಿ ಅಲ್ಲ. ಅವುಗಳಿಗೆ ನಮ್ಮ ಸಮಯ ಮೀಸಲಿಡಬೇಕು. ಸಮಯ ಕೊಡಲು ಸಾಧ್ಯವಿಲ್ಲ ಎಂದರೆ ನಾಯಿ ಸಾಕಬಾರದು, ಅವುಗಳ ಮಾನಸಿಕ ಆರೋಗ್ಯದ ಮೇಲೆ ಅದು ಪರಿಣಾಮ ಬೀರುತ್ತದೆ. ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾಯಿಗಳನ್ನು ಸಾಕಬೇಕು. ಅವುಗಳ ಪ್ರೀತಿಗೆ ಯಾವುದೇ ಮಿತಿ ಇಲ್ಲ ಎಂಬುದು ರಾಜ್ ಬಿ ಶೆಟ್ಟಿ ಅವರ ಅಭಿಪ್ರಾಯ.
ಇದನ್ನೂ ಓದಿ: ವೀಕೆಂಡ್ನಲ್ಲಿ ಹೆಚ್ಚಾಯ್ತು ಚಾರ್ಲಿ ಕಲೆಕ್ಷನ್, ಇಲ್ಲಿವರೆಗೆ ಸಿನಿಮಾ ಗಳಿಸಿದ್ದು ಎಷ್ಟು?
ಇನ್ನು ಚಾರ್ಲಿ ಸಿನಿಮಾದ ಕಡೆ ಬಂದರೆ ಬಹಳ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿ ಸಹ ಬಹಳ ಮುಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ