ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ; ವೆಟರ್ನರಿ ಡಾಕ್ಟರ್ಗೆ 777 ಚಾರ್ಲಿ ಚಿತ್ರತಂಡದಿಂದ ಹೀಗೊಂದು ಉಡುಗೊರೆ
Happy Birthday Raj B shetty: ರಾಜ್ಬಿ ಶೆಟ್ಟಿ ಸ್ಯಾಂಡಲ್ವುಡ್ನ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ‘ಸ.ಹಿ.ಪ್ರಾ ಶಾಲೆ ಕಾಸರಗೋಡು’, ‘ಅಮ್ಮಚ್ಚಿ ಎಂಬ ಸವಿನೆನಪು’, ‘ಮಹಿರಾ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಕಥಾ ಸಂಗಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಅವರೇ ನಿರ್ದೇಶನ ಮಾಡುತ್ತಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದು ಕರಾವಳಿ ಭಾಗದ ಅಂಡರ್ವರ್ಲ್ಡ್ ಕಥೆಯಾದರಿತ ಸಿನಿಮಾವಾಗಿದೆ. ಸದ್ಯ ಶೂಟಿಂಗ್ ಎಲ್ಲಾ ಮುಗಿದಿದೆ. ಆದರೆ ಸಿನಿಮಾ ಯಾವಾಗ ತೆರೆ ಮೇಲೆ ಬರಲಿದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
news18-kannada Updated:July 5, 2020, 4:12 PM IST

ರಾಜ್ ಬಿ ಶೆಟ್ಟಿ
- News18 Kannada
- Last Updated: July 5, 2020, 4:12 PM IST
‘ಒಂದು ಮೊಟ್ಟೆಯ ಕಥೆ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಕರಾವಳಿ ಪ್ರತಿಭೆ ನಟ ರಾಜ್ ಬಿ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ನಟನೆಯ ‘777ಚಾರ್ಲಿ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇವರ ಹುಟ್ಟುಹಬ್ಬದ ದಿನವಾದ ಇಂದು ಚಾರ್ಲಿ ಚಿತ್ರತಂಡ ವಿಶೇಷ ವಿಡಿಯೊವೊಂದನ್ನು ಯ್ಯೂಟೂಬ್ನಲ್ಲಿ ಬಿಡುಗಡೆ ಮಾಡುವ ಮೂಲಕ ಭಿನ್ನವಾಗಿ ವಿಶ್ ಮಾಡಿದೆ.
ಕಿರಣ್ರಾಜ್ ಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಾರ್ಲಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ಪಾತ್ರ ಮಾಡುತ್ತಿದ್ದಾರೆ. ಡಾ ಅಶ್ವಿನ್ ಕುಮಾರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಟರ್ನರಿ ಡಾಕ್ಟರ್ ಆಗಿ ‘777ಚಾರ್ಲಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಹಂಬಲ್ ಪೊಲೀಟಿಶನ್ ಖ್ಯಾತಿಯ ದಾನಿಶ್ ಶೇಠ್ ಅವರ ಹುಟ್ಟುಹಬ್ಬದಂದು ‘777ಚಾರ್ಲಿ’ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋಡಿದ್ದರು. ಮಾತ್ರವಲ್ಲದೆ ಚಿತ್ರತಂಡ ಸೇರಿಸಿಕೊಳ್ಳುತ್ತಿರುವ ದಾನೀಶ್ಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಭಿನ್ನವಾಗಿ ವಿಶ್ ಮಾಡಿದ್ದರು. ಅದರಂತೆ ಇಂದು ರಾಜ್ ಬಿ ಶೆಟ್ಟಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಡಿಯೋ ತುಣುಕನ್ನು ಹಾಕುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ರಾಜ್ಬಿ ಶೆಟ್ಟಿ ಸ್ಯಾಂಡಲ್ವುಡ್ನ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ‘ಸ.ಹಿ.ಪ್ರಾ ಶಾಲೆ ಕಾಸರಗೋಡು’, ‘ಅಮ್ಮಚ್ಚಿ ಎಂಬ ಸವಿನೆನಪು’, ‘ಮಹಿರಾ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಕಥಾ ಸಂಗಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಅವರೇ ನಿರ್ದೇಶನ ಮಾಡುತ್ತಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದು ಕರಾವಳಿ ಭಾಗದ ಅಂಡರ್ವರ್ಲ್ಡ್ ಕಥೆಯಾದರಿತ ಸಿನಿಮಾವಾಗಿದೆ. ಸದ್ಯ ಶೂಟಿಂಗ್ ಎಲ್ಲಾ ಮುಗಿದಿದೆ. ಆದರೆ ಸಿನಿಮಾ ಯಾವಾಗ ತೆರೆ ಮೇಲೆ ಬರಲಿದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಕಿರಣ್ರಾಜ್ ಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಾರ್ಲಿ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ಪಾತ್ರ ಮಾಡುತ್ತಿದ್ದಾರೆ. ಡಾ ಅಶ್ವಿನ್ ಕುಮಾರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೆಟರ್ನರಿ ಡಾಕ್ಟರ್ ಆಗಿ ‘777ಚಾರ್ಲಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.