ಸ್ಯಾಂಡಲ್ವುಡ್ನಲ್ಲಿ (Sandalwood) ಒಂದು ಮೊಟ್ಟೆಯ ಕಥೆ ಹೇಳಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡ ರಾಜ್ ಬಿ. ಶೆಟ್ಟಿ (Raj B Shetty) ಅವರು ಸ್ವಾತಿ ಮುತ್ತಿನ ಮಳೆ ಹನಿಯೇ (Swathi Mutthina Male Haniye) ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ರಮ್ಯಾ (Ramya) ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಹೌಸ್ನ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ ಶೂಟಿಂಗ್ (Shooting) ಕೂಡಾ ಮುಕ್ತಾಯವಾಗಿದೆ. ರಾಜ್ ಬಿ. ಶೆಟ್ಟಿ ಹಾಗೂ ಸಿರಿ ರವಿಕುಮಾರ್ (Siri Ravikumar) ಅಭಿನಯದ ಈ ಸಿನಿಮಾವನ್ನು (Cinema) ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಾಜ್ ಬಿ. ಶೆಟ್ಟಿ ಅವರ ಮುಂದಿನ ಸಿನಿಮಾ ಕುರಿತು ನ್ಯೂಸ್18 ಕನ್ನಡ ಡಿಜಿಟಲ್ಗೆ ಎಕ್ಸ್ಕ್ಲೂಸಿವ್ (Exclusive) ಮಾಹಿತಿ ಸಿಕ್ಕಿದೆ.
ರಾಜ್ ಬಿ ಶೆಟ್ಟಿ ಅವರ ಮುಂದಿನ ಸಿನಿಮಾ
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಹೊರತುಪಡಿಸಿ ರಾಜ್ ಬಿ. ಶೆಟ್ಟಿ ಅವರು ಭರ್ಜರಿಯಾದ ಸಿನಿಮಾ ಒಂದನ್ನು ರೆಡಿ ಮಾಡುತ್ತಿದ್ದಾರೆ. ರಾಜ್ ಬಿ. ಶೆಟ್ಟಿ ಅವರ ಸಿನಿಮಾ ಕೆರಿಯರ್ನಲ್ಲಿಯೇ ಅವರು ಮಾಡುತ್ತಿರುವಂತಹ ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಹೌದು. ರಾಜ್ ಬಿ. ಶೆಟ್ಟಿ ಅವರು ದೊಡ್ಡಮಟ್ಟದಲ್ಲಿ ಬಂಡವಾಳವನ್ನು ಹಾಕಿ ಈ ಸಿನಿಮಾ ಮಾಡುತ್ತಿದ್ದಾರೆ.
90% ಶೂಟಿಂಗ್ ಕಂಪ್ಲೀಟ್
ಅದ್ಯಾವಾಗ ಶೂಟಿಂಗ್ ಮಾಡಿದ್ರೋ ಗೊತ್ತಿಲ್ಲ. ಈ ಬಿಗ್ ಬಜೆಟ್ ಸಿನಿಮಾದ ಶೇ.90ರಷ್ಟು ಚಿತ್ರೀಕರಣ ಪೂರ್ತಿಯಾಗಿದೆ. ಉಡುಪಿ, ಮಂಗಳೂರು ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಶೂಟಿಂಗ್ ಕೂಡಾ ಮಾಡಲಾಗಿದೆ.
ಲವ್ ಸ್ಟೋರಿ ಅಲ್ಲ, ಆದ್ರೆ ಇಬ್ಬರು ಹೀರೋಯಿನ್ಸ್ ಇದ್ದಾರೆ
ಈ ಚಿತ್ರ ಖಂಡಿತಾ ಲವ್ ಸ್ಟೋರಿ ಸಿನಿಮಾ ಅಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ರಾಜ್ ಬಿ. ಶೆಟ್ಟಿ ಅವರ ಸಿನಿಮಾ ಲಿಸ್ಟ್ ತೆಗೆದು ನೋಡಿದರೆ ಅವರು ಮಾಡಿರುವ ಸಿನಿಮಾಗಳ ಕಾನ್ಸೆಪ್ಟ್ ನಿಜಕ್ಕೂ ವಿಭಿನ್ನವಾಗಿದೆ. ಹೊಸತನ ಪ್ರಯೋಗ ಮಾಡುವ ರಾಜ್ ಬಿ. ಶೆಟ್ಟಿ ಅವರ ಚಿತ್ರಗಳಲ್ಲಿ ಕಥೆ, ಸಿನಿಮಾದ ರೀತಿ ಎಲ್ಲವೂ ಡಿಫರೆಂಟಾಗಿರುತ್ತದೆ. ವಾಸ್ತವಕ್ಕೆ ಅತ್ಯಂತ ಹತ್ತಿರದಲ್ಲಿ ನಿಂತು ಸೂಕ್ಷ್ಮ ವಿಚಾರವೊಂದನ್ನು ಎಳೆ ಎಳೆಯಾಗಿ ಪ್ರೇಕ್ಷಕರ ಮುಂದೆ ಬಿಚ್ಚಿಡುವುದರಲ್ಲಿ ರಾಜ್ ಬಿ. ಶೆಟ್ಟಿ ನಿಸ್ಸೀಮರು.
ಇದನ್ನೂ ಓದಿ: Raj B Shetty: ಸೈಕೋ ಕಿಲ್ಲರ್ ಜೊತೆ ರಾಜ್ ಬಿ ಶೆಟ್ಟಿ ಫೋಟೋ, ವಿದೇಶದಲ್ಲಿ ಕನ್ನಡ ನಟನ ಬಗ್ಗೆ ಅಪಹಾಸ್ಯ ಮಾಡಿದ್ರಾ?
ಈಗ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ಸ್ ಇದ್ದಾರೆ. ನಟಿ ಸಂಯುಕ್ತಾ ಹೊರನಾಡು ಅವರು ನಟಿಸುತ್ತಿದ್ದು ಅವರೊಂದಿಗೆ ಮತ್ತೊಬ್ಬ ಹೀರೋಯಿನ್ ಕೂಡಾ ಸಾಥ್ ಕೊಡುತ್ತಿದ್ದಾರೆ. ಆದರೆ ಈ ಸಿನಿಮಾ ಲವ್ ಸ್ಟೋರಿ, ಅಥವಾ ರೊಮ್ಯಾಂಟಿಕ್ ಸಿನಿಮಾ ಅಲ್ಲ.
ಕೊನೆಯ ಶೆಡ್ಯೂಲ್ ಚಿತ್ರೀಕರಣ
ಈಗಾಗಲೇ ಹೇಳಿದಂತೆ ಈ ಸಿನಿಮಾದಲ್ಲಿ ಶೇ.90ರಷ್ಟು ಚಿತ್ರೀಕರಣ ಪೂರ್ತಿಗೊಂಡಿದ್ದು ಇನ್ನು ಕೊನೆಯ ಶೆಡ್ಯೂಲ್ ಮಾತ್ರ ಬಾಕಿ ಇದೆ. ಈ ಸಿನಿಮಾದ ಕೊನೆಯ ಶೆಡ್ಯೂಲ್ ಶೂಟಿಂಗ್ ಆರಂಭವಾಗಿದ್ದು ಇನ್ನೊಂದು ವಾರದೊಳಗೆ ಈ ಬಿಗ್ ಬಜೆಟ್ ಸಿನಿಮಾ ಚಿತ್ರೀಕರಣ ಪೂರ್ತಿಯಾಗಲಿದೆ.
ಬಂಡವಾಳ ಹಾಕಿರೋದು ಯಾರು?
ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಮೂಲಕ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಅಗಸ್ತ್ಯ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ