ನನ್ನ ಬಯೋಪಿಕ್​ನಲ್ಲಿ ಅಮೀರ್ ಖಾನ್ ನಟಿಸಿದರೆ ಸೂಕ್ತ: ರಾಹುಲ್ ದ್ರಾವಿಡ್

news18
Updated:July 28, 2018, 9:32 AM IST
ನನ್ನ ಬಯೋಪಿಕ್​ನಲ್ಲಿ ಅಮೀರ್ ಖಾನ್ ನಟಿಸಿದರೆ ಸೂಕ್ತ: ರಾಹುಲ್ ದ್ರಾವಿಡ್
news18
Updated: July 28, 2018, 9:32 AM IST
ನ್ಯೂಸ್ 18 ಕನ್ನಡ

ರಾಹುಲ್ ದ್ರಾವಿಡ್ ಅವರ ಆಟವನ್ನು ಪದಗಳಲ್ಲಿ ಅಡಗಿಸಿಡಲು ಸಾಧ್ಯವಿಲ್ಲ. ಯಾಕಂದರೆ, ಅದು ಶಿಲ್ಪಿ ಕಲ್ಲಿನಿಂದ ಕೆತ್ತಿ ತಯಾರಿಸಿದ ಮೂರ್ತಿ ಇದ್ದಂತೆ. ಎಂತಹದ್ದೇ ಚೆಂಡಾಗಿರಲಿ, ಅದನ್ನು ಎದುರಿಸುವ ಶೈಲಿ, ವಿಭಿನ್ನ ಹಾಗೂ ಮನಮೋಹಕ. ಸುದೀರ್ಘವಾದ 16 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ರಾಹುಲ್ ದ್ರಾವಿಡ್ ಕಳೆದ ಒಂದೊಂದು ದಿನವೂ ಸ್ಫೂರ್ತಿದಾಯಕ. ಆಟದಿಂದಷ್ಟೇ ಅಲ್ಲ, ತನ್ನ ಗುಣ ನಡೆತದಿಂದಲೂ ಅಭಿಮಾನಿಗಳ ಮನದಲ್ಲಿ ಸ್ಥಾನ ಗಟ್ಟಿ ಪಡಿಸಿಕೊಂಡವರು ಈ ಗ್ರೇಟ್ ವಾಲ್.

ರಾಹುಲ್ ಕುರಿತು ಇಷ್ಟೇಲ್ಲಾ ಹೇಳಲು ಕಾರಣವೂ ಇದೆ. ಈಗಾಗಲೇ ಬಾಲಿವುಡ್​ನಲ್ಲಿ ಸಾಕಷ್ಟು ಕ್ರೀಡಾಪಟುಗಳ ಜೀವನದ ಕುರಿತು ಸಿನಿಮಾಗಳು ಬಂದಿವೆ. ಇದೀಗ ಹೊಸದಾಗಿ ರಾಹುಲ್ ದ್ರಾವಿಡ್ ಜೀವನ ಚರಿತ್ರೆ ತೆರೆ ಮೇಲೆ ಬರುವ ಸಾಧ್ಯತೆಯಿದೆ. ಆದರೆ ದ್ರಾವಿಡ್ ಜೀವನದ ಸಿನಿಮಾ ಬರುತ್ತೆ ಎಂದಾಕ್ಷಣ ಎಲ್ಲರ ಕುತೂಹಲ ಸೆಳೆಯುವ ವಿಚಾರ ಏನಪ್ಪ ಅಂದರೆ, ಸಿನಿಮಾದಲ್ಲಿ ದ್ರಾವಿಡ್ ಪಾತ್ರ ಯಾರು ಮಾಡಲಿದ್ದಾರೆ ಎಂಬುದು. ಡ್ರಾವಿಡ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಕಲಕ್ಕೆ ಸ್ವತಃ ದ್ರಾವಿಡ್ ಅವರೇ ತೆರೆ ಎಳೆದಿದ್ದಾರೆ. ಒಂದು ವೇಳೆ ನನ್ನ ಜೀವನ ಸಿನಿಮಾ ಆಗೋದೇ ಆದರೆ, ನನ್ನ ಪಾತ್ರಕ್ಕೆ ಬಾಲಿವುಡ್​ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಸೂಕ್ತ ಎಂಬ ಅನಿಸಿಕೆಯನ್ನು ಮುಂದಿಟ್ಟಿದ್ದಾರೆ.

ಈಗಾಗಲೇ ಹೇಳಿರುವಾಗೆ ದ್ರಾವಿಡ್ ಅವರು ಸರಳ, ಸಜ್ಜನ ವ್ಯಕ್ತಿ. ತನ್ನ ಕ್ರಿಕೆಟ್ ಕೆರಿಯರ್ ಮುಗಿದ ಬಳಿಕ ಹೆಚ್ಚಾಗಿ ಸಮಾಜ ಸೇವೆ ಹಾಗೂ ಕುಟುಂಬದದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು. ಯಾವುದೇ ವಿಚಾರವನ್ನಾದರು ಯೋಚಿಸಿ ನಿರ್ಧಾರ ತೆಗುಕೊಳ್ಳುವಂತಹ ವ್ಯಕ್ತಿತ್ವ. ಮಾತಿಗಿಂತ ಕೆಲಸದಲ್ಲೇ ಹೆಚ್ಚಾಗಿ ಕಾರ್ಯನಿರತರಾಗಿದ್ದ ದ್ರಾವಿಡ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಅಷ್ಟಕ್ಕು ಇಲ್ಲಿ ದ್ರಾವಿಡ್ ಅವರು ಅಮೀರ್ ಖಾನ್ ಅವರ ಹೆಸರು ತೆಗೆದುಕೊಳ್ಳಲು ಬಲವಾದ ಕಾರಣಗಳಿವೆ. ಯಾಕೆಂದರೆ ಅಮೀರ್ ಅವರು ಈಗಾಗಲೇ 'ಲಗಾನ್' ಹಾಗೂ 'ದಂಗಲ್' ನಂತಹ ಕ್ರೀಡಾಧಾರಿತ ಸಿನಿಮಾಗಳಲ್ಲಿ ಧೂಳೆಬ್ಬಿಸಿದವರು. ಅಲ್ಲದೆ ಕ್ರಿಕೆಟ್ ಬಗ್ಗೆ ಸಾಕಷ್ಟು ಅಭಿಮಾನ ಹಾಗೂ ಅರಿತು ಕೊಂಡಿರುವ ಅಮೀರ್ ಖಾನ್ ಅವರು ದ್ರಾವಿಡ್ ಪಾತ್ರಕ್ಕೆ ಸರಿಯಾಗೆ ಹೊಂದಿಕೊಳ್ಳುತ್ತಾರೆ.

ಅಲ್ಲದೆ ದ್ರಾವಿಡ್​​ರನ್ನು ಕ್ರಿಕೆಟ್ ಲೋಕದಲ್ಲಿ ಕೆಲವರು ಮಿ. ಫರ್ಫೆಕ್ಷನಿಸ್ಟ್​​​ ಎಂದು ಕರೆಯುತ್ತಾರೆ. ಅದೇರೀತಿ ಅಮೀರ್ ಖಾನ್​ ಸಿನಿಮಾ ರಂಗದಲ್ಲಿ ಮಿ. ಫರ್ಫೆಕ್ಷನಿಸ್ಟ್ ಎಂದೇ ಹೆಸರು ವಾಸಿಯಾಗಿದ್ದಾರೆ. ಹಾಗಾಗೆ ಸದ್ಯ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಅವರ ಪಾತ್ರ ಮಾಡಲು ಅಮೀರ್ ಖಾನ್ ಅವರೇ ಅನುಯೋಜಿತ ನಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
First published:July 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...