• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • All ok Vs Rahul Dito: ಕನ್ನಡ ರ್‍ಯಾಪ್ ಲೋಕದಲ್ಲಿ ಮತ್ತೊಂದು ವಾರ್, ಚಂದನ್​ ಶೆಟ್ಟಿ ಬೀಳಿಸೋಕೆ ಸ್ಕೆಚ್ ಹಾಕಿದ್ರಂತೆ ಆಲ್​ ಓಕೆ!

All ok Vs Rahul Dito: ಕನ್ನಡ ರ್‍ಯಾಪ್ ಲೋಕದಲ್ಲಿ ಮತ್ತೊಂದು ವಾರ್, ಚಂದನ್​ ಶೆಟ್ಟಿ ಬೀಳಿಸೋಕೆ ಸ್ಕೆಚ್ ಹಾಕಿದ್ರಂತೆ ಆಲ್​ ಓಕೆ!

ಕನ್ನಡ ರ್‍ಯಾಪರ್ಸ್​

ಕನ್ನಡ ರ್‍ಯಾಪರ್ಸ್​

Kannada Rap Songs: ಅಲೋಕ್​ ಜೊತೆಗೆ ರ್‍ಯಾಪ್ ಜರ್ನಿ (Rap Journey) ಶುರು ಮಾಡಿದ್ದ ರಾಹುಲ್​ DIT-0 ಇದೀಗ ಓಪನ್​ ಆಗಿ ರ್‍ಯಾಪರ್​ ಅಲೋಕ್​ ವಿರುದ್ಧ ಹರಿಹಾಯ್ದಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಕನ್ನಡ ರ್‍ಯಾಪ್ ಲೋಕದಲ್ಲಿ (Kannada Rap World) ಮತ್ತೊಂದು ವಾರ್​​ (War) ಶುರುವಾಗಿದೆ. ಈ ಹಿಂದಿನಿಂದಲೂ ಕನ್ನಡ ರ್‍ಯಾಪ್ ಮಾಡುವವರ ಮಧ್ಯೆ ಎಲ್ಲವೂ ಸರಿ ಇಲ್ಲ ಅಂತಾನೇ ಹೇಳಲಾಗುತ್ತಿತ್ತು. ಆದರೆ ಇತ್ತೀಚೆಗೆ ರ್‍ಯಾಪರ್​ ರಾಹುಲ್​ (Rapper Rahul Dit-o) ರಿಲೀಸ್ ಮಾಡಿರೋ ಒಂದು ಹಾಡಿನಿಂದ ಈಗ ಮತ್ತೆ ಈ ವಾರ್​ ಶುರುವಾಗಿದೆ ಎಂದರೇ ತಪ್ಪಾಗಲ್ಲ. ಚಂದನ್​ ಶೆಟ್ಟಿ (Chandan Shetty) , ಅಲೋಕ್ (All Ok)​ ಮಧ್ಯೆ ವೈಮನಸ್ಸು ಇತ್ತು ಎಂಬುಂದು ಎಲ್ಲರಿಗೂ ಗೊತ್ತಿತ್ತು. ಆದರೆ ನಮ್ಮಿಬ್ಬರ ನಡುವೆ ಏನಿಲ್ಲ ಅಂತ ಅಲೋಕ್​, ಚಂದನ್​ ಹೇಳಿಕೊಂಡಿದ್ದರು. ಇದೀಗ ಅಲೋಕ್​ ಜೊತೆಗೆ ರ್‍ಯಾಪ್ ಜರ್ನಿ (Rap Journey) ಶುರು ಮಾಡಿದ್ದ ರಾಹುಲ್​ DIT-0 ಇದೀಗ ಓಪನ್​ ಆಗಿ ರ್‍ಯಾಪರ್​ ಅಲೋಕ್​ ವಿರುದ್ಧ ಹರಿಹಾಯ್ದಿದ್ದಾರೆ.


ಕನ್ನಡ ರ್‍ಯಾಪ್  ವರ್ಲ್ಡ್​​ನಲ್ಲಿ ಮತ್ತೊಂದು ವಾರ್​!


5 ವರ್ಷಗಳ ಹಿಂದೆ ನಂಗನ್ಸಿದ್ದು ಅನ್ನುವ ರ್‍ಯಾಪ್ ಸಾಂಗ್​ ರಿಲೀಸ್ ಆಗಿತ್ತು. ಇದೀಗ ನಂಗನ್ಸಿದ್ದು ಪಾರ್ಟ್ 2 ಎಂಬ ಹಾಡಿನಲ್ಲಿ ರಾಹುಲ್​, ಆಲ್​ ಒಕೆ ಅವರ ವಿರುದ್ಧ ಗರಂ ಆಗಿದ್ದಾರೆ. ನಂಗನ್ಸಿದ್ದು ಪಾರ್ಟ್ 1ರಲ್ಲಿ ಚಂದನ್​ ಶೆಟ್ಟಿಗೆ ಟಾಂಗ್​ ಕೊಡುವ ರೀತಿ ಲಿರಿಕ್ಸ್ ಇತ್ತು. ರ್‍ಯಾಪ್ ಅಂತ ಗಿಮಿಕ್​ ಮಾಡಬೇಡ ಅನ್ನುವ ಸಾಹಿತ್ಯ ಈ ಸಾಂಗ್​ನಲ್ಲಿತ್ತು. ಇದು ಆಲ್​ ಒಕೆ ಪ್ರೊಡಕ್ಷನ್​ನಲ್ಲೇ ರೆಡಿಯಾಗಿತ್ತು. ಆದರೆ ನಂಗನ್ಸಿದ್ದು ಪಾರ್ಟ್​ 2 ಅಲ್ಲಿ ಆಲ್​ ಓಕೆ ವಿರುದ್ದವೇ ರಾಹುಲ್​ DIT-0 ಕಿಡಿಕಾರಿದ್ದಾರೆ.


ಆಲ್​ ಓಕೆ ವಿರುದ್ಧ ರೊಚ್ಚಿಗೆದ್ದ ರಾಹುಲ್​ DIT-0!


ಆಲ್​ ಓಕೆ, ರಾಹುಲ್​  DIT-0, ಎಮ್​ ಸಿ ಬಿಜ್ಜು, ಡಿಜೆ ಮಿಥಲ್​, ಎಲ್ಲರೂ ಒಂದೇ ಟೀಮ್​ನಲ್ಲಿ ಇದ್ದವರು. ಈ ಟೀಮ್​ನಿಂದ ಸಾಕಷ್ಟು ಸೂಪರ್​ ಹಿಟ್​ ಹಾಡುಗಳು ಬಂದಿತ್ತು. ಆದರೆ ಈಗ ಆಲ್​ ಓಕೆ ಒಂದು ಕಡೆಯಾದರೆ, ಉಳಿದವರು ಮತ್ತೊಂದು ಕಡೆ ಇದ್ದಾರೆ. ಇದೀಗ ನಂಗನ್ಸಿದ್ದು ಪಾರ್ಟ್ 2 ಹಾಡಿನಲ್ಲಿ ಆಲ್​ ನಾಟ್ ಓಕೆ ಎಂಬ ಶೀರ್ಷಿಕೆಯಲ್ಲೇ ಸಾಂಗ್​ ಓಪನ್​ ಆಗುತ್ತೆ. ಈ ಸಾಂಗ್​ ನಿನಗೊಬ್ಬನಿಗೋಸ್ಕರ ಅಂತ ಹೇಳಲಾಗಿದೆ. ಆಲ್​ ಓಕೆ ಗೆ ರಾಹುಲ್​ ಡೈರೆಕ್ಟ್​ ಹಿಟ್​ ಮಾಡಿದ್ದಾರೆ.


ಇದನ್ನೂ ಓದಿ: ವೇದಿಕೆ ಮೇಲೆ ಹಾಡ್ತಿದ್ದ ಆಲ್ ​ಒಕೆ ಅಲೋಕ್​ರನ್ನು ತಳ್ಳಿ ಬೀಳಿಸಿದ ಫ್ಯಾನ್, ವಿಡಿಯೋ ವೈರಲ್​!


ಇಂಥ ಜಗಳಕ್ಕೆ ಕಾರಣವೇನು?


ನ್ಯಾಯಾಲಯ ಕಟಕಟೆ ಥೀಮ್​ನಲ್ಲೇ ಸಾಂಗ್​ ಶೂಟ್​ ಮಾಡಲಾಗಿದೆ. ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನು ಬಿಟ್ಟು ಬೇರೆ ಏನು ಹೇಳುವುದಿಲ್ಲ ಅಂತ ರಾಹುಲ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಸೇಮ್​ ಆಲ್​ ಓಕೆಯಂತೆ ಕಾಣುವ ವ್ಯಕ್ತಿಯನ್ನು ಮತ್ತೊಂದು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಆಲ್​ ಓಕೆ ನಂಬಿಕೆ ದ್ರೋಹ ಮಾಡಿದ್ದಾರೆ ಅಂತ ರಾಹುಲ್ ಆರೋಪಿಸಿದ್ದಾರೆ. ಡೋಂಟ್​ ಡೋಂಟ್​ ವರಿ ಡವ್​ ಮಾಡಿದ್ದು ನೀನು ಬರಿ ಎಂಬ ಲಿರಿಕ್ಸ್​ ಎಲ್ಲ ಇದೆ.


ಮಾತಲ್ಲೇ ಇರಬೇಕು ಯಾವತ್ತೂ ತೂಕ ಬಂದ ಹಣದಲ್ಲಿ ಮಾಡಿರುವ ದೋಖಾ ಅಂತ ಆಲ್​ ಓಕೆ ವಿರುದ್ಧ ರಾಹುಲ್​ ಗರಂ ಆಗಿದ್ದಾರೆ. ಜೊತೆಗೆ ಬಂದ ಹಣದಲ್ಲಿ 50 ಪರ್ಸೆಂಟ್​ ನೀನು ಇಟ್ಕೊಂಡು ಮಿಕ್ಕಿದ್ದು ಕೊಟ್ಟಿದ್ಯಾ ಅಂತ ಹಾಡಿನಲ್ಲೇ ರಾಹುಲ್​ ಕೇಳಿದ್ದಾರೆ.


ಚಂದನ್​ ಶೆಟ್ಟಿ ಬೀಳಿಸೋಕೆ ಪ್ಲಾನ್ ಮಾಡಿದ್ರಾ ಆಲ್​ ಓಕೆ?


'ಶೆಟ್ಟಿನಾ ಕೆಳಗೆ ಬೀಳಿಸೋ ಪ್ಲ್ಯಾನ್​ ನಿಂದಾಗಿತ್ತು, ನಿನ್ ಕೈಯಲ್ಲಿ ಆಗ್ಲಿಲ್ಲ, ಅದಕ್ಕೆ ನಾನ್​ ಬೇಕಾಗಿತ್ತು' ಎಂದ ಲಿರಿಕ್ಸ್​ ಇದೆ. ಇದನ್ನು ನೋಡಿದರೆ ಆಗ ಆಲ್​ ಓಕೆ ಚಂದನ್​ ಶೆಟ್ಟಿನಾ ಬೀಳಿಸೋ ಪ್ಲ್ಯಾನ್ ಮಾಡಿದ್ರಾ ಅನ್ನುವ ಅನುಮಾನ ಮೂಡದೇ ಇರದು. ಇದೆಲ್ಲಾ ಆದ್ಮೇಲೆ ಇಬ್ಬರು ಒಂದಾಗಿ ನಾಟಕ ಮಾಡಿದ್ದೀರಾ? ಎಂಬ ಪ್ರಶ್ನೆಯನ್ನು ಹಾಡಿನ ಮೂಲಕ ರಾಹುಲ್​ ಡಿಟೋ ಕೇಳಿದ್ದಾರೆ. ಇದಕ್ಕೆ ಆಲ್​ ಓಕೆ ತಮ್ಮ ಹಾಡಿನ ಮೂಲಕವೇ ಟಕ್ಕರ್ ಕೊಡ್ತಾರಾ ನೋಡಬೇಕು

Published by:ವಾಸುದೇವ್ ಎಂ
First published: