HOME » NEWS » Entertainment » RAHUL BOSE WAS CHARGED 4 4 2 RUPEES FOR TWO BANANAS AT A 5 STAR HOTEL AE

ಆ ನಟ ಕೇಳಿದ್ದು ಎರಡೇ ಬಾಳೆಹಣ್ಣು: ಸ್ಟಾರ್​ ಹೋಟೆಲ್​ ಬಿಲ್​ ಮಾಡಿದ್ದು 442 ರೂಪಾಯಿ..!

ಇದೇನು ಎರಡೇ ಬಾಳೆಹಣ್ಣಿಗೆ 442 ರೂಪಾಯಿಯೇ ಎಂದು ಹುಬ್ಬೇರಿಸಬೇಡಿ. ಇದು ವಿದೇಶದಿಂದ ಆಮದು ಮಾಡಿಕೊಂಡಿರುವ ಹಣ್ಣಲ್ಲ. ಶುದ್ಧ ದೇಶಿ ಹಣ್ಣು.  2 ಬಾಳೆಹಣ್ಣಿಗಾಗಿ ಬರೋಬ್ಬರಿ 442 ರೂಪಾಯಿ ತೆತ್ತ ನಟ ಮತ್ತಾರೂ ಅಲ್ಲ.

Anitha E | news18
Updated:July 24, 2019, 6:03 PM IST
ಆ ನಟ ಕೇಳಿದ್ದು ಎರಡೇ ಬಾಳೆಹಣ್ಣು: ಸ್ಟಾರ್​ ಹೋಟೆಲ್​ ಬಿಲ್​ ಮಾಡಿದ್ದು 442 ರೂಪಾಯಿ..!
ಬಾಲಿವುಡ್​ ನಟ ರಾಹುಲ್​ ಬೋಸ್​
  • News18
  • Last Updated: July 24, 2019, 6:03 PM IST
  • Share this:
ಒಂದು ಬಾಳೆಹಣ್ಣಿನ ಬೆಲೆ ಸಾಮಾನ್ಯವಾಗಿ 5 ರೂಪಾಯಿಯಿಂದ ಆರಂಭವಾಗುತ್ತದೆ. ಅದರಲ್ಲೂ ಅದರ ಗಾತ್ರ ಕೊಂಚ ಚಿಕ್ಕದಿದ್ದರೆ ಇನ್ನೂ ಕಡಿಮೆಗೆ ಸಿಗುತ್ತದೆ. ಅದೇ ಚೆನ್ನಾಗಿರುವ ಬಾಳೇಹಣ್ಣಿನ ಬೆಲೆ ಹೆಚ್ಚೆಂದ್ರೆ 10 ರೂಪಾಯಿವರೆಗೂ ಇರುತ್ತೆ. ಆದರೆ ಇಲ್ಲೊಬ್ಬರು ಬಾಲಿವುಡ್ ನಟ ಕೇವಲ ಎರಡು ಬಾಳೆಹಣ್ಣಿಗೆ ಬರೋಬ್ಬರಿ 442 ರೂಪಾಯಿ ತೆತ್ತಿದ್ದಾರೆ.

ಹೌದು, ಇದೇನು ಎರಡೇ ಬಾಳೆಹಣ್ಣಿಗೆ 442 ರೂಪಾಯಿಯೇ ಎಂದು ಹುಬ್ಬೇರಿಸಬೇಡಿ. ಇದು ವಿದೇಶದಿಂದ ಆಮದು ಮಾಡಿಕೊಂಡಿರುವ ಹಣ್ಣಲ್ಲ. ಶುದ್ಧ ದೇಶಿ ಹಣ್ಣು.  2 ಬಾಳೆಹಣ್ಣಿಗಾಗಿ ಬರೋಬ್ಬರಿ 442 ರೂಪಾಯಿ ತೆತ್ತ ನಟ ಮತ್ತಾರೂ ಅಲ್ಲ ಅವರೇ ರಾಹುಲ್​ ಬೋಸ್​.

Rahul Bose
ನಟ ರಾಹುಲ್​ ಬೋಸ್​


ಕಳೆದ ಕೆಲ ದಿನಗಳಿಂದ ಶೂಟಿಂಗ್‍ಗಾಗಿ ಚಂಡೀಗಢದ ಐಶಾರಾಮಿ ಹೋಟೆಲ್‍ನಲ್ಲಿ ತಂಗಿರುವ ರಾಹುಲ್, ಜಿಮ್‍ನಲ್ಲಿ ವರ್ಕೌಟ್ ಮಾಡುವಾಗ ಎರಡು ಬಾಳೆಹಣ್ಣಿಗೆ ಆರ್ಡರ್ ಮಾಡಿದ್ದಾರೆ. ಹೋಟೆಲ್ ಸಿಬ್ಬಂದಿ ಬಾಳೆಹಣ್ಣಿನ ಜತೆಗೆ ಬಿಲ್ ಅನ್ನೂ ತಂದುಕೊಟ್ಟಿದ್ದಾರೆ. ಅದನ್ನು ನೋಡಿ ರಾಹುಲ್ ಬೋಸ್ ಫುಲ್ ಶಾಕ್ ಆಗಿದ್ದಾರೆ.

ನಂತರ ಎರಡು ಬಾಳೆಹಣ್ಣಿಗೆ ಬಿಲ್​ ಕಳುಹಿಸಿರುವ ಹೋಟೆಲ್​ ಹಾಗೂ ದುಬಾರಿ ಬೆಲೆಯ ಹಣ್ಣಿನ ಬಗ್ಗೆ ಒಂದು ವಿಡಿಯೋ ಮಾಡಿ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.ಅಷ್ಟೇ ಅಲ್ಲ ರಾಹುಲ್​ ಮಾಡಿರುವ ವಿಡಿಯೋಗೆ ಸಾಕಷ್ಟು ಮಂದಿ ಟ್ವೀಟಿಗರೂ ಸಲಹೆಗಳ ಜತೆಗೆ ಮೋಸ ಹೋಗಿದ್ದಕ್ಕೆ ಸಹಾನುಭೂತಿಯನ್ನೂ ತೋರುತ್ತಿದ್ದಾರೆ.

 

ಯಾಕಂದ್ರೆ ಜಿಎಸ್‍ಟಿಯನ್ನೂ ಸೇರಿಸಿ ಆ ಎರಡು ಬಾಳೆಹಣ್ಣುಗಳ ಬೆಲೆ 442 ರೂಪಾಯಿ. ಬಿಲ್, ಬಾಳೆಹಣ್ಣಿನ ಜತೆಗೆ ರಾಹುಲ್ ಬೋಸ್ ಮಾಡಿರುವ ವಿಡಿಯೋ ಮಾಡಿದ್ದು, ಸದ್ಯ ಆ ವಿಡಿಯೋ ಸಖತ್ ವೈರಲ್ ಆಗಿದೆ.ರಾಹುಲ್​ ಮಾಡಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಐಷಾರಾಮಿ ಹೋಟೆಲ್​ಗೆ ಹೋಗಿ ರಾಹುಲ್​ ಮಾಡಿದ್ದು ಸರಿಯಿಲ್ಲ ಎಂದರೆ, ಮತ್ತೆ ಕೆಲವರು ಹೋಟೆಲ್​ ಅವರು ಮಾಡಿದ್ದು ಸರಿಯಿಲ್ಲ ಎನ್ನುತ್ತಿದ್ದಾರೆ.

Rashmika Mandanna: ಹೊಸ ಫೋಟೋಶೂಟ್​ನಲ್ಲಿ ಮುದ್ದಾಗಿ ಮಿಂಚಿದ ರಶ್ಮಿಕಾ ಮಂದಣ್ಣ


 
First published: July 24, 2019, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories