Anitha EAnitha E
|
news18-kannada Updated:April 21, 2020, 7:21 PM IST
ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸಕ್ರಿಯವಾಗಿರುವ ನಟಿ. ಇನ್ಸ್ಟಾಗ್ರಾಂನಲ್ಲಿ ಸದಾ ರುಚಿಕರ ಖಾದ್ಯಗಳನ್ನು ಮಾಡುವ ವಿಡಿಯೋಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಾ ಇರುತ್ತಾರೆ.
ಈ ಹಿಂದೆ ಹೀಗೆ ತಿಂಡಿ ಇರುವ ಪ್ಲಾಸ್ಟಿಕ್ ಕವರ್ ಅನ್ನು ಬಿಸಿ ನೀರಿನಲ್ಲಿ ಇಟ್ಟು ಅಡುಗೆ ಮಾಡಿದ್ದರು. ಆ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರವೂ ರಾಗಿಣಿ ತಮ್ಮ ಅಡುಣೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದಾರೆ.
ಈಗ ಲಾಕ್ಡೌನ್ನಲ್ಲೂ ರಾಗಿಣಿ ಸಿಂಪಲ್ ಆಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಮಾಡುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರ ಜೊತೆಗೆ ಈಗ ಮನೆಯಲ್ಲಿ ಕಸ ಗುಡಿಸುತ್ತಾ ಒಂದು ವಿಡಿಯೋ ಹಾಕಿದ್ದಾರೆ.
ಈ ವಿಡಿಯೋದಲ್ಲಿ ಅವರು ಕಸ ಗುಡಿಸುವಾಗ ಯಾವ ರೀತಿಯ ಬಟ್ಟೆ ತೊಡಬೇಕು ಎಂದು ಟಿಪ್ಸ್ ಕೊಟ್ಟಿದ್ದಾರೆ. ಮನೆಯಲ್ಲಿ ಕಸ ಗುಡಿಸುವುದೂ ಒಂದು ರೀತಿಯ ವ್ಯಾಯಾಮ. ಅದಕ್ಕೆ ವರ್ಕ್ಔಟ್ ಮಾಡಲು ಬಯಸುವವರು ಅದಕ್ಕೆ ತಕ್ಕಂತೆ ಬೆವರುವ ದಪ್ಪನಾದ ಬಟ್ಟೆಗಳನ್ನು ತೊಟ್ಟು ಕಸ ಗುಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಾಗಿಣಿ ದ್ವಿವೇದಿ
ಇನ್ನು ರಾಗಿಣಿ ಅವರ ಈ ವಿಡಿಯೋ ನೋಡಿದ ನೆಟ್ಟಿಗರು, ನಟಿಗೆ ಕೆಲವು ಸಲೆಗಳನ್ನು ನೀಡಿದ್ದಾರೆ. ಕಸ ಗುಡಿಸುವುದರ ಬಗ್ಗೆ ತಮ್ಮ ಕೆಲಸದವರ ಬಳಿ ತರಬೇತಿ ಪಡೆಯುವಂತೆ ಮನವಿ ಮಾಡಿದ್ದಾರೆ.
Mia Khalifa: ಲಾಕ್ಡೌನ್ನಲ್ಲೇ ಎರಡನೇ ಮದುವೆಯಾದ ಮಾಜಿ ನೀಲಿ ತಾರೆ ಮಿಯಾ ಖಲೀಫಾ..!
Published by:
Anitha E
First published:
April 21, 2020, 7:21 PM IST