news18-kannada Updated:September 11, 2020, 12:05 PM IST
ನಟಿ ರಾಗಿಣಿ.
ಬೆಂಗಳೂರು (ಸೆ. 11): ಡ್ರಗ್ಸ್ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಹೀಗಾಗಿ, ಇಂದು ಮಧ್ಯಾಹ್ನದ ಬಳಿಕ ರಾಗಿಣಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಒಟ್ಟು 8 ದಿನಗಳ ತನಿಖೆಯಲ್ಲಿ ರಾಗಿಣಿ ಯಾವುದೇ ಮಾಹಿತಿಯನ್ನು ಬಾಯಿ ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಗಿಣಿಯನ್ನು ಮತ್ತೆ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳು ಕೇಳುವ ಸಾಧ್ಯತೆಯಿದೆ. ಒಂದು ವೇಳೆ ಕಸ್ಟಡಿಗೆ ಕೇಳಿಲ್ಲವೆಂದರೆ ರಾಗಿಣಿ ಜೈಲಿಗೆ ಹೋಗೋದು ಪಕ್ಕಾ ಎನ್ನಲಾಗಿದೆ.
ಮತ್ತೊಂದು ಕಡೆ ನಟಿ ರಾಗಿಣಿ ದ್ವಿವೇದಿ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಇಂದು ಮಧ್ಯಾಹ್ನದ ಬಳಿಕ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ. ರಾಗಿಣಿಗೆ ಜಾಮೀನು ಸಿಗೋದು ಬಹುತೇಕ ಅನುಮಾನ ಎನ್ನಲಾಗಿದೆ. ಈಗಾಗಲೇ ಸಿಸಿಬಿ ತನಿಖಾಧಿಕಾರಿಗಳು ರಾಜ್ಯ ಮಹಿಳಾ ನಿಲಯಕ್ಕೆ ಆಗಮಿಸಿದ್ದಾರೆ. ಕೆಲಕಾಲ ರಾಗಿಣಿಯ ವಿಚಾರಣೆ ನಡೆಸಿ, ಬಳಿಕ ಎಫ್ಎಸ್ಎಲ್ಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಗಿಣಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ರಾಗಿಣಿಯ ರಕ್ತ, ಮೂತ್ರ ಪರೀಕ್ಷೆಯ ವರದಿ ಇನ್ನೂ ಬರಬೇಕಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ಇಂಟರ್ನ್ಯಾಷನಲ್ ಪಾರ್ಟಿ ನಡೆಸುತ್ತಿದ್ದ ವಿರೇನ್ ಖನ್ನಾಗಿತ್ತು ಸಿನಿಮಾ ಸ್ಟಾರ್ಸ್ ಲಿಂಕ್
ಸ್ಯಾಂಡಲ್ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿ ವೈಭವ್ ಜೈನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ದ ಐದನೇ ಆರೋಪಿಯಾಗಿರುವ ವೈಭವ್ ಜೈನ್ ತಲೆ ಮರೆಸಿಕೊಂಡಿದ್ದಾರೆ. ಮೊದಲು ಕೊರೊನಾ ಹೋಂ ಕ್ವಾರಂಟೈನ್ ಎಂದು ನೆಪ ಹೇಳಿದ್ದ ವೈಭವ್ ಜೈನ್ ನಂತರ ಎಸ್ಕೇಪ್ ಆಗಿದ್ದ. ನಿನ್ನೆ ತನ್ನ ಪರ ವಕೀಲರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಇಂದು ಸಿಸಿಹೆಚ್ 33 ನೇ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ನಟಿ ರಾಗಿಣಿ ಇಷ್ಟು ದಿನವಾದರೂ ಯಾವ ವಿಷಯವನ್ನೂ ಬಾಯಿಬಿಟ್ಟಿಲ್ಲ. ನಟಿ ರಾಗಿಣಿಯನ್ನು ವಿಚಾರಣೆ ಮಾಡೋದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಏನೇ ಪ್ರಶ್ನೆ ಮಾಡಿದರೂ ನನಗೇನೂ ಗೊತ್ತಿಲ್ಲ, ಮರೆತಿದ್ದೇನೆ ಎಂದು ರಾಗಿಣಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಡಿಲೀಟ್ ಆಗಿರುವ ಸಂದೇಶಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಮಾಡಿದರೂ ರಾಗಿಣಿ ತನಿಖೆಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ.
Published by:
Sushma Chakre
First published:
September 11, 2020, 9:39 AM IST