ಇಂದು ಮಧ್ಯಾಹ್ನ 3ಕ್ಕೆ ನಟಿಯರಾದ ರಾಗಿಣಿ-ಸಂಜನಾ ಜಾಮೀನು ಅರ್ಜಿ ವಿಚಾರಣೆ..!

ಈ ಹಿಂದೆ ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಾಲಯ, ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಇನ್ನು ಇಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಅರ್ಜಿ ವಿಚಾರಣೆ ವೇಳೆ, ಇದೇ ಪ್ರಕರಣದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಂದ ಆಕ್ಷೇಪಣೆ ಸಲ್ಲಿಕೆ ಸಾಧ್ಯತೆ ಇದೆ.

Anitha E | news18-kannada
Updated:September 21, 2020, 12:57 PM IST
ಇಂದು ಮಧ್ಯಾಹ್ನ 3ಕ್ಕೆ ನಟಿಯರಾದ ರಾಗಿಣಿ-ಸಂಜನಾ ಜಾಮೀನು ಅರ್ಜಿ ವಿಚಾರಣೆ..!
ರಾಗಿಣಿ ಹಾಗೂ ಸಂಜನಾ
  • Share this:
ಮಾದಕ ವಸ್ತು ಪ್ರಕರಣಕ್ಕೆ ಸಬಂಧಿಸಿದಂತೆ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಇಂದು ಬೆಳಿಗ್ಗೆ ರಾಗಿಣಿ ಹಾಗೂ ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇತ್ತು. ಈ ಹಿಂದೆ ಅಂದರೆ ಸೆ. 18ರಂದು ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ಇತ್ತು. ಆದರೆ ಅದನ್ನು ಸೆ.19ಕ್ಕೆ ಮುಂದೂಡಲಾಗಿತ್ತು. ನಂತರ ಸೆ. 19ರಂದು ಇಬ್ಬರೂ ನಟಿಯರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಅದನ್ನು ಇಂದಿಗೆ ಅಂದರೆ ಸೆ. 21ಕ್ಕೆ ಮುಂದೂಡಿತ್ತು. ಇಂದು ಬೆಳಿಗ್ಗೆ ಸಹ ಈ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 3ಕ್ಕೆ ಮುಂದಕ್ಕೆ ಹಾಕಲಾಗಿದೆ. ಸಿಸಿಎಚ್ 33ನೇ ಕೋರ್ಟ್ ಹಾಲ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಕಳೆದ ಕೆಲವು ದಿನಗಳಿದಂದ ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರದ ಕಾರಗೃಹದಲ್ಲಿದ್ದಾರೆ. 

ಈ ಹಿಂದೆ ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಾಲಯ, ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಇನ್ನು ಇಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಅರ್ಜಿ ವಿಚಾರಣೆ ವೇಳೆ, ಇದೇ ಪ್ರಕರಣದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಂದ ಆಕ್ಷೇಪಣೆ ಸಲ್ಲಿಕೆ ಸಾಧ್ಯತೆ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ಕು ಮಂದಿ ಆರೋಪಿಗಳ ಜಾಮೀನು ಅರ್ಜಿ ಸಹ ಇಂದೇ ವಿಚಾರಣೆಗೆ ಬರಲಿದೆ.

Actress Ragini Dwivedi, Sanjjana Galrani Police Custody Ends Today on Sandalwood Drug Case
ರಾಗಿಣಿ ಹಾಗೂ ಸಂಜನಾ


ಸ್ಯಾಂಡಲ್​ವುಡ್​ ಡ್ರಗ್​​ ಮಾಫಿಯಾ ಕುರಿತಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಕಳೆದ ವಾರ ಸ್ಟಾರ್ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರನ್ನು ವಿಚಾರಣೆ ಮಾಡಿದ್ದರು. ಅವರ ಬಳಿಯಿಂದ ಡ್ರಗ್ಸ್​ ಪಾರ್ಟಿಗಳ ಕುರಿತಾಗಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rishab Shetty: ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾಯಕಿಯರ ಆಯ್ಕೆ: ರಿಷಭ್​ ಶೆಟ್ಟಿ ನಿಮಗೆ ಮಾತಿನ ಬೆಲೆ ಗೊತ್ತಿಲ್ವಾ ಎಂದ ನೆಟ್ಟಿಗ..!

ಅಷ್ಟೇ ಅಲ್ಲ, ಬಂಧಿತ ಆರೋಪಿ ವೈಭವ್​ ಜೈನ್​ ಅವರು ಆಯೋಜಿಸುತ್ತಿದ್ದರು ಎನ್ನಲಾಗಿತ್ತಿರುವ ಡ್ರಗ್ಸ್​ ಪಾರ್ಟಿಗಳ ಕುರಿತಾಗಿ ಮತ್ತಷ್ಟು ಮಂದಿ ಸೆಲೆಬ್ರಿಟಿಗಳ ವಿಚಾರಣೆ ನಡೆಸಿದ್ದಾರೆ ಸಿಸಿಬಿ ಪೊಲೀಸರು. ಅಕುಲ್​ ಬಾಲಾಜಿ ಹಾಗೂ ನಟ ಸಂತೋಷ್​ ಅವರ ರೆಸಾರ್ಟ್​ ಹಾಗೂ ವಿಲ್ಲಾದಲ್ಲಿ ವೈಭವ್​ ಜೈನ್​ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು ಎಂಬ ಅನುಮಾನದ ಮೇರೆಗೆ, ಈ ನಟರನ್ನೂ ಶನಿವಾರ ವಿಚಾರಣೆ ನಡೆಸಲಾಗಿತ್ತು. ವಿಚಾರಣೆಗೆ ಹಾಜರಾಗಿದ್ದ ಅಕುಲ್​ ಬಾಲಾಜಿ ಹಾಗೂ ಸಂತೋಷ್ ತಮ್ಮ ಆಸ್ತಿಯ ದಾಖಲಾತಿಗಳೊಂದಿಗೆ ಬಂದಿದ್ದರು.

ಇನ್ನು ಜೈಲಿನಲ್ಲಿರುವ ರಾಗಿಣಿ ಹಾಗೂ ಸಂಜನಾ ಜೈಲಾಧಿಕಾರಿಗಳಿಗೆ ಮಾಂಸಾಹಾರ ಹಾಗೂ ಮಲಗಲು ಮಂಚ ನೀಡುವಂತೆ ಬೇಡಿಕೆ ಇಡುತ್ತಿದ್ದಾರಂತೆ. ಅಲ್ಲದೆ ತಮ್ಮ ಐಷಾರಾಮಿ ಜೀವನದ ಕೆಲವು ಅಗತ್ಯಗಳನ್ನು ಜೈಲಿನಲ್ಲಿ ಪೂರೈಸುವಂತೆ ಹಠ ಹಿಡಿದಿದ್ದಾರಂತೆ. ಇದು ಜೈಲಿನ ಅಧಿಕಾರಿ ಹಾಗೂ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ ಎಂದು ಹೇಳಲಾಗಿತ್ತಿದೆ.
Published by: Anitha E
First published: September 21, 2020, 12:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading