ರಾಗಿಣಿ ಚಂದ್ರನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್; ಡೈನಾಮಿಕ್ ಸುಂದರಿಯ ಸಿನಿಮಾ ರಿಲೀಸ್!

Law: ರೊಮ್ಯಾಂಟಿಕ್‌ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುವುದು ನನಗೆ ಇಷ್ಟವಿರಲಿಲ್ಲ. ಚಾಲೆಂಜಿಂಗ್‌ ಪಾತ್ರ ಹಾಗೂ ಉತ್ತಮ ಚಿತ್ರಕಥೆ ಹೊಂದಿರುವ ʻಲಾʼ ಚಿತ್ರದಲ್ಲಿ ಅಭಿನಯಿಸಿರುವುದು ತಮಗೆ ಸಂತಸದ ವಿಚಾರ ಎನ್ನುತ್ತಾರೆ ರಾಗಿಣಿ ಚಂದ್ರನ್‌.


Updated:July 2, 2020, 7:20 PM IST
ರಾಗಿಣಿ ಚಂದ್ರನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್; ಡೈನಾಮಿಕ್ ಸುಂದರಿಯ ಸಿನಿಮಾ ರಿಲೀಸ್!
ಲಾ
  • Share this:
ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ಪಾತ್ರದಲ್ಲಿ ಮಿಂಚುವ ಅವಕಾಶ ಡೈನಾಮಿಕ್ ಸೊಸೆಗೆ ದೊರೆತಿದೆ. ಅಷ್ಟೇ ಅಚ್ಚುಕಟ್ಟಾಗಿ ಅವರು ಪಾತ್ರವನ್ನೂ ನಿಭಾಯಿಸಿದ್ದಾರೆ. ಮದುವೆಯಾದ ಬಳಿಕ ನಟಿಮಣಿಯರಿಗೆ ಅವಕಾಶಗಳು ಸಿಗುವುದಿಲ್ಲ ಅನ್ನೋ ಮಾತಿದೆ. ಆದರೆ ರಾಗಿಣಿ ಮದುವೆಯಾದ ಐದು ವರ್ಷಗಳ ಬಳಿಕ ಸ್ಯಾಂಡಲ್​​ವುಡ್​​​ಗೆ ಎಂಟ್ರಿ ಕೊಟ್ಟು, ಆ ಮಾತನ್ನು ಸುಳ್ಳಾಗಿಸಿದ್ದಾರೆ.     ಸಿನಿಮಾ ಬಿಡುಗಡೆಯ ಬಗ್ಗೆ ರಾಗಿಣಿ ಬಹಳ ಉತ್ಸುಕರಾಗಿದ್ದಾರೆ. ಇದೇ ಜುಲೈ 17 ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗ್ತಿರುವ ಹಿನ್ನೆಲೆಯಲ್ಲಿ ನಟಿ ರಾಗಿಣಿ ಚಂದ್ರನ್ʻಲಾʼ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ.

ʻಲಾʼ ಸಿನಿಮಾ ಕ್ರೈಂ ಥ್ರಿಲ್ಲರ್‌ ಕಥೆಯನ್ನ ಹೊಂದಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಡುವ ನಂದಿನಿ ಪಾತ್ರದ ಸುತ್ತ ಕಥೆ ಇದ್ದು, ಆಸಕ್ತಿಕರ ನಿರೂಪಣೆ ಈ ಚಿತ್ರದ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ ರಾಗಿಣಿ ಚಂದ್ರನ್‌.ʻಲಾʼ ಚಿತ್ರದಲ್ಲಿ ಅಭಿನಯಿಸಲು ಸಿಕ್ಕ ಅವಕಾಶದ ಬಗ್ಗೆ ಮಾತನಾಡುತ್ತಾ, ತಾವು ಈ ಸಿನಿಮಾದಲ್ಲಿ ಅಭಿನಯಿಸಲು ಈ ಚಿತ್ರಕಥೆಯೇ ಕಾರಣ. ನಿರ್ದೇಶಕ ರಘು ಸಮರ್ಥ್‌ ಚಿತ್ರದ ಬಗ್ಗೆ ಹೇಳಿದಾಗ ಸ್ಕ್ರಿಪ್ಟ್‌ ಇಷ್ಟವಾಗಿದ್ದರಿಂದ ಈ ಚಿತ್ರದಲ್ಲಿ ಅಭಿನಯಿಸಿದ್ದಾಗಿ ತಿಳಿಸಿದ್ದಾರೆ.

ರೊಮ್ಯಾಂಟಿಕ್‌ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುವುದು ನನಗೆ ಇಷ್ಟವಿರಲಿಲ್ಲ. ಚಾಲೆಂಜಿಂಗ್‌ ಪಾತ್ರ ಹಾಗೂ ಉತ್ತಮ ಚಿತ್ರಕಥೆ ಹೊಂದಿರುವ ʻಲಾʼ ಚಿತ್ರದಲ್ಲಿ ಅಭಿನಯಿಸಿರುವುದು ತಮಗೆ ಸಂತಸದ ವಿಚಾರ ಎನ್ನುತ್ತಾರೆ ರಾಗಿಣಿ ಚಂದ್ರನ್‌.

ʻಲಾʼ ಸಿನಿಮಾ


ರಾಗಿಣಿ ಚಂದ್ರನ್‌ ಪ್ರಮುಖ ಪಾತ್ರದಲ್ಲಿರೋ ಈ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್‌ ಕುಮಾರ್‌, ಸುಧಾರಾಣಿ ಅಭಿನಯಿಸಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಡಿಜಿಟಲ್‌ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ʻಲಾʼ ಪುನೀತ್‌ ರಾಜ್‌ ಕುಮಾರ್‌ ರವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ರೂಪುಗೊಂಡಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಇದೇ ಜುಲೈ 17 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 200 ದೇಶಗಳಲ್ಲಿ ಬಿಡುಗಡೆಯಾಗಲಿದೆ.

ರಾಗಿಣಿ ಚಂದ್ರನ್


ವಿಶೇಷ ಅಂದರೆ ಜುಲೈ 21ರಂದು ರಾಗಿಣಿ ಚಂದ್ರನ್ ಹುಟ್ಟುಹಬ್ಬ. ಅವರ ಡೆಬ್ಯೂ ಸಿನಿಮಾನೇ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ರಿಲೀಸ್ ಆಗುತ್ತಿರುವ ಸಂಭ್ರಮ ಅವರ ಈ ಬಾರಿಯ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಆಗಿಸಲಿದೆ.
First published: July 2, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading