HOME » NEWS » Entertainment » RAGHU WINE STORE OF RAGHU GOWDA CREATED A SENSATION IN SOCIAL MEDIA SINCE FEW DAYS VB

ಸೋಷಿಯಲ್ ಮೀಡಿಯಾದ ಹೊಸ ಸೆನ್ಸೇಷನ್; ಫಾರೀನ್ ಬ್ರ್ಯಾಂಡ್, ಲೋಕಲ್ ಮಾಲು ರಘು ವೈನ್ ಸ್ಟೋರ್

ದೊಡ್ಡ ದೊಡ್ಡ ಕಲಾವಿದರು ಹೇಳಿರುವಂತೆ ಈ ಚಪ್ಪಾಳೆ ಮತ್ತು ಸಪೋರ್ಟ್ ಒಂಥರಾ ಡ್ರಗ್ಸ್ ಇದ್ದ ಹಾಗೆ. ಒಂದು ಬಾರಿ ಜನ ಇಷ್ಟಪಡಲು ಪ್ರಾರಂಭಿಸಿದರೆ, ಸಪೋರ್ಟ್ ಮಾಡಲು ಪ್ರಾರಂಭಿಸಿದರೆ ನಮಗೆ ಅದು ಇನ್ನೂ ಬೇಕು ಅನ್ನಿಸುತ್ತದೆ. ಇನ್ನೂ ಹೆಚ್ಚಿನದನ್ನು ಮಾಡಲು ಇಷ್ಟವಾಗುತ್ತದೆ.

news18-kannada
Updated:August 2, 2020, 9:35 AM IST
ಸೋಷಿಯಲ್ ಮೀಡಿಯಾದ ಹೊಸ ಸೆನ್ಸೇಷನ್; ಫಾರೀನ್ ಬ್ರ್ಯಾಂಡ್, ಲೋಕಲ್ ಮಾಲು ರಘು ವೈನ್ ಸ್ಟೋರ್
ರಘು ಗೌಡ
  • Share this:
ಸಾಮಾಜಿಕ ಜಾಲತಾಣ ಈಗ ಮೊದಲಿನಂತಿಲ್ಲ. ಸಾವಿರಾರು ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳಿಗೆ ತಮ್ಮ ಕಲೆಗಳನ್ನು ಅನಾವರಣ ಮಾಡುವ ತಾಣವಾಗಿ ಬೆಳೆದುನಿಂತಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಟ್ರೆಂಡ್ ಆಗಿದ್ದು ಹಾಗೂ ಸದ್ಯ ಆಗುತ್ತಿರುವುದು ಅಂದರೆ ಅದು ರಘು ಗೌಡ ಅವರ ರಘು ವೈನ್ ಸ್ಟೋರ್.

ಹೌದು, ಸುಮ್ಮನೆ ಟೈಂಪಾಸ್​ಗೆ ಎಂದು ಪ್ರಾರಂಭಿಸಿದ ಕಾಮಿಡಿ ವಿಡಿಯೋಗಳು ಇವತ್ತು ರಘು ಅವರ ವೃತ್ತಿಯೇ ಆಗಿದೆ. ಅವರು ತಮ್ಮ ಜರ್ನಿ, ಮುಂದಿನ ಯೋಜನೆಗಳ ಬಗ್ಗೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ್ದಾರೆ.

"ಸಿನಿಮಾಗಾಗಿ ವಿಪ್ರೋ ಕೆಲಸ ಬಿಟ್ಟೆ… ನಾನು ಹುಟ್ಟಿ ಬೆಳೆದಿದ್ದು, ಸದ್ಯ ನೆಲೆಸಿರೋದು ಬೆಂಗಳೂರಿನಲ್ಲೇ. ಫ್ಲಾರೆನ್ಸ್ ಹೈ ಸ್ಕೂಲ್​ನಲ್ಲಿ ಶಾಲಾ ಶಿಕ್ಷಣ, ಕೆಎಲ್ಇ ಕಾಲೇಜಿನಲ್ಲಿ ಪಿಯು, ನಂತರ ವಿಜಯ ಕಾಲೇಜಿನಲ್ಲಿ ಬಿಸಿಎ ಶಿಕ್ಷಣ ಪೂರ್ಣಗೊಳಿಸಿದೆ. ಒಂದೆರಡು ಕಡೆಗಳಲ್ಲಿ ಕೆಲಸ ಮಾಡಿ ನಂತರ ವಿಪ್ರೋದಲ್ಲಿ ಅವಕಾಶ ಸಿಕ್ಕಿತು." ಆದರೆ ಕೆಲ ತಿಂಗಳಲ್ಲೇ ಸಿನಿಮಾ ಆಸೆ ಬೆನ್ನತ್ತಿ ಆ ಕೆಲಸ ಬಿಟ್ಟು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟರು.

Raghu wine store of raghu gowda created a sensation in social media since few days
ರಘು ಗೌಡ.


"ಒಂದು ಸಿನಿಮಾ ತಂಡವೇನೋ ಸಿಕ್ಕಿತು. ಆದರೆ 6 ತಿಂಗಳಾದರೂ ಸಿನಿಮಾ ಶುರುವಾಗಲೇ ಇಲ್ಲ. ನಿರ್ದೇಶಕರನ್ನು ಕೇಳಿದರೆ, ಇನ್ನೂ ನಿರ್ಮಾಪಕರನ್ನು ಹುಡುಕುತ್ತಿದ್ದೇವೆ, ಸ್ವಲ್ಪ ದಿನ ಕಾಯಿ ಅಂದರು. ನನ್ನ ಸಿನಿಪಯಣ ಅಲ್ಲಿಗೇ ಸ್ಥಗಿತವಾಯಿತು. ನಂತರ ಮತ್ತೆ ಕೆಲಸಕ್ಕೆ ಸೇರಿಕೊಂಡೆ. ಅದರ ಜೊತೆಗೆ ಎಫ್ಎಮ್​​ಗಳಿಗೆ ಕಂಟೆಂಟ್ ಕೊಡುತ್ತಿದ್ದೆ. ಕಲರ್ಸ್ ಕನ್ನಡ ವಾಹಿನಿಯ ಸೋಷಿಯಲ್ ಮೀಡಿಯಾಗಾಗಿಯೇ ಶೋಗಳನ್ನು ಮಾಡಿದೆ. ಕೆಲ ಜಾಹೀರಾತುಗಳನ್ನೂ ಮಾಡಿದ್ದೇನೆ. ಕ್ರಮೇಣ ಮೆಟ್ರೋ ಸಾಗಾ ಸೇರಿ, ಅಲ್ಲೂ ಎರಡು ವರ್ಷ ಕೆಲಸ ಮಾಡಿದೆ. ಈಗ ಕೆಲ ತಿಂಗಳಿನಿಂದ ನಾನು ಇಂಡಿಪೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ."

Allu Arjun: ಮತ್ತೊಂದು ಹೊಸ ದಾಖಲೆ ಬರೆದ ಅಲ್ಲು ಅರ್ಜುನ್​ ಸ್ಟೆಪ್​ ಹಾಕಿರುವ ಬುಟ್ಟ ಬೊಮ್ಮಾ ಹಾಡು

ಲಾಕ್​ಡೌನ್​ ನಿಮಗೆ ವರವೋ ಅಥವಾ ಶಾಪವೋ?"ಲಾಕ್​​ಡೌನ್ ವರವೂ ಹೌದು, ಶಾಪವೂ ಹೌದು…ಎಲ್ಲರಂತೆ ನನಗೂ ಲಾಕ್​ಡೌನ್ ಎಫೆಕ್ಟ್ ಕಾಡಿತು. ಸಂಬಳ ಕೂಡ ಕಟ್ ಆಯಿತು. ಆದರೆ ಮೆಟ್ರೋ ಸಾಗಾ ಒಂದೊಳ್ಳೆ ಪ್ಲ್ಯಾಟ್​ಫಾರ್ಮ್​​ ಕೊಟ್ಟಿತು. ಮೊದಲು 21 ದಿನಗಳ ಕಾಲ ಲಾಕ್​ಡೌನ್​ ಘೋಷಣೆಯಾಯಿತು. ಅದಕ್ಕೆ ನಾನು ಪ್ರತಿದಿನ ಒಂದು ಕಂಟೆಂಟ್ ಎಂಬಂತೆ 21 ಕಂಟೆಂಟ್​ಗಳನ್ನು ರೆಡಿ ಮಾಡಿಕೊಂಡೆ. ನಂತರ ಲಾಕ್​ಡೌನ್ ವಿಸ್ತರಣೆಯಾಗುತ್ತಾ ಬಂದಂತೆ, ನಾನೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಹೋದೆ. ಅದೇ ರೀತಿ ಮೂರು ತಿಂಗಳಲ್ಲಿ 80ರಿಂದ 90 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದೇನೆ. 4 ವರ್ಷಗಳಿಂದ ಆಗದ್ದು, 4 ತಿಂಗಳಲ್ಲಿ ಆಗಿದೆ."

"ನಾಲ್ಕು ವರ್ಷಗಳಿಂದ ನಾನು ವಿಡಿಯೋಸ್ ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಈಗ ಯಾಕೆ ಜನರಿಗೆ ಹೆಚ್ಚು ರೀಚ್ ಆಗುತ್ತಿದ್ದೇನೆ ಅಂದರೆ ಅದಕ್ಕೆ ಕಾರಣ ಸ್ಥಿರತೆ. ಸ್ಥಿರವಾಗಿ ಜನರಿಗೆ ಇಷ್ಟವಾಗುವ ವಿಡಿಯೋಗಳನ್ನು ನಾವು ಕ್ರಿಯೇಟ್ ಮಾಡಿದರೆ ಉತ್ತಮ. ಅದೇ ಕಾರಣದಿಂದಲೇ ನನಗೆ ಇಷ್ಟು ಬೆಂಬಲ ಸಿಗುತ್ತಿದೆ. ಮಾರ್ಚ್​​ನಲ್ಲಿ 4 ಸಾವಿರ ಇದ್ದ ನನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಈಗ 1 ಲಕ್ಷ 27 ಸಾವಿರ ದಾಟಿದೆ. ಹಾಗೇ ಯೂಟ್ಯೂಬ್​ನಲ್ಲೂ 67 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ." ಜನರ ಬೆಂಬಲವೇ ನನಗೆ ಶ್ರೀರಕ್ಷೆ ಎನ್ನುತ್ತಾರೆ ರಘು."ದೊಡ್ಡ ದೊಡ್ಡ ಕಲಾವಿದರು ಹೇಳಿರುವಂತೆ ಈ ಚಪ್ಪಾಳೆ ಮತ್ತು ಸಪೋರ್ಟ್ ಒಂಥರಾ ಡ್ರಗ್ಸ್ ಇದ್ದ ಹಾಗೆ. ಒಂದು ಬಾರಿ ಜನ ಇಷ್ಟಪಡಲು ಪ್ರಾರಂಭಿಸಿದರೆ, ಚಪ್ಪಾಳೆ ಹೊಡೆಯಲು ಶುರು ಮಾಡಿದರೆ, ಸಪೋರ್ಟ್ ಮಾಡಲು ಪ್ರಾರಂಭಿಸಿದರೆ, ನಮಗೆ ಅದು ಇನ್ನೂ ಬೇಕು ಅನ್ನಿಸುತ್ತದೆ. ಇನ್ನೂ ಹೆಚ್ಚಿನದನ್ನು ಮಾಡಲು ಇಷ್ಟವಾಗುತ್ತದೆ."

"ಲಾಕ್​ಡೌನ್​ ಸಮಯ ಜನರಲ್ಲಿ ಸಾಮಾನ್ಯವಾಗಿ ಒಂದು ಖಿನ್ನತೆ ಶುರುವಾಯಿತು. ಮುಂದೇನು ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಮನೆಯಲ್ಲೇ ಇದ್ದು ಬೋರ್ ಆಗಲು, ಶುರುವಾಯಿತು. ಅದೇ ಸಮಯದಲ್ಲಿ ನನ್ನ ವಿಡಿಯೋಗಳನ್ನು ನೋಡಿದವರು, 2 ನಿಮಿಷಗಳ ನಿಮ್ಮ ವಿಡಿಯೋಸ್ ನೋಡಿದರೆ ಸಾಕು ನಮಗೆ ಆ ದಿನ ಪೂರ್ತಿ ಚೆನ್ನಾಗಿರುತ್ತೆ ಎಂದೆಲ್ಲಾ ಮೆಸೇಜ್ ಮಾಡತೊಡಗಿದರು. ಅದು ನನಗೆ ಅತಿದೊಡ್ಡ ಕಾಂಪ್ಲಿಮೆಂಟ್. ಜನರನ್ನು ಮತ್ತಷ್ಟು ರಂಜಿಸಬೇಕು ಅಂತ ಹೆಚ್ಚು ಪ್ರಯತ್ನಪಡಲು ಶಕ್ತಿ ನೀಡಿತು."

ಸೋಷಿಯಲ್ ಮೀಡಿಯಾದಲ್ಲಿ ಪ್ರಮುಖ ಸವಾಲುಗಳೇನು?

"ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಜನ ವಿಡಿಯೋಗಳನ್ನು ಮಾಡುತ್ತಾರೆ. ಎಲ್ಲರೂ ಒಂದೇ ವಿಷಯದ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡುತ್ತೇವೆ. ನಾವು ಮಾಡುವ ವಿಡಿಯೋ ಮತ್ತೊಬ್ಬರನ್ನು ಕಾಪಿ ಮಾಡಿದಂತೆ ಇರಬಾರದು. ಬೋರಿಂಗ್ ಆಗಿರಬಾರದು. ಹೀಗಾಗಿಯೇ ನಾನು ನನ್ನ ವಿಡಿಯೋಗಳಲ್ಲಿ ನನ್ನ ಸ್ವಂತ ಅನುಭವಗಳನ್ನು ಹಾಸ್ಯರೂಪದಲ್ಲಿ ವಿಭಿನ್ನವಾಗಿ ತರಲು ಪ್ರಯತ್ನಿಸಿದೆ."

‘ಸುಶಾಂತ್​​ ನನ್ನ ಕೈಗೊಂಬೆ, ಹೆಂಗ್ ಬೇಕಾದ್ರೂ ಆಟ ಆಡಿಸ್ಬಹುದು‘ - ರಿಯಾ ಹಳೇ ವಿಡಿಯೋ ಭಾರೀ ವೈರಲ್​​​

"ಅದಕ್ಕೊಂದು ಉದಾಹರಣೆ ಹೇಳುತ್ತೇನೆ, ಅಮ್ಮ ಮಗನಿಗೆ ಬೈಯುವ ವಿಡಿಯೋಗಳನ್ನು ಈಗಾಗಲೇ ಸಾವಿರಾರು ಮಂದಿ ಮಾಡಿದ್ದಾರೆ, ಮುಂದೆಯೂ ಸಾವಿರಾರು ಜನ ಮಾಡುತ್ತಾರೆ. ಆದರೆ ನಾನೇನ್ ಮಾಡಿದೆ ಅಂದರೆ ನನ್ನ ವಿಡಿಯೋಗಳಲ್ಲಿ ನನ್ನದೇ ಸ್ವಂತ ಅನುಭವಗಳನ್ನು, ನನ್ನದೇ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದೆ. ಆಗ ಜನ ಕೂಡ ತಮಗೂ ಈ ರೀತಿಯ ಅನುಭವ ಆಗಿತ್ತಲ್ಲವಾ ಅಂತಂದುಕೊಳ್ಳಲು ಪ್ರಾರಂಭಿಸಿದರು."

"ನನ್ನ ಅಬ್ಸರ್ವೇಷನ್ ಮೊದಲಿಂದಲೂ ತುಂಬಾ ಚೆನ್ನಾಗಿದೆ. ಒಂದು ಅಂಗಡಿಗೆ ಹೋದರೆ ಅಂಗಡಿಯವ ಹೇಗೆ ಮಾತನಾಡುತ್ತಾನೆ? ಜಗಳ ಆಡುವಾಗ ಹೇಗೆ ಮಾತನಾಡುತ್ತಾನೆ? ಹೀಗೆ ಜನರು ಹೆಚ್ಚು ಗಮನ ಹರಿಸದ ಸಣ್ಣ ಪುಟ್ಟ ವಿಚಾರಗಳನ್ನೂ ನಾನು ನನ್ನ ವಿಡಿಯೋನಲ್ಲಿ ತೋರಿಸಲು ಪ್ರಯತ್ನಿಸಿದೆ. ನಾವು ಈಗ ಮಿಸ್ ಮಾಡಿಕೊಳ್ಳುತ್ತಿರುವ ಹಳೆಯ ಹಲವಾರು ವಿಷಯಗಳ ಬಗ್ಗೆ ಮಾತನಾಡಲು ಶುರು ಮಾಡಿದೆ. ನಮ್ಮ ಬಗ್ಗೇನೇ ಹೇಳುತ್ತಿದ್ದಾರೆ ಅಂತನಿಸುವ ವಿಷಯಗಳನ್ನು ವಿಭಿನ್ನವಾಗಿ, ವಿಚಿತ್ರವಾಗಿ ಕಂಟೆಂಟ್ ಕ್ರಿಯೇಟ್ ಮಾಡಲು ಪ್ರಯತ್ನಿಸಿದೆ. ಜನ ಒಪ್ಪಿಕೊಳ್ಳಲು ಪ್ರಾರಂಭಿಸಿದರು. ಮೋಟಿವೇಷನ್ ಮನೋಜ್, ನಿಬ್ಬ ನಿಬ್ಬಿ, ಎಗ್ಸಾಚರೇಟಿಂಗ್ ಅಪ್ಪ, ರೌಡಿ ಮಂಜ, ಸ್ಯಾಡ್ ಸಂತೋಷ್ ಹೀಗೆ ಹಲವು ಪಾತ್ರಗಳನ್ನು ಸೃಷ್ಟಿಸಿದ್ದೇನೆ."

ನಿಮ್ಮ ಮುಂದಿನ ಪ್ಲ್ಯಾನ್​ಗ ಳೇನು?

"ಈಗಾಗಲೇ ನನ್ನ ವಿಡಿಯೋಗಳನ್ನು ನೋಡಿ ವೆಬ್​ಸಿರೀಸ್, ಕಿರುಚಿತ್ರಗಳು ಹಾಗೂ ಎರಡು ಮೂರು ಸಿನಿಮಾಗಳಲ್ಲೂ ಅವಕಾಶ ದೊರೆತಿದೆ. ಸದ್ಯ ಕೊರೋನಾ ಹಾಗೂ ಲಾಕ್​ಡೌನ್ ಇರುವ ಕಾರಣ ಯಾವುದೇ ಶೂಟಿಂಗ್ ಪ್ರಾರಂಭವಾಗಿಲ್ಲ. ಲಾಕ್​ಡೌನ್​ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದೆ. ನನಗೆ ಮೊದಲಿಂದಲೂ ಬರಹಗಾರ, ನಿರ್ದೇಶಕನಾಗುವ ಆಸೆಯಿತ್ತು. ಈಗ ನಟನಾಗಲು ಅವಕಾಶ ದೊರತಿದೆ. ಬರವಣಿಗೆ, ನಿರ್ದೇಶನ, ನಟನೆ ಯಾವುದಾದರೂ ಇರಲಿ ಆದರೆ ಚಿತ್ರರಂಗದಲ್ಲೇ ಉಳೀಬೇಕು ಅನ್ನೋ ಆಸೆಯಿದೆ. ಕಲಾವಿದನಾಗಿ ಗುರುತಿಸಿಕೊಳ್ಳಬೇಕು.""ನನಗೆ ಕಾರ್ಯಕ್ರಮ ನಿರೂಪಣೆ ಮಾಡುವುದು, ಫುಡ್ ವಿಡಿಯೋಸ್ ಮಾಡುವುದು ಇಷ್ಟ. ಪ್ರತಿಯೊಂದು ಜಿಲ್ಲೆಗೂ ಹೋಗಿ ನಮ್ಮ ನಾಡಿನ ವೈವಿಧ್ಯತೆಯನ್ನು ವಿಶ್ವಕ್ಕೆ ತೋರಿಸುವ ಆಸೆಯಿದೆ. ನನ್ನತನ ಎಂಬುದು ನನ್ನ ಎಲ್ಲ ಶೋಗಳಲ್ಲೂ ಇರಬೇಕು. ಉಳಿದಂತೆ ಇನ್ನೇನು ಮುಂದೆ ಜೀವನದಲ್ಲಿ ಏನೆಲ್ಲಾ ಸವಾಲುಗಳು ಸಿಗುತ್ತವೋ ಅದೆಲ್ಲವನ್ನೂ ಖುಷಿಯಿಂದಲೇ ಸ್ವೀಕರಿಸುತ್ತೇನೆ."

ವಿಡಿಯೋ ಕ್ರಿಯೇಟ್ ಮಾಡಲು ನಿಮ್ಮ ಸ್ಫೂರ್ತಿಯೇನು?

"ನನ್ನ ಸ್ಫೂರ್ತಿ ಪ್ರಮುಖವಾಗಿ ಜಗ್ಗೇಶ್ ಸರ್. ನಾನವರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತೇನೆ. ಅವರನ್ನು ಫಾಲೋ ಮಾಡುತ್ತೀನಿ. ಕೆಲ ಅಂತಾರಾಷ್ಟ್ರೀಯ ಕಾಮಿಡಿ ಪ್ರೋಗ್ರಾಂಗಳೂ ಸ್ಫೂರ್ತಿ ನೀಡಿವೆ, ಅವುಗಳನ್ನು ನೋಡಿದ ಬಳಿಕ ನಾವೂ ಯಾಕೆ ಪ್ರಾದೇಶಿಕವಾಗಿ ಅಂತಹ ಕಂಟೆಂಟ್ ಮಾಡಬಾರದು ಅಂತ ಆಲೋಚಿಸಿದೆ, ಅದೂ ನನ್ನ ಸ್ಫೂರ್ತಿಯೇ. ಇಂಡಿಪೆಂಡೆಂಟ್ ಆರ್ಟಿಸ್ಟ್​ಗಳನ್ನು ಸಪೋರ್ಟ್ ಮಾಡಿ, ಒಬ್ಬ ಸ್ವತಂತ್ರ ಕಲಾವಿದನಿಗೆ ಬೆಂಬಲ ನೀಡಿದರೆ, ಎಲ್ಲೋ ಎಲೆಮರೆ ಕಾಯಿಯಂತಿರುವ ಮತ್ತೊಬ್ಬ ಕಲಾವಿದನಿಗೆ ನಾನೂ ಏನಾದರೂ ಮಾಡಬಹುದು ಅನ್ನೋ ಧೈರ್ಯ ಬರುತ್ತೆ. ಎಲ್ಲಿಂದ ಎಂತೆಂಥಾ ಪ್ರತಿಭೆ ಹೊರಗೆ ಬರುತ್ತೆ ಅಂತ ಯಾರೂ ಹೇಳಲಾಗುವುದಿಲ್ಲ" ಎಂಬುದು ರಘು ಗೌಡ ಅವರ ಮಾತು.
Published by: Vinay Bhat
First published: August 2, 2020, 9:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories