Raghu Dixit: ಕ್ಯಾನ್​ ಫಿಲ್ಮ್​ ಫೆಸ್ಟಿವಲ್​ಗೆ ರಘು ದೀಕ್ಷಿತ್​ - ವೀಸಾ ಬಂದ್ರೆ ಹೋಗ್ತಾರಂತೆ ನಮ್ಮ ಕನ್ನಡದ ಗಾಯಕ

Raghu Dixit: ಅವರ ಒಂದು ಗಂಟೆಯ ಪ್ರದರ್ಶನದ ಸಮಯದಲ್ಲಿ, ಪ್ರೇಕ್ಷಕರು ಎಲ್ಲಾ ಚಿಂತೆಗಳನ್ನು ಮರೆತು ಎಂಜಾಯ್ ಮಾಡಬೇಕು ಎಂಬುದು ರಘು ದೀಕ್ಷಿತ್ ಆಸೆ.

ರಘು ದೀಕ್ಷಿತ್​

ರಘು ದೀಕ್ಷಿತ್​

  • Share this:
ಕ್ಯಾನ್ ಚಲನಚಿತ್ರೋತ್ಸವ (Cannes Film Festival) ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಮನ್ನಣೆ ಪಡೆದಿರುವ ಒಂದು ಸಿನೆಮಾ (Film) ಕಾರ್ಯಕ್ರಮ. ಎಲ್ಲಾ ದೇಶಗಳಿಂದ ನಟ, ನಟಿಯರು ಭಾಗವಹಿಸುತ್ತಾರೆ. ಅದೊಂದು ಹೆಮ್ಮೆಯ ವಿಚಾರ. ಇನ್ನು ನಮ್ಮ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಈ ಸಿನಿಮೋತ್ಸವದ ಜ್ಯೂರಿಯಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಆದರೆ ಇದೀಗ ಮತ್ತೊಂದು ಸಂತೋಷದ ವಿಚಾರ ಬಂದಿದ್ದು, ಇದು ಕನ್ನಡಿಗರ ಪಾಲಿಗೆ ಒಂದು ಗರಿ ಎನ್ನಬಹುದು. ನಮ್ಮ ಕನ್ನಡದ ಹೆಸರಾಂತ ಗಾಯಕ ರಘು ದೀಕ್ಷಿತ್ (Raghu Dixit)  ಈ ಬಾರಿಯ ಕ್ಯಾನ್ ಸಿನಿಮೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.

ಹೌದು, ಗಾಯಕ-ಗೀತರಚನೆಕಾರ ರಘು ದೀಕ್ಷಿತ್ ಅವರು ತಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿದ್ದು, ಅವರ ಸಂಗೀತ ಸೆಟ್ ಲಿಸ್ಟ್ ಸಹ ಸಿದ್ಧವಾಗಿದ್ದು, ಕ್ಯಾನ್ ಚಲನಚಿತ್ರೋತ್ಸವದಲ್ಲಿ 'ದೇಸಿ' ಸಂಗೀತದ ಟಚ್ ನೀಡಲು ರೆಡಿಯಾಗಿದ್ದಾರೆ.

ವೀಸಾ ಬಂದ ನಂತರ ಹೇಳುವ ಆಲೋಚನೆಯಲ್ಲಿದ್ದೆ

ನಮ್ಮ ವೀಸಾ ಕೈಗೆ ಸಿಗುವವರೆಗೂ ನಾನೇ ಅದನ್ನು ಘೋಷಿಸುವುದು ಬೇಡ ಎಂದು ನಿರ್ಧರಿಸಿದ್ದೆ, ನಾನು ನನ್ನ ಅರ್ಜಿಯನ್ನು ಕಳುಹಿಸಿದ್ದೆ, ಆದರೆ ಸಂದರ್ಶನದ ದಿನಾಂಕ ಅಥವಾ ಯಾವುದೇ ಮಾಹಿತಿ ನನಗೆ ಬಂದಿಲ್ಲ. ಅದಕ್ಕಾಗಿಯೇ ನಾನು ಏನನ್ನೂ ಹೇಳಬಾರದು ಎಂದು ಸುಮ್ಮನಿದ್ದೆ. ಆದರೆ ನನ್ನ ವೀಸಾ ಬಂದರೆ, ನಾನು ವಿಶೇಷ ಪ್ರದರ್ಶನಕ್ಕಾಗಿ ಕ್ಯಾನ್ ಸಿನಿಮೋತ್ಸವಕ್ಕೆ ಹೋಗುತ್ತೇನೆ, ”ಎಂದು ದೀಕ್ಷಿತ್ ಹೇಳಿದ್ದಾರೆ.

ಅವರದ್ದೇ ಆದ ರಘು ದೀಕ್ಷಿತ್ ಪ್ರಾಜೆಕ್ಟ್ ಎಂಬ ಜನಪ್ರಿಯ ಬ್ಯಾಂಡ್‌ನ ಸ್ಥಾಪಕ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಪ್ರಮುಖ ಗಾಯಕ ರಘು ದೀಕ್ಷಿತ್, ನನಗೆ ಜೀವನ ಹಲವಾರು ಪಾಠ ಕಲಿಸಿದೆ. ಯಾವುದೇ ಖುಷಿ ವಿಚಾರವಾಗಲಿ ನಾವು ಮೊದಲೇ ಸಂಭ್ರಮಿಸಬಾರದು. ಮೊಟ್ಟೆಗಳು ಹೊರಬರುವ ಮೊದಲು ನಾವು ಕೋಳಿಗಳನ್ನು ಎಣಿಸಬಾರದು ಆದ್ದರಿಂದ ನಾನು ಮೊಟ್ಟೆಗಳು ಹೊರಬರಲು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತು ನಮ್ಮನ್ನ ಅರ್ಥ ಮಾಡಿಕೊಳ್ಳಲ್ಲ - ಹೀಗೆಂದಿದ್ದೇಕೆ ಅನುಷ್ಕಾ ಶರ್ಮಾ

ಅದೇನೇ ಇದ್ದರೂ, ಮೇ 21 ರಂದು ನಿಗದಿಪಡಿಸಲಾದ ಪ್ರದರ್ಶನಕ್ಕಾಗಿ ಎಲ್ಲಾ ಪೂರ್ವಸಿದ್ಧತೆಗಳು ಜಾರಿಯಲ್ಲಿವೆ. “ನಾವು ಪ್ರತಿದಿನ ಪ್ರದರ್ಶನ ನೀಡುತ್ತಿರುವುದರಿಂದ ನಾವು ಸಿದ್ಧರಾಗಿದ್ದೇವೆ. ಆದರೆ ದುರದೃಷ್ಟವಶಾತ್, ನಾವು ಪೂರ್ಣ ಬ್ಯಾಂಡ್‌ನೊಂದಿಗೆ ಹೋಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ತಮ್ಮ ಹಾಡುಗಳ ಮೂಲಕ ಲುಂಗಿಯನ್ನು ಪ್ರಸಿದ್ದಗೊಳಿಸಿರುವ ರಘು ದೀಕ್ಷಿತ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಖ್ಯಾತಿಗಳಿಸಿರುವ ಕಾನ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಕನ್ನಡದ ಹಾಡಲು ಅಲ್ಲಿನ ಜನರ ಬಾಯಲ್ಲಿ ಹೇಳಿಸುವ ಆಸೆ

ದೀಕ್ಷಿತ್ ಅವರು ಹಲವಾರು ವರ್ಷಗಳಿಂದ ಭಾರತೀಯ ಜನಾಂಗೀಯ ಸಂಗೀತದ ಮಿಶ್ರಣವನ್ನು ಹಾಸ್ಯದ ಸ್ಪರ್ಶದೊಂದಿಗೆ ಪ್ರಸ್ತುತಪಡಿಸುವ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ಅವರ ಅದ್ಭುತ ಸಂಗೀತ ಸಂಯೋಜನೆ ಹಾಗೂ ಗಾಯನದ ಮೂಲಕ ಪ್ರಪಂಚದಾದ್ಯಂತ ಹೆಸರು ಗಳಿಸಿದ್ದಾರೆ. ಅವರು 2012 ರಲ್ಲಿ ತಮ್ಮ ಬ್ಯಾಂಡ್‌ ಜೊತೆ ಬ್ರಿಟಿಷ್ ಕ್ವೀನ್ಸ್ ಡೈಮಂಡ್ ಜುಬಿಲಿ ಆಚರಣೆಗಳಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು 2015 ರಲ್ಲಿ ದೆಹಲಿಯಲ್ಲಿ ಕೋಲ್ಡ್‌ಪ್ಲೇ ಫ್ರಂಟ್‌ಮ್ಯಾನ್ ಕ್ರಿಸ್ ಮಾರ್ಟಿನ್ ಅವರೊಂದಿಗೆ ಸಹ ಪ್ರದರ್ಶನ ನೀಡಿದ್ದಾರೆ. ಈ ಬಾರಿ, ಅವರು ಕೇನ್ಸ್ ಫಿಲ್ಮ್ ಫೆಸ್ಟ್‌ನಲ್ಲಿ ತಮ್ಮ ಸಂಗೀತದ ಮೂಲಕ ಭಾರತದಲ್ಲಿ ಬೇರೂರಿರುವ ಕಥೆಗಳನ್ನು ಹೇಳಲು ಹೊರಟಿದ್ದಾರೆ.

ಇದನ್ನೂ ಓದಿ: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ಜ್ಯೂರಿಯಾಗಿ ಬಾಲಿವುಡ್​ ಬೆಡಗಿ - ದೀಪಿಕಾ ಡ್ರೆಸ್​ ನೋಡಿ ಅಭಿಮಾನಿಗಳು ಫಿದಾ

ಭಾರತದ ಕಥೆಗಳನ್ನು ಹೇಳುವುದು ನಮ್ಮ ಉದ್ದೇಶವಾಗಿದ್ದು, ನಮ್ಮ ಹಾಡುಗಳು ಅದನ್ನು ಸ್ವಾಭಾವಿಕವಾಗಿ ಪ್ರಸ್ತುತಪಡಿಸುತ್ತದೆ ಎಂಬುದು ಸಂತೋಷದ ವಿಚಾರ. ಮತ್ತು ಭಾರತಕ್ಕೆ ಬಂದಾಗ, ನಾವು ಆಧ್ಯಾತ್ಮಿಕತೆಯ ಮೊದಲ ತಾಣ. ಇಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಾಗಾಗಿ ಈ ಬಗ್ಗೆ ಹೆಚ್ಚು ಒತ್ತು ನೀಡಲಿದ್ದೇನೆ. ಅಲ್ಲದೆ ನಾವು ನೀಡುವ ಪ್ರದರ್ಶನದ ಸಮಯದಲ್ಲಿ ಜನ ಸಾಗರ ಸೇರಬೇಕು. ವಿದೇಶಿಗರ ಬಾಯಲ್ಲಿ ಕನ್ನಡ ಹಾಡು ಕೇಳಬೇಕು ಹಾಗೇ ಮಾಡುತ್ತೇನೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ. ಅವರ ಒಂದು ಗಂಟೆಯ ಪ್ರದರ್ಶನದ ಸಮಯದಲ್ಲಿ, ಪ್ರೇಕ್ಷಕರು ಎಲ್ಲಾ ಚಿಂತೆಗಳನ್ನು ಮರೆತು ಎಂಜಾಯ್ ಮಾಡಬೇಕು ಎಂಬುದು ರಘು ದೀಕ್ಷಿತ್ ಆಸೆ.
Published by:Sandhya M
First published: