ಮತ್ತೊಮ್ಮೆ ‘ನಿಮ್ಮೆಲ್ಲರ ಆಶೀರ್ವಾದ‘ ಕೇಳುತ್ತಿದ್ದಾರೆ ರಘು ದೀಕ್ಷಿತ್!

ಚಿತ್ರದಲ್ಲಿ ಇನ್ನೂ ಮೂರು ಹಾಡುಗಳು ಇರಲಿದ್ದು ಆ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಸಿನಿಮಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಡುಗಳು ಅಂತಿಮ ಸ್ವರೂಪ ಪಡೆಯುತ್ತಿವೆ

news18-kannada
Updated:October 17, 2020, 3:07 PM IST
ಮತ್ತೊಮ್ಮೆ ‘ನಿಮ್ಮೆಲ್ಲರ ಆಶೀರ್ವಾದ‘ ಕೇಳುತ್ತಿದ್ದಾರೆ ರಘು ದೀಕ್ಷಿತ್!
ನಿಮ್ಮೆಲ್ಲರ ಆಶೀರ್ವಾದ
  • Share this:
ಕೊರೋನಾ ನಂತರ ಚಿತ್ರರಂಗ ಚಿಗುರುತ್ತಿರುವ ಸಂದರ್ಭದಲ್ಲಿ, ‘ನಿಮ್ಮೆಲ್ಲರ ಆಶೀರ್ವಾದ’ ತಂಡ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದೆ. ಜನಪ್ರಿಯ ಬಹುಭಾಷಾ ಗಾಯಕ ರಘು ದೀಕ್ಷಿತ್ ಸಿನಿಮಾದ ಶೀರ್ಷಿಕೆ ಗೀತೆ ಹಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ನಿರ್ದೇಶಿಸಿರುವ ಹಾಡು ರಘು ದೀಕ್ಷಿತ್ ಕಂಠದಲ್ಲಿ ಮೂಡಿ ಬರುತ್ತಿದೆ.

ನಿಮ್ಮೆಲ್ಲರ ಆಶೀರ್ವಾದ ಚಿತ್ರವನ್ನು ನವನಿರ್ದೇಶಕ ರವಿಕಿರಣ್ ನಿರ್ದೇಶಿಸಿದ್ದು, ವರುಣ್ ಹೆಗ್ಡೆ ನಿರ್ಮಿಸಿದ್ದಾರೆ. ಚಿತ್ರವು ಪೊಲೀಸ್ ಒಬ್ಬನ ದೈನಂದಿನ ಜೀವನದ ಕಥಾಹಂದರವನ್ನು ಹೊಂದಿದೆ. ಶೀರ್ಷಿಕೆ ಗೀತೆಯು ಆರಕ್ಷಕರ ಸೇವೆಯನ್ನು ಬಿಂಬಿಸುವಂತಿದೆ.ಚಿತ್ರದಲ್ಲಿ ಇನ್ನೂ ಮೂರು ಹಾಡುಗಳು ಇರಲಿದ್ದು ಆ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಸಿನಿಮಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಡುಗಳು ಅಂತಿಮ ಸ್ವರೂಪ ಪಡೆಯುತ್ತಿವೆ.ಈಗಷ್ಟೆ ರೆಕಾರ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಶೀರ್ಷಿಕೆ ಗೀತೆಯು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ರಘು ದೀಕ್ಷಿತ್ ಹಾಡಿನ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.
Published by: Harshith AS
First published: October 17, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading