ವಿಡಿಯೋ ಸಾಂಗ್​ ಮೂಲಕ ಪ್ರಾಣಿ ಪ್ರೀತಿ ಮೆರೆದ ರಘು ದೀಕ್ಷಿತ್​!

ಅನೇಕ ಪ್ರಾಣಿಗಳು ಬೀದಿ ಬದಿಯಲ್ಲಿ ಅನಾಥವಾಗಿ ಬಿದ್ದಿರುತ್ತವೆ. ಅವುಗಳಿಗೆ ಒಂದು ಮನೆಯ ಅವಶ್ಯಕತೆ ಇರುತ್ತದೆ. ಹೀಗಾಗಿ ಇವುಗಳನ್ನು ದತ್ತು ಪಡೆದು ಅವುಗಳಿಗೆ ಒಂದು ಮನೆ ಕಲ್ಪಿಸಬೇಕು. ನಂತರ ಯಾವುದೇ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೆ ಅವು ನಿಮ್ಮನ್ನು ಪ್ರೀತಿ ಮಾಡುತ್ತವೆ ಎಂಬ ಸಂದೇಶವನ್ನು ಈ ಹಾಡು ಸಾರುತ್ತದೆ.

ರಘು ದೀಕ್ಷಿತ್​-ಸಂಯುಕ್ತಾ ಹೆಗಡೆ

ರಘು ದೀಕ್ಷಿತ್​-ಸಂಯುಕ್ತಾ ಹೆಗಡೆ

  • Share this:
ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಅವರು ಕನ್ನಡ ಹಾಗೂ ಹಿಂದಿಯಲ್ಲಿ ಸುನಾಮಿ ಹೆಸರಿನ ಹಾಡನ್ನು ರಿಲೀಸ್​ ಮಾಡುವ ಮೂಲಕ ಶ್ವಾನ ಪ್ರೇಮ ಮೆರೆದಿದ್ದಾರೆ. ಈ ಹಾಡಿನಲ್ಲಿ ನಾಯಿಗಳು ಮನುಷ್ಯನಿಗೆ ತೋರುವ ನಿಶ್ಕಲ್ಮಶ ಪ್ರೀತಿಯು ಬಗ್ಗೆ ಹೇಳಲಾಗಿದೆ. ಅಲ್ಲದೆ, ಈ ಹಾಡು ರಘು ದೀಕ್ಷಿತ್​ ಅವರ ತುಂಟಿ ಹಾಗೂ ಸಂಯುಕ್ತಾ ಹೊರನಾಡ್​ ಅವರ ಗುಂಡ ಹೆಸರಿನ ಶ್ವಾನಕ್ಕೆ ಅರ್ಪಣೆ ಮಾಡಲಾಗಿದೆ.  

ಅನೇಕ ಪ್ರಾಣಿಗಳು ಬೀದಿ ಬದಿಯಲ್ಲಿ ಅನಾಥವಾಗಿ ಬಿದ್ದಿರುತ್ತವೆ. ಅವುಗಳಿಗೆ ಒಂದು ಮನೆಯ ಅವಶ್ಯಕತೆ ಇರುತ್ತದೆ. ಹೀಗಾಗಿ ಇವುಗಳನ್ನು ದತ್ತು ಪಡೆದು ಅವುಗಳಿಗೆ ಒಂದು ಮನೆ ಕಲ್ಪಿಸಬೇಕು. ನಂತರ ಯಾವುದೇ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೆ ಅವು ನಿಮ್ಮನ್ನು ಪ್ರೀತಿ ಮಾಡುತ್ತವೆ ಎಂಬ ಸಂದೇಶವನ್ನು ಈ ಹಾಡು ಸಾರುತ್ತದೆ.

ಸುನಾಮಿಗೆ ಕನ್ನಡದಲ್ಲಿ ರಾಘವೇಂದ್ರ ವಿ ಕಾಮತ್​ ಸಾಲುಗಳನ್ನು  ಬರೆದರೆ ನೀರಜ್​ ರಾಜವತ್​ ಹಿಂದಿಯಲ್ಲಿ ಪದಗಳನ್ನು ಜೋಡಿಸಿದ್ದಾರೆ. ಮೊಟ್ಟ ಮೊದಲಿಗೆ ಈ ವಿಡಿಯೋ ಸಾಂಗ್​ ಮಾಡುವ ಆಲೋಚನೆ ಹೊಳೆದಿದ್ದು ನಟಿ ಸಂಯುಕ್ತಾ ಹೊರನಾ​ಡ್​ ಅವರಿಗೆ. ಅವರು ಬೇರೆ ಬೇರ ವ್ಯಕ್ತಿಗಳು ತಮ್ಮ ಸಾಕು ಪ್ರಾಣಿಗಳ ಜೊತೆ ತೆಗೆದುಕೊಂಡ ಫೋಟೋವನ್ನು ಕಲೆ ಹಾಕಿ, ಈ ಹಾಡಿನಲ್ಲಿ ತೋರಿಸಿದ್ದಾರೆ.

“ಈ ರೀತಿ ಹಾಡನ್ನು ರಚನೆ ಮಾಡಲು ಪ್ರಾಣಿಗಳ ಜೊತೆ ಇರುವ ಫೋಟೋಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದೆವು. ಈ ವೇಳೆ 1500ಕ್ಕೂ ಹೆಚ್ಚು ಜನರು ಫೋಟೋಗಳನ್ನು ಕಳುಹಿಸಿದ್ದರು,” ಎನ್ನುತ್ತಾರೆ ಸಂಯುಕ್ತಾ.ಈ ಹಾಡಿನ ಬಗ್ಗೆ ಮಾತನಾಡುವ ರಘು ದೀಕ್ಷಿತ್​, "ಸಿನಿಮಾ ಛಾಯಾಗ್ರಹಕ ಹಾಗೂ ಗೆಳೆಯ ಸ್ಯಾಮ್ಯುವೆಲ್​ ಆ್ಯಡಮ್ಸ್​ ಅವರು ಚಾರ್ಲಿ ಪ್ರಾಣಿ ದಯಾ ಕೇಂದ್ರದಿಂದ ಕೆಲ ದೃಶ್ಯಗಳನ್ನು ಸೆರೆ ಹಿಡಿದು ತಂದಿದ್ದರು. ಸಂಯುಕ್ತಾ ನಿರ್ದೇಶನದಲ್ಲಿ ಇದನ್ನು  ಎಡಿಟ್​ ಮಾಡಲಾಗಿದೆ. ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ," ಎನ್ನುತ್ತಾರೆ."ನಾನು ಸಾಕಿದ ತುಂಟಿ ಹೆಸರಿನ ನಾಯಿಗೆ ಅರ್ಪಣೆ ಮಾಡಲು ಈ ಹಾಡನ್ನು ಮಾಡಲು ಪ್ಲ್ಯಾನ್​ ಹಾಕಿದ್ದೆ. ತುಂಟಿಯನ್ನು ನಾನು ಪ್ರಾಣಿ ರಕ್ಷಣಾ ಕೇಂದ್ರದಿಂದ ಕರೆ ತಂದಿದ್ದೆ. ತುಂಟಿ ನನ್ನ ಜೀವನದಲ್ಲಿ ಬರಲು ಒಂದು ಕಾರಣವಿದೆ ಎಂಬುದು ನನ್ನ ಭಾವನೆ. ಅವಳು ನನ್ನ ಜೀವನದಲ್ಲಿ ಬರುತ್ತಿದ್ದ ವೇಳೆ ನಾನು ಖಿನ್ನತೆಗೆ ಒಳಗಾಗಿದ್ದೆ. ಈ ವೇಳೆ ತುಂಟಿ ಸಂತೋಷದಿಂದ ಇರುವುದು ಎಷ್ಟು ಸುಲಭ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಳು," ಎಂದಿದ್ದಾರೆ ರಘು ದೀಕ್ಷಿತ್​. ರಘು ದೀಕ್ಷಿತ್​ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಹಾಡುಗಳನ್ನು ಹಾಡಿದ್ದಾರೆ.
Published by:Rajesh Duggumane
First published: