ರಘು ದೀಕ್ಷಿತ್ ಕಂಠದಿಂದ ಮೂಡಿಬಂದ ಮೆಲೋಡಿ ಹಾಡಿಗೆ ಪ್ರೇಮಿಗಳು ಫಿದಾ!

ನಿನ್ನ ಸನಿಹಕೆ

ನಿನ್ನ ಸನಿಹಕೆ

‘ನಿನ್ನ ಸಿನಿಹಕೆ’ ಚಿತ್ರವನ್ನು ಸೂರಜ್​ ಗೌಡ ನಿರ್ದೆಶನ ಮಾಡಿದ್ದು, ಅವರೇ ನಾಯಕನಾಗಿ ನಟಿಸಿದ್ದಾರೆ. ಇನ್ನು ಸಿನಿಮಾದ ಬಹುತೇಕ ಚಿತ್ರೀಕರಣದ ಕೆಲಸಗಳು ಮುಗಿದಿದ್ದು, ಒಂದಿಷ್ಟು ಕೆಲಸಗಳು ಬಾಕಿ ಉಳಿದಿವೆ. ಅಕ್ಷಯ್​ ರಾಜಶೇಖರ್​ ಮತ್ತು ರಂಗನಾಥ್​ ಕುಡ್ಲಿ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ

ಮುಂದೆ ಓದಿ ...
 • Share this:

  ಡಾ. ರಾಜ್​​ ಕುಮಾರ್​ ಮೊಮ್ಮಗಳು ಧನ್ಯಾ ಕುಮಾರ್​  ‘ನಿನ್ನ ಸನಿಹಕೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಚಿತ್ರತಂಡ  ‘ಮಳೆ... ಮಳೆ’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು ಸಂಗೀತ ನಿರ್ದೇಶಕ ರಘು ದೀಕ್ಷಿತ್​ ಹಾಡಿದ್ದು, ಅವರೇ ಕಂಪೋಸ್​ ಮಾಡಿದ್ದಾರೆ. ಸದ್ಯ ಯ್ಯೂಟೂಬ್​ನಲ್ಲಿ ಈ ಹಾಡು ಜನಪ್ರಿಯತೆಗಳಿಸುತ್ತಿದೆ.


  ಇತ್ತೀಚೆಗೆ ರಘು ದೀಕ್ಷಿತ್​ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನನಗೆ ಮೆಲೋಡಿ ಹಾಡುಗಳನ್ನು ಮಾಡಲು ಬರುವುದಿಲ್ಲ ಎಂದು ಅನೇಕರು ಅಂದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೀಗ ರಘು  ದೀಕ್ಷಿತ್ ಕಂಠದಲ್ಲೇ ಮಳೆ.. ಮಳೆ ಹಾಡು ಭಿನ್ನವಾಗಿ ಮೂಡಿಬಂದಿದೆ. ಅವರದೇ ಸಂಗೀತ ಈ ಹಾಡಿಗಿದೆ. ವಾಸು ದೀಕ್ಷಿತ್​ ಅವರು ಲಿರಿಕ್ಸ್​​ ಬರೆದಿದ್ದಾರೆ.


  ಸದ್ಯ ಎಲ್ಲೆಡೆ ಜಿಟಿ-ಜಿಟಿ ಮಳೆ ಸುರಿಯುತ್ತಿದೆ. ಈ ಸಮಯದಲ್ಲಿ ‘ನಿನ್ನ ಸನಿಹಕೆ’ ಚಿತ್ರತಂಡ ಮೆಲೋಡಿ ಹಾಡನ್ನು ಉಡುಗೊರೆಯಾಗಿ ನೀಡಿದೆ.  ‘ನಿನ್ನ ಸಿನಿಹಕೆ’ ಚಿತ್ರವನ್ನು ಸೂರಜ್​ ಗೌಡ ನಿರ್ದೆಶನ ಮಾಡಿದ್ದು, ಅವರೇ ನಾಯಕನಾಗಿ ನಟಿಸಿದ್ದಾರೆ. ಇನ್ನು ಸಿನಿಮಾದ ಬಹುತೇಕ ಚಿತ್ರೀಕರಣದ ಕೆಲಸಗಳು ಮುಗಿದಿದ್ದು, ಒಂದಿಷ್ಟು ಕೆಲಸಗಳು ಬಾಕಿ ಉಳಿದಿವೆ. ಅಕ್ಷಯ್​ ರಾಜಶೇಖರ್​ ಮತ್ತು ರಂಗನಾಥ್​ ಕುಡ್ಲಿ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ

  Published by:Harshith AS
  First published: