Raghavendra Stores: ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್​ ಡೇಟ್​ ಮುಂದಕ್ಕೆ, ಬಿಗ್​ ಅಪ್​​ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್​

Raghavendra Stores film: ಈ ಹಿಂದೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್​ ಆಗಸ್ಟ್​ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು.

ರಾಘವೇಂದ್ರ ಸ್ಟೋರ್ಸ್​

ರಾಘವೇಂದ್ರ ಸ್ಟೋರ್ಸ್​

  • Share this:
ಸ್ಯಾಂಡಲ್​​ವುಡ್​​ನ (Sandalwood) ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹುನಿರೀಕ್ಷಿತ ರಾಘವೇಂದ್ರ ಸ್ಟೋರ್ (Raghavendra Stores)ಚಿತ್ರದ ಕುರಿತು ಬಿಗ್​ ಅಪ್​​ಡೇಟ್​ ಒಂದು ಹೊರಬಿದ್ದಿದೆ. ಆಗಸ್ಟ್​ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾದ ರಿಲೀಸ್​ ಡೇಟ್​ ಮುಂದಕ್ಕೆ ಹಾಕಲಾಗಿದೆ. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಲು ಕಾರಣವೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.  

ಸಿನಿಮಾ ಬಿಡುಗಡೆ ದಿನಾಂಕ ಮುಂದೆ

ಹೌದು, ಈ ಹಿಂದೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್​ ಆಗಸ್ಟ್​ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಇದೀಗ ಕಾರಣಾಂತರಗಳಿಂದ ನಿಮ್ಮಿಷ್ಟದ ರಸದೌತಣ ಸ್ವಲ್ಪ ವಿಳಂಬವಾಗುತ್ತಿದೆ ಎನ್ನುವ ಮೂಲಕ ಸಿನಿಮಾ ದಿನಾಂಕ ಮುಂದೂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

kannnada actor jaggesh starrer raghavendra stores movie releasing date announced

ಮೂಲಗಳ ಪ್ರಕಾರ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟ ಜಗ್ಗೇಶ್​ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಯಾವುದೇ ಸಿನಿಮಾ ಬಿಡುಗಡೆಯಾಗುವಾಗ ಅದರ ಪ್ರಚಾರಕ್ಕೆ 15 ದಿನಗಳಾದರೂ ಬೇಕು. ಇದೀಗ ರಾಜ್ಯಸಭೆ ಕಲಾಪ ಆರಂಭವಾಗಿದೆ. ಜಗ್ಗೇಶ್​ ರಾಜ್ಯಸಭೆ ಸದ್ಯಸರಾಗಿರುವ ಕಾರಣ, ಬ್ಯುಸಿ ಇರುತ್ತಾರೆ. ಹಾಗಾಗಿ ಬಿಡುಗಡೆ ದಿನಾಂಕ ಮುಂದೂಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅನಾರೋಗ್ಯದಿಂದ ಲೆಜೆಂಡರಿ ಗಾಯಕ ಭೂಪಿಂದರ್ ಸಿಂಗ್ ವಿಧಿವಶ

ಅಲ್ಲದೇ, ಜುಲೈ 28ರಂದು ಬಹು ನಿರೀಕ್ಷಿತ ವಿಕ್ರಾಂತ್ ರೋಣ ಹಾಗೂ ಆಗಸ್ಟ್​ 13ರಂದು ಯೋಗರಾಜ್​ ಭಟ್​ ನಿರ್ದೇಶನದ ಗಾಳಿಪಟ 2 ಸಿನಿಮಾ ಬಿಡುಗಡೆಯಾಗುತ್ತಿದೆ. ಇವುಗಳ ಮಧ್ಯೆ ರಾಘವೇಂದ್ರ ಸ್ಟೋರ್ಸ್​ ಸಿನಿಮಾ ಬಿಡುಗಡೆ ಮಾಡುವುದು ಬೇಡ ಎಂದು ಹೊಂಬಾಳೆ ಫಿಲ್ಮ್ಸ್​ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಆದರೆ ಯಾಕೆ ದಿನಾಂಕ ಮುಂದೆ ಹಾಕಲಾಗಿದೆ ಎನ್ನುವ ಕುರಿತು ಹೊಂಬಾಳೆ ಫಿಲ್ಮ್ಸ್​ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸದ್ದು ಮಾಡಿದ್ದ ಟೀಸರ್​

ಇನ್ನು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್​ ನಲ್ಲಿ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಪಾತ್ರದ ಚಿಕ್ಕ ಪರಿಚಯವನ್ನು ಮಾಡಲಾಗಿದ್ದು, ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅಲ್ಲದೇ ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಅಡುಗೆ ಭಟ್ಟರ ಪಾತ್ರದಲ್ಲಿ ಜಗ್ಗೇಶ್ ಕಚಗುಳಿ ಇಟ್ಟಿದ್ದಾರೆ.ಇದನ್ನೂ ಓದಿ: ಟ್ರೋಲಿಗರಿಗೆ ಟಾಂಗ್ ಕೊಟ್ಟ ಸುಶ್ಮಿತಾ ಸೇನ್, ನಾನು ಡೈಮಂಡ್ ಡಿಗ್ಗರ್ ಎಂದ ನಟಿ

ನಟ ಜಗ್ಗೇಶ್ ಈ ಹಿಂದೆ ಚಿತ್ರದ ಟೀಸರ್ ಬಿಡುಗಡೆ ವೇಳೆ ಚಿತ್ರದ ಕುರಿತು ಮಾತನಾಡಿದ್ದರು. ಅದರಂತೆ ‘ಈ ಚಿತ್ರದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಚಿತ್ರದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ‘ ಎಂದು ಹೇಳಿದ್ದರು. ರಾಜಕುಮಾರ ಸಿನಿಮಾ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ರಾಘವೇಂದ್ರ ಸ್ಟೋರ್ ಮೂಡಿ ಬರಲಿದೆ. ಹೊಂಬಾಳೆ ಫಿಲ್ಮ್ಸ್ ಇದರ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಹೆಸರೇ ಹೇಳುವಂತೆ ಇದು ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಆಗಿದೆ. ಎಂದಿನಂತೆ ಇಲ್ಲೂ ಕೂಡ ನವರಸ ನಾಯಕ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
Published by:Sandhya M
First published: