ವೈರಲ್​ ಆಗುತ್ತಿದ್ದೆ ದೊಡ್ಮನೆ ರಾಘಣ್ಣನ ಈ ಫೋಟೋಗಳು..!

news18
Updated:August 13, 2018, 1:39 PM IST
ವೈರಲ್​ ಆಗುತ್ತಿದ್ದೆ ದೊಡ್ಮನೆ ರಾಘಣ್ಣನ ಈ ಫೋಟೋಗಳು..!
  • News18
  • Last Updated: August 13, 2018, 1:39 PM IST
  • Share this:
ನ್ಯೂಸ್​ 18 ಕನ್ನಡ

ದೊಡ್ಮನೆ ಹುಡುಗ ರಾಘಣ್ಣನ ಚಂದನವನಕ್ಕೆ ಮತ್ತೆ ಕಾಲಿಡುತ್ತಿದ್ದಾರೆ. ಬರೋಬ್ಬರಿ 13 ವರ್ಷಗಳ ನಂತರ ಬೆಳ್ಳಿತೆರೆಗಾಗಿ ಬಣ್ಣ ಹಚ್ಚಲಿದ್ದಾರೆ. ಹೌದು ರಾಘವೇಂದ್ರ ರಾಜ್​ಕುಮಾರ್​ ಅವರು ಚಂನವನಕ್ಕೆ ಮರಳುತ್ತಿರುವ ಸಿನಿಮಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ನಿರ್ದೇಶಕ ನಿಖಿಲ್​ ಮಂಜು ಅವರ 'ಅಮ್ಮನ ಮನೆ' ಚಿತ್ರದ ಮೂಲಕ ರಾಘಣ್ಣ ತಮ್ ಸಿನಿ ಪಯಣವನ್ನು ಮತ್ತೆ ಆರಂಭಿಸಿಲಿದ್ದಾರೆ. ಈ ಸಿನಿಮಾದಲ್ಲಿನ ಅವರ ಪಾತ್ರದ ಫಸ್ಟ್​ಲುಕ್​ ಬಿಡುಗಡೆಯಾಗಿದ್ದು, ಅದು ಕಳೆದ ರಾತ್ರಿಯಿಂದ ಫುಲ್​ ವೈರಲ್​ ಆಗುತ್ತಿದೆ.

ಪುನೀತ್​ ರಾಜ್​ಕುಮಾರ್​ ಸಹ ರಾಘಣ್ಣನ ಫೋಟೋಗಳನ್ನು ಶೇರ್​ ಮಾಡಿದ್ದಾರೆ.2004ರಲ್ಲಿ ತೆರೆಕಂಡ 'ಪಕ್ಕದಮನೆ ಹುಡುಗಿ' ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದು, ರಾಘವೇಂದ್ರ ರಾಜ್​ಕುಮಾರ್​ ಅವರ ಕೊನೆಯ ಸಿನಿಮಾವಾಗಿತ್ತು. ಆದರೆ ನಿರ್ಮಾಪಕನಾಗಿ 'ಜಾಕಿ', 'ಅಣ್ಣಾ ಬಾಂಡ್​' ಹಾಗೂ  'ಯಾರೇ ಕೂಗಾಡಲಿ' ಸಿನಿಮಾಗಳ ನಿರ್ಮಾಣ ಮಾಡಿದ್ದರು.

 
First published: August 12, 2018, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading