Puneeth Rajkumar: ಅಭಿಮಾನಿಗಳ ದೇವರನ್ನ ತಲೆ ಮೇಲೆ ಹೊತ್ತು ಕುಣಿದ ಫ್ಯಾನ್ಸ್! ಅಪ್ಪು ಮೇಲಿನ ಪ್ರೀತಿ ನೋಡಿ ಭಾವುಕರಾದ ರಾಘಣ್ಣ

Puneeth Rajkumar: ವಿಡಿಯೋ ಹಂಚಿಕೊಂಡಿರುವ ಅವರು ಅಪ್ಪುವಿಗೆ ಈ ವಿಶೇಷ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳ ಸಹ ಶೇರ್ ಮಾಡಿಕೊಳ್ಳುತ್ತಿದ್ದು, ಬಹಳ ವೈರಲ್ ಆಗುತ್ತಿದೆ

ನಟ ಪುನೀತ್ ರಾಜ್​ಕುಮಾರ್

ನಟ ಪುನೀತ್ ರಾಜ್​ಕುಮಾರ್

  • Share this:
ನಟ ಪುನೀತ್ ರಾಜ್​ಕುಮಾರ್ (Puneeth Rajkumar), ಬದುಕಿದ್ದಾಗಲೂ ಅಭಿಮಾನಿಗಳ (Fans) ಮನದಲ್ಲಿ ಇದ್ದವರೂ, ಸಾವಿನ (Death) ನಂತರ ಕೂಡ ಪ್ರತಿದಿನ ಪ್ರತಿ ಕ್ಷಣ ಅವರನ್ನು ನೆನೆಯದ ದಿನವಿಲ್ಲ. ಕರುನಾಡಿನ ರಾಜನಂತೆ ಅವರನ್ನು ಮೆರೆಸುತ್ತಿದ್ದು, ದೇವರ (God) ಸ್ಥಾನದಲ್ಲಿಯೇ ಕೂರಿಸಿದ್ದಾರೆ. ಅವರು ಇಲ್ಲದೇ ಸುಮಾರು 8 ತಿಂಗಳಾಗುತ್ತಾ ಬಂದರೂ ಕೂಡ ಒಂದಲ್ಲಾ ಒಂದು ಕಾರಣದಿಂದ ಅವರ ನೆನಪು ಕಾಡುತ್ತಲೇ ಇರುತ್ತದೆ. ಇದೀಗ ಅಭಿಮಾನಿಯೊಬ್ಬರು ಮತ್ತೊಮ್ಮೆ ಅವರನ್ನು ದೇವರ ರೂಪದಲ್ಲಿ ಕೂರಿಸಿದ್ದು, ಆ ವಿಡಿಯೋವನ್ನು ರಾಘವೇಂದ್ರ ರಾಜ್​ ಕುಮಾರ್ (Raghavendra Rajkumar) ಅವರು ತಮ್ಮ ಟ್ವಿಟ್ಟರ್ ಹಾಗೂ ಫೇಸ್​ಬುಕ್​ಗಳಲ್ಲಿ (Facebook) ಶೇರ್ ಮಾಡಿಕೊಂಡಿದ್ದಾರೆ.

ದೇವರ ಸ್ಥಾನದಲ್ಲಿ ಅಪ್ಪು 

ವಿಡಿಯೋ ಹಂಚಿಕೊಂಡಿರುವ ಅವರು ಅಪ್ಪುವಿಗೆ ಈ ವಿಶೇಷ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳ ಸಹ ಶೇರ್ ಮಾಡಿಕೊಳ್ಳುತ್ತಿದ್ದು, ಬಹಳ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಅಪ್ಪುವಿನ ಅಭಿಮಾನಿಯೊಬ್ಬರು, ದೇವರ ಕಾರ್ಯಕ್ರಮದಲ್ಲಿ ತಲೆಯ ಮೇಲೆ ದೇವರ ಹೊತ್ತುಕೊಳ್ಳುವ ಹಾಗೆ ಅಪ್ಪುವಿನ ಮೂರ್ತಿಯನ್ನು ಹೊತ್ತುಕೊಂಡಿದ್ದಾರೆ. ಇದು ಅಪ್ಪು ಎಂದರೆ ಅಭಿಮಾನಿಗಳಿಗೆ ಅದೆಷ್ಟು ಪ್ರೀತಿ ಎಂಬುದು ತಿಳಿಯುತ್ತದೆ.

ಈ ಘಟನೆ ಕೇವಲ ಒಂದು ಉದಾಹರಣೆ ಅಷ್ಟೇ, ಅಪ್ಪು ಹೋದ ನಂತರ ಅಭಿಮಾನಿಗಳು ಒಂದೆಲ್ಲಾ ಒಂದು ರೀತಿಯಲ್ಲಿ ಅವರನ್ನು ಪೂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅಪ್ಪು ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು.  ಅಪ್ಪುಗೆ ಅಭಿಮಾನಿಗಳು ಎಂದರೆ ಪ್ರಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಅವರು ಹೊಸಪೇಟೆಯ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರಂತೆ. ಹಾಗಾಗಿ ಅವರಿಗಾಗಿ ಇಲ್ಲಿ ಅಭಿಮಾನಿಗಳು ಅವರ ಪ್ರತಿಮೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: 777 Charlie ಸಿನಿಮಾ ನೋಡಲು ಸಿಎಂಗೆ ಆಹ್ವಾನ, ಒರಾಯನ್ ಮಾಲ್​ನಲ್ಲಿ ಸ್ಪೆಷಲ್ ಶೋ

ಅಪ್ಪುಗಾಗಿ ಪ್ರತಿಮೆ ನಿರ್ಮಾಣ

ಅದರಲ್ಲೂ ಇದು ಬರೋಬ್ಬರಿ 7.4 ಅಡಿ ಎತ್ತರದ ಪ್ರತಿಮೆ ಇದಾಗಿದ್ದು, ಕರುನಾಡಿಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಅಭೂತಪೂರ್ವ ಕ್ಷಣಕ್ಕೆ ಸಾವಿರಾರು ಅಪ್ಪು ಅಭಿಮಾನಿಗಳು ಸಾಕ್ಷಿಯಾಗಿದ್ದು, ಹಬ್ಬವಿತ್ತು ಎನ್ನುವ ರೀತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳ ಜೊತೆ ರಾಘವೇಂದ್ರ ರಾಜ್​ಕುಮಾರ್, ನಟ ಅಜಯ್ ರಾವ್, ನಿರ್ದೇಶಕ ಸಂತೋಷ್ ಆನಂದ್ ರಾಮ್​ ಸೇರಿದಂತೆ ಆನೇಕ ಗಣ್ಯರು ಭಾಗವಹಿಸಿದ್ದರು.

ಪುನೀತ್ ರಾಜ್​ಕು​ಮಾರ್ ಅಕಾಲಿಕ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ರಸ್ತೆಗಳಿಗೆ ಪುನೀತ್ ಹೆಸರನ್ನು ಸಹ ಇಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್​ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಸ್ಪಂದಿಸಿ, ರಸ್ತೆಗೆ ಪುನೀತ್ ರಾಜ್​ಕುಮಾರ್ ರಸ್ತೆ ಎಂದು ಹೆಸರಿಟ್ಟಿದೆ.

ಇದನ್ನೂ ಓದಿ: ಫೋಟೋ ಹಾಕಿ ನಿಮಗೆ ಯಾವ್ದ್ ಇಷ್ಟ ಅಂತ ಕೇಳಿದ ರಶ್ಮಿಕಾ, ಏನ್ ಬ್ಯೂಟಿ ಗುರು ಅಂದ್ರು ನೆಟ್ಟಿಗರು!

ಹಾಗೆಯೇ ಅಭಿಮಾನಿಯೊಬ್ಬರು ಪುನೀತ್ ಅವರ ಪ್ರೀತಿಗಾಗಿ ಮನೆಯಂಗಳದಲ್ಲಿ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಸಿದ್ದಾಪುರದ ವಡ್ಡರಹಟ್ಟಿಯಲ್ಲಿ ಆರ್.ಟಿ. ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನಕ್ಕೆ ಪುನೀತ್ ರಾಜಕುಮಾರ್ ಅವರು ಪುತ್ಥಳಿ ಸಾಕ್ಷಿಯಾಗಿ ಅನೇಕರ ಗಮನ ಸೆಳೆದಿದೆ.
Published by:Sandhya M
First published: