ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!

Rare Video Of Rajkumar: ಸಾಮಾಜಿಕ ಜಾಲತಾಣದಲ್ಲಿ ರಾಜ್​ಕುಮಾರ್​ ಅವರು ದೂರವಾಣಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದು ಸದ್ಯ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರಾಜ್​ ಅವರು ತಮ್ಮ ತಂದೆ ನೀಡಿದ್ದ ಮಾರ್ಗದರ್ಶನದ ಕುರಿತು ಮಾತನಾಡಿದ್ದಾರೆ.   

Anitha E | news18-kannada
Updated:July 6, 2020, 10:25 AM IST
ಫೋನ್​ನಲ್ಲಿ ಮಾತನಾಡುತ್ತಿರುವ ರಾಜ್​ಕುಮಾರ್​ರ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್..!
ರಾಜ್​ಕುಮಾರ್​
  • Share this:
ರಾಜ್​ಕುಮಾರ್ ಅವರು ಈಗ ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ, ಅವರು ಅಭಿನಯಿಸಿರುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಹಸಿರಾಗಿದ್ದಾರೆ. ಅವರ ಸಿನಿಮಾಗಳನ್ನು ಪದೇ ಪದೇ ನೋಡುತ್ತಾ ಖುಷಿ ಪಡುವ ಅಭಿಮಾನಿಗಳಿಗೆ ಅಣ್ಣಾವ್ರು ಮಾತನಾಡುತ್ತಿರುವ ಅಪರೂದ ವಿಡಿಯೋ ಸಿಕ್ಕರೆ, ಅವರ ಖುಷಿಗೆ ಪಾರವೇ ಇರುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ರಾಜ್​ಕುಮಾರ್​ ಅವರು ದೂರವಾಣಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಒಂದು ಸದ್ಯ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ರಾಜ್​ ಅವರು ತಮ್ಮ ತಂದೆ ನೀಡಿದ್ದ ಮಾರ್ಗದರ್ಶನದ ಕುರಿತು ಮಾತನಾಡಿದ್ದಾರೆ.

Dr Rajkumar and Parvathamma Rajkumar weding anniversary here are the rare photos
ಅಪ್ಪ-ಅಮ್ಮನೊಂದಿಗೆ ರಾಘವೇಂದ್ರ ರಾಜ್​ಕುಮಾರ್​


ರಾಘವೇಂದ್ರ ರಾಜಕುಮಾರ್​ ಅವರು ತಮ್ಮ ತಂದೆಯ ಈ ಅಪರೂಪದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ವೈರಲ್​ ಆಗುತ್ತಿದೆ. 

ಡಾ.ರಾಜ್​ ಅವರಿಗೆ ಅವರ ತಂದೆ ಹಣದ ಕೊರತೆಯಿಂದಾಗಿ ವಿದ್ಯಾಭ್ಯಾಸ ಮಾಡಿಸಲಾಗಲಿಲ್ಲವಂತೆ. ಆದರೆ ಬದುಕುವ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಅವರು ಏನೇ ಸಂಪಾದಿಸಿದ್ದರೂ ಅವರು ಅವರ ತಂದೆ ನೀಡಿದ ಮಾರ್ಗದರ್ಶನ ಹಾಗೂ ದೇವರ ಕೃಪೆಯಿಂದ ಎಂದು ಫೋನ್​ನಲ್ಲಿ ಯಾರದ್ದೋ ಬಳಿ ಮಾತನಾಡುತ್ತಿದ್ದಾರೆ.

Dr Rajkumar and Parvathamma Rajkumar weding anniversary here are the rare photos
ರಾಜ್​ಕುಮಾರ್ ಹಾಗೂ ಪಾರ್ವತಮ್ಮ


ತಮ್ಮ ತಂದೆ ಸದಾ ಹೆದರಿಸುತ್ತಿದ್ದರಂತೆ. ಅವರ ನಡವಳಿಕೆ ಹಾಗೂ ನಡಿಗೆಯಿಂದ ಹಿಡಿದು ಇರೆ ವಿಷಯಗಳಲ್ಲಿ ತಪ್ಪು ಮಾಡಿದಾಗ ಹೆದರಿಸಿ, ಬೈದು ತಿದ್ದುತ್ತಿದ್ದರಂತೆ. ಇದರಿಂದಾಗಿಯೇ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಲು ಆಯಿತು ಎಂದು ರಾಜ್​ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Rashmika Mandanna: ಪೋಸ್​ ಕೊಡಲು ಹೆದರುವ ರಶ್ಮಿಕಾ ಫೋಟೋಶೂಟ್​ಗಳಲ್ಲಿ ಕ್ಯಾಮೆರಾವನ್ನೇ ತಿಂದು ಬಿಡುವಂತೆ ಇರುತ್ತಾರಂತೆ..! 

ಇದನ್ನೂ ಓದಿ: ಬೆಳಗೆದ್ದು ವ್ಯಾಯಾಮ ಮಾಡಲು ನಿಖಿಲ್​ಗೆ ಇವರೇ ಸ್ಫೂರ್ತಿಯಂತೆ: ಇಲ್ಲಿದೆ ವಿಡಿಯೋ..!
Published by: Anitha E
First published: July 6, 2020, 10:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading