Ward No 11: ರಾಘಣ್ಣ ಇನ್ ವಾರ್ಡ್ ನಂ 11..!

Raghavendra Rajkumar: ಹೊಸ ಸಿನಿಮಾದಲ್ಲಿ ರಾಘವೇಂದ್ರ ರಾಜ್​ ಕುಮಾರ್​. ಗಣಪತಿ ಹಬ್ಬದಂದೇ ಅವರ ಹೊಸ ಸಿನಿಮಾದ ಟೈಟಲ್​ ಲಾಂಚ್​ ಆಗಿದ್ದು, ಇದರಲ್ಲಿ ರಾಘವೇಂದ್ರ ರಾಜ್​ಕುಮಾರ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಅವರು ಅಭಿನಯಿಸಲಿರುವ ಹೊಸ ಸಿನಿಮಾ ವಾರ್ಡ್ ನಂಬರ್ 11.

Anitha E | news18-kannada
Updated:September 3, 2019, 7:05 PM IST
Ward No 11: ರಾಘಣ್ಣ ಇನ್ ವಾರ್ಡ್ ನಂ 11..!
ವಾರ್ಡ್​ ನೊಂ 11 ಟೈಟಲ್​ ಲಾಂಚ್​ನಲ್ಲಿ ರಾಘಣ್ಣ ಹಾಗೂ ವಿನಯ್​ ರಾಜ್​ ಕುಮಾರ್​
  • Share this:
ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‍ವುಡ್‍ಗೆ ಮರಳಿರುವ ರಾಘವೇಂದ್ರ ರಾಜ್‍ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅಮ್ಮನ ಮನೆ', 'ತ್ರಯಂಬಕಂ', 'ಪೊಗರು' ಹಾಗೂ 'ಆಡಿಸಿದಾತ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜ್​ಕುಮಾರ್​.

ಇದರ ಬೆನ್ನಲ್ಲೇ ಈಗ 'ವಾರ್ಡ್ ನಂಬರ್ 11' ಎಂಬ ಹೊಸ ಸಿನಿಮಾ ಸೆಟ್ಟೇರಿದೆ. ನಿನ್ನೆಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ 'ವಾರ್ಡ್ ನಂಬರ್ 11' ಟೈಟಲ್ ಲಾಂಚ್ ಆಗಿದೆ. ಶ್ರೀಕಾಂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಗುರುರಾಜ್ ಹಾಗೂ ಸಂದೀಪ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Ward no 11 movie title launch
ಸಿನಿಮಾದ ಟೈಟಲ್​ ಲಾಂಚ್​ನಲ್ಲಿ ರಾಗಣ್ಣ ಹಾಗೂ ವಿನಯ್​ ರಾಜ್​ಕುಮಾರ್​


ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ


ವಾರ್ಡ್ ನಂಬರ್ 11 ಚಿತ್ರದ ಟೈಟಲ್ ಲಾಂಚ್ ಮಾಡಿದ ರಾಘಣ್ಣನ ಮಗ ವಿನಯ್ ರಾಜ್‍ಕುಮಾರ್, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸಂದೀಪ್​ ಶಿವಮೊಗ್ಗ ಹಾಗೂ ಗುರುರಾಜ್​ ಎ ಅವರು ನಿರ್ಮಿಸುತ್ತಿರುವ ಈ ಸಿನಿಮಾಗೆ ಸುರೇಂದ್ರ ನಾಥ್​ಅವರ ಸಂಗೀತ ನಿರ್ದೇಶನವಿದ್ದು, ವಿ. ನಾಗೇಂದ್ರ ಪ್ರಸಾದ್​, ಜಯಂತ್​ ಕಾಯ್ಕಿಣಿ ಹಾಗೂ ತಪಸ್ವಿ ಅವರು ಸಾಹಿತ್ಯ ನೀಡಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಸಿನಿಮಾಗೆ ಹಾಡಿದ ಲಹರಿ ವೇಲು: ಸಾಫ್ಟ್​ವೇರ್​ ದಂಪತಿಗಳ ಕಷ್ಟ ಕುರಿತ ಗೀತೆ ವೈರಲ್​..!

ಇದೊಂದು ಹೊಸಬರ ತಂಡ ಹೊಸತರನಾದ ಕತೆಯೊಂದಿಗೆ ಸಿನಿಮಾ ಮಾಡಲು ಮುಂದೆ ಬಂದಿದ್ದು, ಇದರ ಮುಹೂರ್ತ ಇದೇ ವಾರದಲ್ಲಿ ನಡೆಯಲಿದೆಯಂತೆ.ಸಿನಿಮಾಗಿಂತ ಹೆಚ್ಚಾಗಿ ಹಾಟ್​ ಫೋಟೋಗಳಿಂದಲೇ ಸುದ್ದಿಯಲ್ಲಿರುವ ನಟಿ ಇವರು..!
First published:September 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading