Lucky Man: ಅಪ್ಪು ಕೂತಿರೋ ಆ ಕುರ್ಚಿ ಕೊಟ್ಬಿಡಿ ಸಾಕು; ಸಿನಿಮಾ ನೋಡಿ ಗಳಗಳನೇ ಅತ್ತ ರಾಘಣ್ಣ!

ಇದೀಗ ಈ ಚಿತ್ರವನ್ನು ಮೊದಲ ದಿನವೇ ನೋಡಿ ಕಣ್ತುಂಬಿಕೊಂಡಿದ್ದಾನೆ. ಇನ್ನೊಂದ್ 2-3 ಸಾರಿ ನೋಡ್ತಿನಿ. ಈ ಸಿನಿಮಾದಲ್ಲಿರೋ ಅಪ್ಪು ಕೂತಿದ್ದ ಚೇರ್​ ಕೊಟ್ಟುಬಿಡಿ. ಅದನ್ನ ಪೂಜೆ ಮಾಡ್ತಿನಿ ಎಂದು ರಾಘವೇಂದ್ರ ರಾಜ್​ಕುಮಾರ್ ಭಾವುಕರಾದ್ರು. 

ಪುನೀತ್​ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಲಕ್ಕಿಮ್ಯಾನ್ (Lucky Man) ಇವತ್ತು ರಿಲೀಸ್​ ಆಗಿದೆ. ಬಿಡುಗಡೆಯಾದ ದಿನವೇ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಥಿಯೇಟರ್​ನಲ್ಲಿ ಚಿತ್ರ ನೋಡಿ ಭಾವುಕರಾದ್ರು. ಇದೇ ವೇಳೆ ಮಾತಾಡಿದ ರಾಘವೇಂದ್ರ ರಾಜ್​ಕುಮಾರ್​, ​ಈ ಸಿನಿಮಾವನ್ನ ಅಪ್ಪಿಕೊಂಡು ನೋಡಿ ಎಂದು ಹೇಳಿದ್ದಾರೆ. ಈ ಲಕ್ಕಿಮ್ಯಾನ್ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ ಅವರು ನಮಗೆ ಅರ್ಪಿಸಿ ಹೋಗಿದ್ದಾರೆ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ. 

ಅಪ್ಪು ಕೂತಿದ್ದ ಚೇರ್​ ಕೊಟ್ಟು ಬಿಡಿ



ಪುನೀತ್​ ರಾಜ್​ಕುಮಾರ್ ಚಿತ್ರಗಳನ್ನು ನೋಡಲು​ ಮೊದಲ ದಿನ ಅಪ್ಪು ಜೊತೆ ಥಿಯೇಟರ್​​ಗೆ ಬರ್ತಿದ್ದೆ. ಇದೀಗ ಈ ಚಿತ್ರವನ್ನು ಮೊದಲ ದಿನವೇ ನೋಡಿ ಕಣ್ತುಂಬಿಕೊಂಡಿದ್ದಾನೆ. ಇನ್ನೊಂದ್ 2-3 ಸಾರಿ ನೋಡ್ತಿನಿ. ಈ ಸಿನಿಮಾದಲ್ಲಿರೋ ಅಪ್ಪು ಕೂತಿದ್ದ ಚೇರ್​ ಕೊಟ್ಟುಬಿಡಿ. ಅದನ್ನ ಪೂಜೆ ಮಾಡ್ತಿನಿ ಎಂದು ರಾಘವೇಂದ್ರ ರಾಜ್​ಕುಮಾರ್ ಭಾವುಕರಾದ್ರು.

ದೇವರ ಮನೆ ಎನ್ನುತ್ತಿದ್ದಾರೆ ಅಭಿಮಾನಿಗಳು

ಇದು ನನ್ನ ತಮ್ಮನ ಸಿನಿಮಾ ಅನ್ನೋದಕ್ಕಿಂತ ಒಂದೊಳ್ಳೆ ಸಿನಿಮಾದಲ್ಲಿ ನನ್ನ ತಮ್ಮ ಇದ್ದಾನೆ ಅಂತ ಹೇಳೋಕ್ ಇಷ್ಟಪಡ್ತಿನಿ. ನಮ್ ತಂದೆ ಇದ್ದ ಕಾಲದಲ್ಲಿ ನಮ್ಮ ಮನೆಯನ್ನು ದೊಡ್ಮನೆ ಅಂತ ಕರೆದ್ರು. ಇವನ್ ಬಂದ್ ಮೇಲೆ ದೇವರ ಮನೆ ಅಂತ ಕರೀತಿದ್ದಾರೆ.

ಇನ್ಮೇಲೆ ಅಪ್ಪುವನ್ನು ಪೂಜಿಸೋಣ

ಇನ್ಮೇಲೆ ಅಪ್ಪುನ ಪೂಜಿಸಬೇಕು, ಇಷ್ಟು ದಿನ ಪ್ರೀತಿಸ್ತಿದ್ವಿ ಇನ್ಮೇಲೆ ಪೂಜಿಸೋಣ ಎಂದ್ರು. ಪುನೀತ್ ರಾಜ್​ ಕುಮಾರ್​ ದೇವರ ಪಾತ್ರದಲ್ಲಿ ಮಾಡಿದ್ದಾರೆ. ಅವನ ದೇವರ ಜೊತೆ ಇಲ್ಲ. ದೇವರು ಅವನ ಜೊತೆ ಇದ್ದಾರೆ. ಅವನನ್ನ ನಾವೇ ದೇವರು ಮಾಡಿದ್ದೀವಿ. ಈ ಸಿನಿಮಾ ನಾನ್ ಇರೋವರೆಗೂ ನನ್ ಜೊತೆ ಇರುತ್ತೆ ನಾನ್ ಹೋದ ಮೇಲೂ ಇರುತ್ತೆ ಎಂದು ಪುನೀತ್ ರಾಜ್​ಕುಮಾರ್​ ಹೇಳಿದ್ದಾರೆ.

ಭಗವಂತನಾಗಿ ಬಂದ ಅಪ್ಪು
ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲಾ ಅಗಲಿ 11 ತಿಂಗಳುಗಳೇ ಕಳೆದಿದೆ. ಆದ್ರೆ ಅಪ್ಪು ಅಭಿಮಾನಿಗಳ ಮನದಲ್ಲಿ ಚಿರಂಜೀವಿ ಆಗಿದ್ದಾರೆ. ಅವರು ಮಾಡಿ ಹೋಗಿರೋ ಸಮಾಜ ಸೇವೆ, ಸಾಮಾಜಿಕ ಕೆಲಸಗಳು ಸಹ ಅವರ ನೆನಪನ್ನು ಜೀವಂತವಾಗಿಸಿದೆ. ಕಾಕತಾಳೀಯ ಎಂಬಂತೆ ಕೊನೆಯ ಚಿತ್ರದಲ್ಲಿ ದೇವರಾಗಿ ಅಪ್ಪು ಕಾಣಿಸಿಕೊಂಡಿದ್ದಾರೆ.




ದೇವರ ರೂಪದಲ್ಲಿ ಅಪ್ಪು ನೋಡಿ ಅಭಿಮಾನಿಗಳು ಭಾವುಕ 


ದೇವರ ಪಾತ್ರದಲ್ಲಿ ಅಪ್ಪು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್​ ನಿಧನದ ಬಳಿಕ ಸಿನಿಮಾ ರಿಲೀಸ್​ ಆಗಿರೋ ಹಿನ್ನಲೆ ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ  ಇನ್ನಷ್ಟು ಹತ್ತಿರವಾಗಿದೆ. 

ದಾಂಪತ್ಯ ಜೀವನದ ಏಳುಬೀಳಿನ ಕಥೆ

ಲಕ್ಕಿಮ್ಯಾನ್​ ಚಿತ್ರದ ಕಥಾನಾಯಕ (ಡಾರ್ಲಿಂಗ್ ಕೃಷ್ಣ) ಬಾಲ್ಯದ ಸ್ನೇಹಿತೆಯನ್ನೇ ವಿವಾಹವಾಗುತ್ತಾರೆ. ಜಗಳ ಮನಸ್ತಾಪದಿಂದಕ ದಾಂಪತ್ಯ ಜೀವನವೇ ಕಷ್ಟ ಎನ್ನುವ ನಿರ್ಧಾರಕ್ಕೆ ಬರುವ ನಾಯಕ ಡಿವೋರ್ಸ್​ ಪಡೆಯಲು ನಿರ್ಧರಿಸುತ್ತಾನೆ. ಇನ್ನೇನು ವಿಚ್ಛೇದನ ಸಿಗಬೇಕು ಎಂಬಷ್ಟರಲ್ಲಿ ಆತನಿಗೆ ದೇವರೇ (ಪುನೀತ್​) ಪ್ರತ್ಯಕ್ಷರಾಗ್ತಾರೆ.

ನಾಯಕನಿಗೆ 2ನೇ ಅವಕಾಶ ನೀಡಿದ ದೇವರು

ದೇವರ ರೂಪದಲ್ಲಿ ಬರುವ ಪುನೀತ್ ರಾಜ್ ಕುಮಾರ್ ಕಥಾನಾಯಕನ ಮನಸ್ಸಿನಲ್ಲಿ ಬದಲಾವಣೆ ತರುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಬೇರೆ ಹುಡುಗಿಯನ್ನು ಮದುವೆಯಾಗಲು ದೇವರು 2ನೇ ಅವಕಾಶ ನೀಡುತ್ತಾರೆ.

ಇದನ್ನೂ ಓದಿ: Puneeth Rajkumar: ಲಕ್ಕಿಮ್ಯಾನ್ ಮೂಲಕ ಭೂಮಿಗೆ ಬಂದ ಭಗವಂತ; ತೆರೆ ಮೇಲೆ ಅಪ್ಪು ಕಂಡು ಫ್ಯಾನ್ಸ್​​ ಭಾವುಕ

ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಸಿಗಲಿದೆ ಉತ್ತರ

ಕಥಾ ನಾಯಕ ದೇವರು ಕೊಟ್ಟ 2ನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಲೈಫ್​ನಲ್ಲಿ ಆತ ಯಾರನ್ನು ಮದುವೆ ಆಗ್ತಾನೆ? ಅಂತಿಮವಾಗಿ ಅವನಿಗೆ ಡಿವೋರ್ಸ್​ ಸಿಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಉತ್ತರ ಸಿಗಲಿದೆ.
Published by:ಪಾವನ ಎಚ್ ಎಸ್
First published: