Durga: ನಿರ್ದೇಶಕನಾಗಿ - ನಟನಾಗಿ ಅಖಾಡಕ್ಕಿಳಿಯಲಿದ್ದಾರಂತೆ ರಾಘವ ಲಾರೆನ್ಸ್, ಯಾಕೆ ಅಂತೀರಾ? ಈ ಸ್ಟೋರಿ ಓದಿ

ನಿರ್ದೇಶಕ, ನಟ ರಾಘವ ಲಾರೆನ್ಸ್ ತಮ್ಮ ಮುಂಬರುವ ಒಂದು ಕುತೂಹಲಭರಿತ ಚಿತ್ರ 'ದುರ್ಗಾ'ಗಾಗಿ ಈಗ ಸಜ್ಜಾಗುತ್ತಿದ್ದಾರೆಂದು ತಿಳಿದುಬಂದಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಾಘವ್ ಅವರು ಹಿಂದೆಂದೂ ಕಂಡಿರದ ರೀತಿಯಲ್ಲಿ ಅತಿ ವಿಭಿನ್ನವಾಗಿ ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಘವ ಲಾರೆನ್ಸ್ ಅವರ ದುರ್ಗಾ ಸಿನೆಮಾ

ರಾಘವ ಲಾರೆನ್ಸ್ ಅವರ ದುರ್ಗಾ ಸಿನೆಮಾ

  • Share this:
ನಿರ್ದೇಶಕ (Director), ನಟ ರಾಘವ ಲಾರೆನ್ಸ್ (Actor Raghava Lawrence) ತಮ್ಮ ಮುಂಬರುವ ಒಂದು ಕುತೂಹಲಭರಿತ ಚಿತ್ರ 'ದುರ್ಗಾ'ಗಾಗಿ (Upcoming film 'Durga') ಈಗ ಸಜ್ಜಾಗುತ್ತಿದ್ದಾರೆಂದು ತಿಳಿದುಬಂದಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಾಘವ್ ಅವರು ಹಿಂದೆಂದೂ ಕಂಡಿರದ ರೀತಿಯಲ್ಲಿ ಅತಿ ವಿಭಿನ್ನವಾಗಿ (Different) ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೇ ನೋಡಿದರೆ ಈ ಚಿತ್ರವನ್ನು (Cinema) ಅನ್ಬರಿವು ಸ್ಟಂಟ್ ಮಾಸ್ತರುಗಳ ಜೋಡಿ (Pair of stunt masters) ನಿರ್ದೇಶಿಸಬೇಕಾಗಿತ್ತು (Direct). ಆದರೆ, ಈಗ ತಿಳಿದು ಬಂದಿರುವ ಮಾಹಿತಿ (Information) ಪ್ರಕಾರ, ಅವರು ಈ ಚಿತ್ರದಿಂದ ನಿರ್ಗಮಿಸಿದ್ದಾರೆ.

ಲಾರೆನ್ಸ್ ಅವರೇ ಈ ಚಿತ್ರದ ಸಾರಥಿ
ಈ ಸ್ಟಂಟ್ ಮಾಸ್ತರುಗಳ ಜೋಡಿ ಪ್ರಥಮ ಬಾರಿಗೆ ಚಿತ್ರ ನಿರ್ದೇಶಕರಾಗಿ ನಿರ್ದೇಶನದ ಜಗತ್ತಿಗೆ ಪಾದಾರ್ಪಣೆ ಮಾಡಲಿದ್ದರು, ಆದರೆ, ಅವರ ಸದ್ಯದ ಕೆಲಸಗಳಿಂದಾಗಿ ಸಮಯ ಹೊಂದಿಸಲಾಗದೆ ಇರುವ ಕಾರಣ ಅವರು ಈ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಏತನ್ಮಧ್ಯೆ ಆಗಿರುವ ಬೆಳವಣಿಗೆ ಎಂದರೆ ಸ್ವತಃ ಲಾರೆನ್ಸ್ ಅವರೇ ಈ ಚಿತ್ರದ ಸಾರಥಿಯಾಗಿ ಇದನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಲಾರೆನ್ಸ್ ಅವರಿಗೆ ನಿರ್ದೇಶನ ಎಂಬುದು ಹೊಸ ಕ್ಷೇತ್ರವೇನಲ್ಲ. ಈಗಾಗಲೇ ಅವರು ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಎಂದು ಕಾಂಚನಾ, ಕಾಂಚನಾ 2 ಹಾಗೂ ಲಕ್ಷ್ಮಿಬಾಂಬ್ ಮೂಲಕ ಸಿನೆ ಪ್ರೀಯರಿಗೆ ತೋರಿಸಿಕೊಟ್ಟಿದ್ದಾರೆ.

ಸ್ಟಂಟ್ ಮಾಸ್ಟರ್ ಜೋಡಿ ಅನ್ಬರಿವ್
ಈ ಹಿಂದೆ ಜನವರಿ 2022 ರಲ್ಲಿ ಲಾರೆನ್ಸ್ ಅವರು ತಮ್ಮ ಮುಂದಿನ ಚಿತ್ರವಾದ 'ದುರ್ಗಾ' ಅನ್ನು ಸ್ಟಂಟ್ ಮಾಸ್ತರುಗಳಾದ ಅನ್ಬರಿವ್ ಜೋಡಿಯು ನಿರ್ದೇಶಿಸಲಿದೆ ಎಂದು ಘೋಷಣೆ ಮಾಡಿದ್ದರು. ತದನಂತರ ಮಾರ್ಚ್ ತಿಂಗಳಿನಲ್ಲಿ ಸ್ಟಂಟ್ ಮಾಸ್ತರುಗಳ ಜೋಡಿ ಈ ಚಿತ್ರದಿಂದ ಹೊರನಡೇಯುತ್ತಿರುವುದಾಗಿ ಹೇಳಿದ್ದರು.

ಇದನ್ನೂ ಓದಿ: KGF 2: ಕೆಜಿಎಫ್-2 ಡೈಲಾಗ್​ಗಳಲ್ಲಿ ಉದ್ಯಮಿಗಳಿಗೆ ಬ್ಯುಸಿನೆಸ್ ಪಾಠ! ನೀವು ಸಿನಿಮಾ ನೋಡಿದಾಗ ಇದನ್ನ ಗಮನಿಸಿದ್ರಾ?

ತಮ್ಮ ಈ ಹಿನ್ನಡೆಗೆ ಕಾರಣಗಳನ್ನು ನೀಡಿ ಆ ಸ್ಟಂಟ್ ಮಾಸ್ತರುಗಳ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಹೇಳಿಕೊಂಡಿದ್ದರು, "ನಮಗೆ ಚಿತ್ರರಂಗದ ಕನಸು ಕಾಣಲು ನಿರ್ದೇಶನದ ಉತ್ಸಾಹವೇ ಮೊದಲ ಕಾರಣ. ಅಂತಿಮವಾಗಿ ಸಮಯವು ನಮ್ಮನ್ನು ಸ್ಟಂಟ್‌ಮೆನ್‌ಗಳನ್ನಾಗಿ ಮಾಡಿತು ಮತ್ತು ಇಂದು ಸ್ಟಂಟ್ ಕೊರಿಯೋಗ್ರಾಫರ್‌ಗಳನ್ನಾಗಿ ಮಾಡಿದೆ. ನಾವು ಅನೇಕ ಇತರ ನಿರ್ದೇಶಕರ ಕನಸುಗಳಿಗಾಗಿ ಕೆಲಸ ಮಾಡುತ್ತಿರುವುದರಿಂದ ನಾವು ಇದನ್ನು ಹೆಚ್ಚು ಪ್ರೀತಿಸುತ್ತಿದ್ದೆವು. ಇದರ ನಡುವೆ, ಶ್ರೀ. ರಾಘವ ಲಾರೆನ್ಸ್ ಮಾಸ್ಟರ್ ಅವರು ತಮ್ಮ ನಿರ್ಮಾಣದಲ್ಲಿ ಅವರನ್ನು ಒಳಗೊಂಡ ಚಿತ್ರವನ್ನು ನಿರ್ದೇಶಿಸಲು ನಮಗೆ ತುಂಬಾ ದಯೆ ತೋರಿದರು ಮತ್ತು ನಾವು ಸಂತೋಷದಿಂದ ಒಪ್ಪಿಕೊಂಡೆವು. ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನಾವು ಸದಾ ಋಣಿಗಳು.

ರಾಘವ ಲಾರೆನ್ಸ್ ಅವರಿಗೆ ಧನ್ಯವಾದ ತಿಳಿಸಿದ ಜೋಡಿಗಳು
ಆದರೆ ಈಗ, ಭಾರವಾದ ಹೃದಯದಿಂದ, ನಮ್ಮ ಹಿಂದಿನ ಸಾಹಸ ನೃತ್ಯ ಸಂಯೋಜನೆಯ ಬದ್ಧತೆಗಳು ಮತ್ತು ಆ ಚಲನಚಿತ್ರಗಳ ವೇಳಾಪಟ್ಟಿಗಳಿಂದಾಗಿ, ನಾವು ಈ ಅದ್ಭುತ ಅವಕಾಶವನ್ನು ಬಿಡುತ್ತಿದ್ದೇವೆ. ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಆತ್ಮೀಯ ಶ್ರೀ ರಾಘವ ಲಾರೆನ್ಸ್ ಮಾಸ್ಟರ್ ಅವರಿಗೆ ಧನ್ಯವಾದಗಳು ಮತ್ತು ಚಿತ್ರದ ಯಶಸ್ಸಿಗೆ ನಮ್ಮ ಶುಭಾಶಯಗಳು."

ದುರ್ಗಾ ಚಿತ್ರದ ಬಗ್ಗೆ ಸ್ಟಂಟ್ ಮಾಸ್ಟರ್ ಗಳು ಹೇಳಿದ್ದು ಹೀಗೆ
ಇನ್ನು ಈ ದುರ್ಗಾ ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರವು ರಾಘವ ಲಾರೆನ್ಸ್ ಅವರ ಇತರ ಯಶಸ್ವೀ ಚಿತ್ರಗಳಂತೆ ಹಾರರ್ ಮತ್ತು ಕಾಮಿಡಿಗಳಿಂದ ಕೂಡಿದೆ, ಲಾರೆನ್ಸ್ ಅವರು ಈಗಾಗಲೇ ಅಪಾರ ಯಶಸ್ಸಿನ ಕಾಂಚನಾ ಫ್ರಾಂಚೈಸಿಯನ್ನು ನಿರ್ಮಿಸಿದ ಖ್ಯಾತಿಯನ್ನು ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ:  Ante Sundaraniki: ‘ಅಂಟೇ ಸುಂದರಾನಿಕಿ’ ಚಿತ್ರದ ಟ್ರೈಲರ್ ಔಟ್; ಹಾಗಿದ್ರೆ ಸಿನೆಮಾ ರಿಲೀಸ್ ಯಾವಾಗ?

ರಾಘವ ಲಾರೆನ್ಸ್ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ಶ್ರೀ ರಾಘವೇಂದ್ರ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರವು ದೊಡ್ಡ ತಂತ್ರಜ್ಞರ ತಂಡವನ್ನು ಹೊಂದಿದೆ. ಅದರ ಮೇಲೆ ಇದೊಂದು ವಿಭಿನ್ನ ಪಾತ್ರಧಾರಿಯಲ್ಲಿ ಲಾರೆನ್ಸ್ ಅವರನ್ನು ಹೊಂದಿದ್ದು ಮತ್ತೆ ಅದೇ ರೀತಿಯ ಕಾಂಚನಾಗೆ ಸಲ್ಲಿಕೆಯಾಗಿದ್ದ ಸ್ಪಂದನೆಯನ್ನು ಪಡೆಯಲಿದೆ ನಿರೀಕ್ಷಿಸಲಾಗಿದೆ.
Published by:Ashwini Prabhu
First published: