Ayra: ಯಶ್​ - ರಾಧಿಕಾರ ಮುದ್ದಿನ ಮಗಳು ಐರಾಗಾಗಿ ಜೋಗುಳ ಹಾಡಿದ ರಾಕಿಂಗ್​ ಅಜ್ಜ..!

Ayra: ಮಗಳಿಗಾಗಿ ಭೀಮಸೇನ್ ಜೋಶಿಯ ಭಜನೆ ಹಾಡುತ್ತಿದ್ದ ರಾಧಿಕಾರ ಅಪ್ಪ, ಇಂದು ಮುದ್ದಿನ ಮೊಮ್ಮಗಳಿಗಾಗಿ ಜೋಗುಳ ಹಾಡುತ್ತಿದ್ದಾರೆ.

Anitha E | news18-kannada
Updated:September 6, 2019, 1:52 PM IST
Ayra: ಯಶ್​ - ರಾಧಿಕಾರ ಮುದ್ದಿನ ಮಗಳು ಐರಾಗಾಗಿ ಜೋಗುಳ ಹಾಡಿದ ರಾಕಿಂಗ್​ ಅಜ್ಜ..!
ಮುದ್ದಿನ ಮಗಳು ಐರಾ ಜತೆ ರಾಕಿಂಗ್​ ಸ್ಟಾರ್​
Anitha E | news18-kannada
Updated: September 6, 2019, 1:52 PM IST
ರಾಕಿಂಗ್​ ದಂಪತಿಯ ಮುದ್ದಿನ ಮಗಳು ಐರಾ ಅಮ್ಮನ ಗರ್ಭದಲ್ಲಿದ್ದಾಗಿನಿಂದಲೇ ಸುದ್ದಿಯಲ್ಲಿದ್ದ ಸ್ಟಾರ್​ ಕಿಡ್​. ಐರಾ ಹುಟ್ಟಿದಾಗಿನಿಂದ ಇಂದಿನವರೆಗೂ ಅವಳ ಕುರಿತ ಯಾವುದೇ ಸಣ್ಣ ವಿಷಯವಾದರೂ ಅದು ರಾಕಿಂಗ್​ ಸ್ಟಾರ್​ ಅಭಿಮಾನಿಗಳು ಸೇರಿದಂತೆ ನೆಟ್ಟಿಗರಲ್ಲಿ ಕುತೂಹಲ ಮೂಡಿಸುತ್ತದೆ.

ಅದು ಐರಾ ನಾಮಕರಣ ಇರಬಹುದು ಅಥವಾ ಕಿವಿ ಚುಚ್ಚುವ ಸಂಭ್ರಮವಿರಬಹುದು... ಐರಾಗೆ ಸಂಬಂಧಿಸಿದ ಪುಟ್ಟ ವಿಷಯವನ್ನೂ ತಾಯಿ ರಾಧಿಕಾ ಪಂಡಿತ್ ಖುಷಿಯಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
 


Loading...View this post on Instagram
 

Yellarigu Ganesha Habbada Shubhashayagalu.. nam mane putta Gowri kade inda 😍 @thenameisyash #radhikapandit #nimmaRP


A post shared by Radhika Pandit (@iamradhikapandit) on


ಈಗಲೂ ಸಹ ರಾಧಿಕಾ ತಮ್ಮ ಮಗಳಿಗೆ ತಾತ ಜೋಗುಳ ಹಾಡಿ ಮಲಗಿಸುತ್ತಿರುವ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಆ ವಿಡಿಯೋ ಇಲ್ಲಿದೆ ನೋಡಿ...

 
ಇವರು ರಾಧಿಕಾ ಪಂಡಿತ್ ಅವರ ತಂದೆ. ತಮ್ಮ ಮುದ್ದು ಮೊಮ್ಮಗಳನ್ನ ಮಲಗಿಸಲು ಜೋಗುಳ ಹಾಡ್ತಿದ್ದಾರೆ. ಈ ವಿಡಿಯೋ ಐರಾ ಒಂದು ತಿಂಗಳ ಮಗುವಿದ್ದಾಗ ಮಾಡಲಾಗಿದ್ದು, ಅದನ್ನು ರಾಧಿಕಾ ಈಗ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನ್ಯೂಯಾರ್ಕ್​ನ ವಿಶ್ವವಿದ್ಯಾಲಯದಲ್ಲಿ ಶಾರುಖ್​ ಮಗಳ ಎಂಟ್ರಿ: ಧೂಳೆಬ್ಬಿಸುತ್ತಿದೆ ಸುಹಾನಾ​ರ ಹಾಟ್ ಫೋಟೋ..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ, ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಹಳೆಯ ನೆನಪನ್ನ ಮೆಲುಕು ಹಾಕಿದ್ದಾರೆ. ತಾವು ಪುಟ್ಟ ಮಗುವಾಗಿದ್ದಾಗ ತಮ್ಮ ತಂದೆ ಭೀಮ​ಸೇನ ಜೋಷಿಯವರ ಭಜನೆಯನ್ನ ಹಾಡಿ ಮಲಗಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಯಶ್-ರಾಧಿಕಾ ಅಭಿಮಾನಿಗಳು ಈ ಮುದ್ದಾದ ವಿಡಿಯೋವನ್ನ ತಮ್ಮ ವಾಲ್‍ಗಳಲ್ಲಿ ಶೇರ್ ಮಾಡಿಕೊಳ್ತಿದ್ದಾರೆ.

  
View this post on Instagram
 

Wishing u all a fantastic week 😊 #radhikapandit #nimmaRP


A post shared by Radhika Pandit (@iamradhikapandit) on


ರಾಧಿಕಾ ಹಾಗೂ ಯಶ್​ ಈಗಾಗಲೇ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಗೊತ್ತೇ ಇದೆ. ಗರ್ಭಿಣಿಯಾಗಿರುವ ರಾಧಿಕಾ ಅವರಿಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Riya Sen: ಬಿಕಿನಿ ತೊಟ್ಟು ಬಿಸಿ ಏರಿಸಿದ ಹಾಟ್​ ಬೇಬಿ ರಿಯಾ ಸೇನ್​..!
First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...