Radhika Pandit: ಆ ದಿನಗಳ ಫೋಟೋ ಮೂಲಕ ರಾಕಿಂಗ್ ಸ್ಟಾರ್​ ಯಶ್​ಗೆ ವಿಶ್​ ಮಾಡಿದ ರಾಧಿಕಾ..!

Radhika Pandit: ಮೂರು ವರ್ಷಗಳ ಹಿಂದೆ ಡಿಸೆಂಬರ್​ 9ರಂದು ಯಶ್​ ಹಾಗೂ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯಕ್ಕೆ ಇಂದಿಗೆ 3ರ ಹರೆಯ. ಇದರ ಅಂಗವಾಗಿ ರಾಧಿಕಾ ತಮ್ಮ ಪ್ರೀತಿಯ ಪತಿರಾಯನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

Anitha E | news18-kannada
Updated:December 9, 2019, 8:31 AM IST
Radhika Pandit: ಆ ದಿನಗಳ ಫೋಟೋ ಮೂಲಕ ರಾಕಿಂಗ್ ಸ್ಟಾರ್​ ಯಶ್​ಗೆ ವಿಶ್​ ಮಾಡಿದ ರಾಧಿಕಾ..!
ಯಶ್​-ರಾಧಿಕಾ
  • Share this:
ಸ್ಯಾಂಡಲ್​ವುಡ್​ನ ರಾಕಿಂಗ್​ ದಂಪತಿ ಯಶ್​-ರಾಧಿಕಾಗೆ ವರ್ಷಾಂತ್ಯ ಒಂಥರಾ ಹಬ್ಬವಿದ್ದಂತೆ. ಒಂದು ಕಡೆ ಎರಡನೇ ಮಗುವಿನ ಆಗಮನ. ಮತ್ತೊಂದು ಕಡೆ ಮೊದಲ ಮಗಳ ಹುಟ್ಟುಹಬ್ಬ. ಈಗ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮ.

ಮೂರು ವರ್ಷಗಳ ಹಿಂದೆ ಡಿಸೆಂಬರ್​ 9ರಂದು ಯಶ್​ ಹಾಗೂ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯಕ್ಕೆ ಇಂದಿಗೆ 3ರ ಹರೆಯ. ಇದರ ಅಂಗವಾಗಿ ರಾಧಿಕಾ ತಮ್ಮ ಪ್ರೀತಿಯ ಪತಿರಾಯನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

 

ತಮ್ಮ ಹಳೇ ದಿನಗಳನ್ನು ನೆನಪಿಸುವ ಒಂದು ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ರಾಧಿಕಾ, ಇದು ಕೇವಲ ಮೂರು ವರ್ಷಗಳ ದಾಂಪತ್ಯವಲ್ಲ, ಸುಮಾರು ವರ್ಷಗಳಿಂದ ಕಟ್ಟಿ ಬೆಳೆಸಿದ ಸಂಬಂಧ. ಪ್ರೀತಿಯ ಸೋಲ್​ಮೇಟ್​ಗೆ ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಂಭಾವನೆ ವಿಷಯದಲ್ಲಿ ಬಾಲಿವುಡ್​ನ ಖಾನ್​ಗಳನ್ನೇ ಹಿಂದಿಕ್ಕಿದ ಸ್ಯಾಂಡಲ್​ವುಡ್​ ನಟಿ..!

ಕಿರುತೆರೆ ಮೂಲಕ ಏಕಕಾಲದಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಹಾಗೂ ಯಶ್​ ಇಬ್ಬರೂ ಬೆಳ್ಳಿತೆರೆ ಮೇಲೆ ಮಿಂಚಿದ ಹಿಟ್​ ಜೋಡಿ. ಈಗ ನಿಜ ಜೀವನದಲ್ಲೂ ರಾಕಿಂಗ್​ ಜೋಡಿಯಾಗಿ ಮಿಂಚುತ್ತಿದ್ದಾರೆ.

 Rare Photos Of Chiranjeevi: ಚಿತ್ರರಂಗಕ್ಕೆ ಬರುವ ಮೊದಲು ಮೆಗಾಸ್ಟಾರ್​ ಚಿರಂಜೀವಿ ಹೇಗಿದ್ರು ಗೊತ್ತಾ..?
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ