ನಟಿ ರಾಧಿಕಾ ಪಂಡಿತ್ (Radhika Pandit) ಅವರು ಯಾವಾಗಲೂ ಹಬ್ಬ, ಶುಭ ಸಂದರ್ಭಗಳಲ್ಲಿ ಮರೆಯದೆ ಅಭಿಮಾನಿಗಳಿಗೆ (Fans) ವಿಶ್ ಮಾಡುತ್ತಾರೆ. ಈಗ ತಮ್ಮ ಮಕ್ಕಳನ್ನೂ ಹಬ್ಬಕ್ಕೆ ರೆಡಿ ಮಾಡಿಕೊಂಡು ಖುಷಿ ಖುಷಿಯಾಗಿ ಹಬ್ಬ ಆಚರಿಸಿಕೊಂಡು ವಿಡಿಯೋ (Video) ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ (Fans) ಹಂಚಿಕೊಳ್ಳುತ್ತಾರೆ. ಈಗ ನಟಿ ಹೊಸದೊಂದು ನ್ಯೂ ಇಯರ್ (New Year) ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಮ್ಮ ಮಗಳು ಐರಾ ಯಶ್ (Ayra Yash) ಹಾಗೂ ಯಥರ್ವ್ ಯಶ್ (Yatharv Yash) ಅವರನ್ನು ಮಡಿಲಲ್ಲಿ ಕೂರಿಸಿಕೊಂಡು ವಿಡಿಯೋ ಮಾಡಿದ್ದಾರೆ.
ಹ್ಯಾಪಿ ನ್ಯೂ ಇಯರ್ ಎಂದ ಮಕ್ಕಳು
ಅಮ್ಮನ ಮಡಿಲಲ್ಲಿ ಕುಳಿತಿದ್ದ ಮಕ್ಕಳು ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಎಂದು ಅಮ್ಮನೊಂದಿಗೆ ಧ್ವನಿ ಸೇರಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ನಟಿ ಹೇಳಿದ್ದಾರೆ.
54 ಸಾವಿರಕ್ಕೂ ಹೆಚ್ಚು ಲೈಕ್ಸ್
ರಾಧಿಕಾ ಪಂಡಿತ್ ಶೇರ್ ಮಾಡಿದ ವೀಡಿಯೋಗೆ 54 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೆಟ್ಟಿಗರೆಲ್ಲ ಕಮೆಂಟ್ ಮಾಡಿ ನಟಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಅದೇ ರೀತಿ ಐರಾ ಹಾಗೂ ಯಥರ್ವ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವರ್ಷ ಆದ್ರೂ ಸ್ಕ್ರೀನ್ ಮೇಲೆ ಬನ್ನಿ
ನಟಿಯ ವಿಡಿಯೋ ನೋಡಿದ ನೆಟ್ಟಿಗರೆಲ್ಲರು ಈ ವರ್ಷ ಆದ್ರೂ ಆನ್ ಸ್ಕ್ರೀನ್ ಮೇಲೆ ಬನ್ನಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ನಟಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಕನ್ನಡ ಸಿನಿ ಪ್ರೇಮಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.
View this post on Instagram
ಇದನ್ನೂ ಓದಿ: Ayra Yash: ಕ್ರಿಸ್ಮಸ್ ಸ್ಪೆಷಲ್ ಕುಕ್ಕೀಸ್ ತಯಾರಿಸೋದ್ರಲ್ಲಿ ಐರಾ ಫುಲ್ ಬ್ಯುಸಿ
ರಾಧಿಕಾ ಪಂಡಿತ್ ಅವರು ದೀಪಾವಳಿ ಹಬ್ಬದ ಸಂಭ್ರಮ, ಸ್ವಾತಂತ್ರ್ಯೋತ್ಸವ ಆಚರಣೆ, ಕ್ರಿಸ್ಮಸ್ ಕುಕ್ಕೀಸ್ ಹೀಗೆ ಹಬ್ಬಕ್ಕೆ ಸಂಬಂಧಿಸಿದ ಪೋಸ್ಟ್ಗಳನ್ನು ಮಿಸ್ ಮಾಡುವುದಿಲ್ಲ. ಇದೀಗ ನಟಿ ಹೊಸ ವರ್ಷಕ್ಕೂ ಹೊಸ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.
ಯಾವ ಜಾಗವಿದು?
ನಟಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರಿದ್ದ ಸ್ಥಳದ ಬಗ್ಗೆ ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ. ಆದರೆ ರಾಧಿಕಾ ಅವರು ಲೊಕೇಷನ್ ಪಿನ್ ಮಾಡಿಲ್ಲ. ಒಂದು ಮ್ಯೂಸಿಕ್ ಮಾತ್ರ ಹಾಕಿ ಆಮೇಲೆ ನಾರ್ಮಲ್ ಆಗಿ ವಿಶ್ ಮಾಡಿದ್ದಾರೆ. ಬಹಳಷ್ಟು ಸಲ ಸೆಲೆಬ್ರಿಟಿಗಳು ತಾವಿರುವ ಸ್ಥಳದ ಲೊಕೇಷನ್ ಪಿನ್ ಮಾಡುವುದಿಲ್ಲ.
ಈ ವರ್ಷವಾದರೂ ನಟಿಸ್ತಾರಾ ರಾಧಿಕಾ ಪಂಡಿತ್?
ರಾಧಿಕಾ ಪಂಡಿತ್ ಯಶ್ ಅವರೊಂದಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಹೀರೋಯಿನ್ ಆಗಿ ಇನ್ನೂ ಕಂ ಬ್ಯಾಕ್ ಮಾಡಿಲ್ಲ. ಇನ್ನೂ ಯಥರ್ವ್ ಚಿಕ್ಕನಾಗಿರುವ ಕಾರಣ ನಟಿ ಇನ್ನೊಂದಷ್ಟು ಸಮಯ ಬಿಟ್ಟು ಮತ್ತೆ ಸಿನಿಮಾದತ್ತ ಮುಖ ಮಾಡಬಹುದು ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ