ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾರ ಆಗಾಗ ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮುದ್ದಾದ ಮಗಳು ಐರಾ ಹಾಗೂ ಜೂನಿಯರ್ ಯಶ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕೂಡಲೇ ವೈರಲ್ ಆಗುತ್ತವೆ.
ಈಗಾಗಲೇ ರಾಕಿಂಗ್ ಮಗಳು ಐರಾ ಮುದ್ದಾಗಿ ನಗುತ್ತಲೇ ಯಶ್ ಅಭಿಮಾನಿಗಳ ಹೃದಯ ಕದ್ದಿದ್ದಾಳೆ. ಈ ಹಿಂದೆಯೂ ಯಶ್ ಹಾಗೂ ಐರಾಳ ವಿಡಿಯೋ ವೈರಲ್ ಆಗಿತ್ತು. ಇನ್ನು ಮಗನಿಗೆ ಆರು ತಿಂಗಳು ತುಂಬಿದಾಗ ಮೊದಲನೇ ಬಾರಿಗೆ ಯಶ್ ಹಾಗೂ ರಾಧಿಕಾ ಮಗನ ಮೊದಲ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದರು.
ಇದನ್ನೂ ಓದಿ: ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ಗೆ ಜೊತೆಯಾದ ಕನ್ನಡತಿ..!
ಈ ವಿಡಿಯೋದಲ್ಲಿ ಐರಾ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಾ, ಮುದ್ದು ಮಾಡುತ್ತಿದ್ದಾಳೆ. ತಮ್ಮನಿಗೆ ಅಕ್ಕರೆಯಿಂದ ಮುತ್ತಿಡುತ್ತಾ ಕಣ್ಣು ಮುಚ್ಚಿಕೊಂಡು ಲಾಲಿ ಹಾಡುತ್ತಿರುವ ಈ ವಿಡಿಯೋ ಸಖತ್ ಕ್ಯೂಟ್ ಆಗಿದ್ದು, ವೈರಲ್ ಆಗುತ್ತಿದೆ.
Rashmika Mandanna: 18ನೇ ವರ್ಷಕ್ಕೆ ಕಾಲಿರಿಸಿದಾಗಿನ ದಿನಗಳ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ