Seema.RSeema.R
|
news18-kannada Updated:November 6, 2020, 9:17 PM IST
ರಾಕಿಂಗ್ ದಂಪತಿ
ರಾಕಿಂಗ್ ಸ್ಟಾರ್ ದಂಪತಿ ಮಗ ಯಥರ್ವ್ಗೆ ಒಂದು ವರ್ಷದ ಸಂಭ್ರಮ. ಮಗಳು ಆಯ್ರಾ ಹುಟ್ಟುಹಬ್ಬವನ್ನು ಫನ್ವರ್ಲ್ಡ್ನಲ್ಲಿ ಸಿನಿಮಾ ರಂಗದ ಸ್ನೇಹಿತರನ್ನೆಲ್ಲಾ ಕರೆದು ಸಂಭ್ರಮದಿಂದ ಆಚರಿಸಿದ್ದ ಈ ಜೋಡಿಗೆ ಮಗನ ಹುಟ್ಟು ಹಬ್ಬ ಆಚರಣೆಗೆ ಕೊರೋನಾ ಅಡ್ಡಿಯಾಗಿತ್ತು. ಹಾಗಂತ ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಲ್ಲ. ಗೋವಾದಲ್ಲಿ ಕ್ರೂಸರ್ನಲ್ಲಿ ಅದ್ದೂರಿಯಾಗಿ ರಾಕಿಂಗ್ ಆಗಿ ಮಗ ಯಥರ್ವನ ಹುಟ್ಟುಹಬ್ಬವನ್ನು ಯಶ್ ಮತ್ತು ರಾಧಿಕಾ ಆಚರಿಸಿದ್ದಾರೆ. ಸಮುದ್ರದ ಮಧ್ಯದಲ್ಲಿ ಕುಟುಂಬ ಸಮೇತರಾಗಿ ಜಾಲಿ ರೈಡ್ ನಡೆಸುತ್ತಾ ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಧಿಕಾಗೆ ಸಮುದ್ರ ತೀರ ಎಂದರೆ ಬಲು ಇಷ್ಟ. ಇದನ್ನು ಸಾಕಷ್ಟು ಬಾರಿ ನಟ ಯಶ್ ಕೂಡ ತಿಳಿಸಿದ್ದಾರೆ. ಅದರಲ್ಲಿಯೂ ಗೋವಾ ಎಂದರೆ ರಾಧಿಕಾಗೆ ಇನ್ನು ಖುಷಿ ಕಾರಣ ಅವರ ಅಮ್ಮ ಕೂಡ ಗೋವಾ ಮೂಲದವರು. ಈ ಹಿನ್ನಲೆ ಈ ಹುಟ್ಟು ಹಬ್ಬ ನಟಿ ರಾಧಿಕಾ ಅವರ ಯೋಜನೆಯಂತೆ ನಡೆದಿದೆ ಎನ್ನಬಹುದು. ಇದೇ ಕಾರಣದಿಂದ ತಮ್ಮ ನಿಶ್ಚಿತಾರ್ಥವನ್ನು ಈ ಜೋಡಿ ಗೋವಾದಲ್ಲಿಯೇ ಮಾಡಿಕೊಂಡಿದ್ದರು.
ಅದ್ಭುತ ಸಂಗೀತ ಸಂಯೋಜನೆ, ಛಾಯಗ್ರಾಹಣ ಹೊಂದಿರುವ ಈ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಮಾರಂಭದಲ್ಲಿ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದಾರೆ. ಅಕ್ಟೋಬರ್ 30ರಂದು ಯಥರ್ವಗೆ ಒಂದು ವರ್ಷ ತುಂಬಿತ್ತು.
Published by:
Seema R
First published:
November 6, 2020, 9:02 PM IST