ಸ್ಯಾಂಡಲ್ವುಡ್ನಲ್ಲಿ (Sandalwood) ರಾಕಿಂಗ್ ದಂಪತಿಯ (Couple) ಹವಾ ಬೇರೆಯೇ ಇದೆ. ನಟ ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit) ಅವರು ಅಭಿಮಾನಿಗಳ ಜೊತೆ ಯಾವಾಗಲೂ ನಂಟಿನಲ್ಲಿರುತ್ತಾರೆ. ಈ ಜೋಡಿಗೆ (Couple) ಅಪಾರ ಅಭಿಮಾನಿಗಳಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ಯಶ್ ಅವರೊಂದಿಗಿನ ವಿಶೇಷವಾದ ವಿಡಿಯೋ (Video) ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಯಶ್ ಹಾಗೂ ರಾಧಿಕಾ ಅವರ ಕ್ಯೂಟ್ ಲುಕ್ ಅನ್ನು ಕಾಣಬಹುದು. ಇದನ್ನು ನೋಡಿ ಅಭಿಮಾನಿಗಳು ಕೂಡಾ ಖುಷಿಪಟ್ಟಿದ್ದಾರೆ.
ವಿಡಿಯೋ ಶೇರ್ ಮಾಡಿದ ರಾಧಿಕಾ ಪಂಡಿತ್
ವೆನ್ ರಾಕಿ ಮೆಟ್ ರಾಧಿಕಾ ಎಂದು ಕ್ಯಾಪ್ಶನ್ ಕೊಟ್ಟಿರುವ ರಾಧಿಕಾ ಪಂಡಿತ್ ಕ್ಯೂಟ್ ವಿಡಿಯೋ ಶೇರ್ ಮಾಡಿದ್ದಾರೆ. ನಟಿ ಈ ವಿಡಿಯೋಗೆ ಥ್ರಾ ಬ್ಯಾಕ್ ಎಂದು ಹ್ಯಾಶ್ಟ್ಯಾಗ್ ಕೂಡಾ ಹಾಕಿದ್ದಾರೆ. ಈ ಮೂಲಕ ಇದು ಹೊಸ ವಿಡಿಯೋ ಅಲ್ಲ, ಬದಲಾಗಿ ಹಳೆಯ ವಿಡಿಯೋ ಎನ್ನುವುದನ್ನೂ ರಿವೀಲ್ ಮಾಡಿದ್ದಾರೆ.
926ಕ್ಕೂ ಹೆಚ್ಚು ಕಮೆಂಟ್ಸ್
ಈ ವಿಡಿಯೋಗೆ 135 ಸಾವಿರ ಲೈಕ್ಸ್ ಬಂದಿದೆ. 926ಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ರಾಕಿಭಾಯ್ ಅವರ ಈ ಎಕ್ಸ್ಕ್ಲೂಸಿವ್ ವಿಡಿಯೋ ಕ್ಲಿಪ್ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.
View this post on Instagram
ರಾಕಿ ಭಾಯ್ ಅವರನ್ನು ಕಾಣುತ್ತಲೇ ರಾಧಿಕಾ ಪಂಡಿತ್ ಎಕ್ಸೈಟ್ ಆಗಿದ್ದಾರೆ. ಓ ಮಯ್ ಗಾಡ್, ನಾನು 70ರ ದಶಕದಲ್ಲಿದ್ದೇನಾ ಎಂದು ನಟಿ ಕೇಳುವುದನ್ನು ಕಾಣಬಹುದು. ಆಗ ರಾಕಿ ಭಾಯ್ ಕೂಡಾ ಬರುತ್ತಾರೆ. ಮಗಳನ್ನು ಕಂಡು ಮಗಳೇ ಮಗಳೇ ಎಂದು ಕ್ಯೂಟ್ ಆಗಿ ಕರೆಯುವ ವಿಡಿಯೋ ಸುಂದರವಾಗಿದೆ.
ಮಗಳನ್ನು ಎತ್ತಿಕೊಂಡಿದ್ದ ರಾಧಿಕಾ ಪಂಡಿತ್
ಈ ವಿಡಿಯೋದಲ್ಲಿ ರಾಧಿಕಾ ಪಂಡಿತ್ ಜೀನ್ಸ್, ಟಾಒ್ ಶ್ರಗ್ ಧರಿಸಿದ್ದರೆ ಐರಾ ಯಶ್ ಸುಂದರವಾದ ಪಿಂಕ್ ಫ್ರಾಕ್ ಧರಿಸಿದ್ದಳು. ಯಶ್ ಅವರು ರಾಕಿ ಭಾಯ್ ಅವರತಾರದಲ್ಲಿ ಕಾಣಿಸಿದ್ದಾರೆ. ಇದನ್ನು ನೋಡಿದ ರಾಧಿಕಾ ಅವರು ತುಂಬಾ ಚೆನ್ನಾಗಿ ಕಾಣುತ್ತಿದೆ ಎಂದು ಮೆಚ್ಚಿ ಹೊಗಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: R Chandru Movie: ಕಬ್ಜ ಸಿನಿಮಾಗೆ 25 ದಿನದ ಸಂಭ್ರಮ! ಈ ಸಂದರ್ಭ ನಿರ್ದೇಶಕರಿಂದ ಹೊಸ ಅಪ್ಡೇಟ್
ಏನಂದಿದ್ದಾರೆ ಅಭಿಮಾನಿಗಳು?
ವಿಂಟೇಜ್ ರಾಕಿ ಭಾಯ್ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು ಇಂಥಾ ಲವ್ಲೀ ಜೋಡಿಯನ್ನು ನಾನು ನನ್ನ ಲೈಫ್ನಲ್ಲಿಯೇ ನೋಡಿಲ್ಲ ಎಂದಿದ್ದಾರೆ ಇನ್ನೊಬ್ಬರು.
ಇನ್ನೊಬ್ಬರು ಕನ್ನಡ ಮಾತಾಡಿ ಸರ್ ಎಂದು ಕಮೆಂಟ್ ಮಾಡಿದ್ದಾರೆ. ಅಪ್ಡೇಟ್ ಕೊಡಿ ಪ್ಲೀಸ್, ಕೆಜಿಎಫ್ 3 ಶುರು ಆಯ್ತಾ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಮಗು ಮುದ್ದಾಗಿದೆ. ರಾಧಿಕಾ ನಿಮ್ಮ ನಗು ಕ್ಯೂಟ್ ಆಗಿದೆ. ರಾಕಿಂಗ್ ಫ್ಯಾಮಿಲಿ ಅಂದ್ರೆ ನಂಗೆ ತುಂಬಾ ಇಷ್ಟ ಎಂದು ಕಮೆಂಟ್ ಮಾಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಅವರು ರೆಡ್ ಹಾಟ್ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ. ರಾಧಿಕಾ ನಿಮ್ಮ ವಾಯ್ಸ್ ಎಷ್ಟು ಕ್ಯೂಟ್ ಆಗಿದೆ, ನಾನು ಈ ವಿಡಿಯೋವನ್ನು ಪದೇ ಪದೇ ನೋಡಿದೆ ಎಂದಿದ್ದಾರೆ.
ಯಶ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಕೆಜಿಎಫ್ 2 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ನಟ ಈಗ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ