‘ಇದು ಯಾವುದೋ ತಲೆಕೂದಲಿನ ಜಾಹೀರಾತಲ್ಲ, ಕ್ಯಾಮರಾಮ್ಯಾನ್ ಫ್ರೀ ಆಗಿ ವಿಡಿಯೋ ಮಾಡುತ್ತೇನೆ ಅಂತ ಹೇಳಿದರು. ಅದಕ್ಕೆ ಪೋಸ್ ಕೊಟ್ಟಿದ್ದೇನೆ ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪತಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗೆ ಚಂದನವನದ ರಾಕಿಂಗ್ ದಂಪತಿ ಯಶ್(Yash) ಮತ್ತು ರಾಧಿಕಾ ಪಂಡಿತ್(Radhika Pandit) 5ನೇ ವರ್ಷದ ಮದುವೆ ವಾರ್ಷಿಕೋತ್ಸವ(Wedding Anniversary) ಸಂಭ್ರಮ ಆಚರಿಸಿದ್ದಾರೆ.. ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ರಾಧಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್ ಸಾಲಗಳನ್ನು ಬರೆದು ಪತಿಗೆ ವಿಶ್ ಮಾಡಿದ್ದರು. ಈ ಜೋಡಿ ಸಿನಿಮಾದಲ್ಲಿಯೂ ಸೂಪರ್ ಹಿಟ್ ಆಗಿದ್ದು, ನಿಜ ಜೀವನದಲ್ಲಿಯೂ ಹಿಟ್. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಶಕಗಳ ಕಾಲ ಪ್ರೀತಿ(Love)ಸಿ ಮದುವೆಯಾದ ಜೋಡಿ. ಈ ಜೋಡಿ ತೆರೆ ಮೇಲೆ ನಟಿಸಿ ಸೂಪರ್ ಹಿಟ್ ಆಗಿತ್ತು. ಡ್ರಾಮ(Drama), ಮಿಸ್ಟರ್ & ಮಿಸ್ಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಈ ಜೋಡಿ ಗೋವಾದಲ್ಲಿ ಮದುವೆಯಾಗಿತ್ತು. ಬಳಿಕ ಅಭಿಮಾನಿ(Fans)ಗಳಿಗೋಸ್ಕರ ಬೆಂಗಳೂರು ಅರಮನೆ ಮೈದಾನದಲ್ಲಿ ರಿಸೆಪ್ಷನ್(Reception) ಮಾಡಿಕೊಂಡಿದ್ದರು. ಈ ಜೋಡಿಯನ್ನು ಕಂಡರೇ ಎಲ್ಲರಿಗೂ ಅಚ್ಚುಮೆಚ್ಚು. ಆದಷ್ಟು ಬೇಗ ಇಬ್ಬರೂ ಸಿನಿಮಾ ಮಾಡಿ ಅಂತ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲರ ನಡುವೆ ಇವರ ಮತ್ತೊಂದು ವಿಚಾರ ಸಖತ್ ವೈರಲ್ ಆಗುತ್ತಿದೆ. ಹೆಂಡತಿ(Wife)ಗಾಗಿ ರಾಕಿ ಬಾಯ್ ಏನೆನೆಲ್ಲಾ ಮಾಡಿದ್ದಾರೆ ಗೊತ್ತಾ? ನೀವೆ ನೋಡಿ ಶಾಕ್ ಆಗುತ್ತೆ.
ಹೆಂಡತಿಗಾಗಿ ಕ್ಯಾಮರಾಮ್ಯಾನ್ ಆದ ರಾಕಿ ಭಾಯ್!
ಹೌದು, ಮದುವೆ ಬಳಿಕ ಚಿತ್ರರಂಗದಿಂದ ರಾಧಿಕಾ ಪಂಡಿತ್ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾ ಮೂಲಕ ರಾಧಿಕಾ ಪಂಡಿತ್ ಸಂಪರ್ಕದಲ್ಲಿದ್ದಾರೆ. ಇದೀಗ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ, ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ‘ಇದು ಯಾವುದೋ ತಲೆಕೂದಲಿನ ಜಾಹೀರಾತಲ್ಲ, ಕ್ಯಾಮರಾಮ್ಯಾನ್ ಫ್ರೀ ಆಗಿ ವಿಡಿಯೋ ಮಾಡುತ್ತೇನೆ ಅಂತ ಹೇಳಿದರು. ಅದಕ್ಕೆ ಪೋಸ್ ಕೊಟ್ಟಿದ್ದೇನೆ ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪತಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋ ಬಗ್ಗೆ ಈಗ ಸಾಕಷ್ಟ ಚರ್ಚೆಯಾಗುತ್ತುದೆ. ಸೂಪರ್ ಸ್ಟಾರ್ ರಾಕಿ ಭಾಯ್ ಪತ್ನಿ ಮಾತಿಗೆ ಬೆಲೆ ಕೊಟ್ಟು ವಿಡಿಯೋ ಮಾಡಿದ್ದಾರೆ. ನೀವು ಎಂದಿಗಾದರೂ ನಿಮ್ಮ ಪತ್ನಿ ಪೋಟೋ ತೆಗೆದಿದ್ದೀರಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅದೆಷ್ಟೇ ಸ್ಟಾರ್ ಆಗಿದ್ರು ಹೆಂಡ್ತಿ ಮುಂದೆ ಹೂಂ ಅನ್ನಲೇ ಬೇಕು ಅಂತ ಇನ್ನೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು ವರ್ಗ ಇದ್ದರೆ ರಾಧಿಕಾ ಪಂಡಿತ್-ಯಶ್ ಜೋಡಿಯ ಹಾಗೇ ಇರಬೇಕು. ಎಷ್ಟು ಅನೋನ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ 2016ರ ಡಿಸೆಂಬರ್ 9 ರಂದು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಐರಾ’ ಎಂದು ಹೆಸರಿಟ್ಟೊದ್ದಾರೆ. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಆ ಮಗುವಿಗೆ ‘ಯಥರ್ವ್’ ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ. ಸೋಷಿಯ್ ಮೀಡಿಯಾದಲ್ಲಿ ಯಶ್ ಮಕ್ಕಳು ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ.
Published by:Vasudeva M
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ