ರಾಕಿಂಗ್ ಸ್ಟಾರ್ ಯಶ್ರ ಮುದ್ದಿನ ಮಡದಿ ರಾಧಿಕಾ ಪಂಡಿತ್ ಇತ್ತೀಚೆಗಷ್ಟೆ ತಮಗೆ ಪರ್ಸನಲ್ ಫೋಟೋಗ್ರಾಫರ್ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅದರಲ್ಲೂ ಅವರಿಗೆ ಪರ್ಫೆಕ್ಟ್ ಸೆಲ್ಫಿ ತೆಗೆಯೋಕೆ ಕಷ್ಟವಾಗುವ ಕಾರಣದಿಂದ ತನಗೆ ಪರ್ಸನಲ್ ಛಾಯಾಗ್ರಾಹ ಬೇಕು. ಅದು ಸದಾ ಜೊತೆಯಲ್ಲಿರುವವರು ಆದರೆ ಒಳ್ಳೆಯದು ಅಂತ ಗಂಡ ಯಶ್ ಅವರತ್ತ ಪರೋಕ್ಷವಾಗಿ ಬೆಟ್ಟು ಮಾಡಿದ್ದರು. ಇನ್ನು ರಾಧಿಕಾ ಕಷ್ಟಪಟ್ಟು ತೆಗೆದಿದ್ದ ಸೆಲ್ಫಿ ತೆಗೆದುಕೊಳ್ಳಲು ಪಡುತ್ತಿದ್ದ ಪಾಡನ್ನು ಯಶ್ ಹಾಗೂ ಆಯ್ರಾ ವಿಡಿಯೋ ಮಾಡಿದ್ದರು. ಅದನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಾದ ಕೆಲವು ದಿನಗಳ ನಂತರ ರಾಧಿಕಾ ತಮ್ಮ ಪರ್ಫೆಕ್ಟ್ ಸೆಲ್ಫಿ ಫೋಟೋವನ್ನೂ ಹಂಚಿಕೊಂಡಿದ್ದರು. ಅದಕ್ಕೆ ಯಶ್ ಮಾಡಿದ್ದ ಕಮೆಂಟ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ತಾನು ಬಲವಂತವಾಗಿ ಫೋಟೋಗ್ರಾಫರ್ ಆಗುವಂತಾಗಿದೆ ಎಂದು ರಾಧಿಕಾರ ಕಾಲೆಳೆದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ಆಗಾಗ ತಮ್ಮ ಮಕ್ಕಳು ಹಾಗೂ ಗಂಡ ಕುರಿತಾಗಿ ಸಾಕಷ್ಟು ವಿಡಿಯೋ ಹಾಗೂ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ತಮ್ಮ ಮಗ ಯಥರ್ವ್ ಹಾಗೂ ಮಗಳು ಆಯ್ರಾಳ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
View this post on Instagram
When the student becomes the teacher, my job is done 😍 #radhikapandit #nimmaRP
ಇದನ್ನೂ ಓದಿ: Poonam Pandey: ಗೋವಾದಲ್ಲಿ ಹನಿಮೂನ್ ವೇಳೆ ಹಲ್ಲೆ ಆರೋಪ; ಪೂನಂ ಪಾಂಡೆ ಗಂಡನ ಬಂಧನ
ಇನ್ನು ಯಶ್ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ, ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಿದೆ. ಯಶ್ ಸದ್ಯ ಅದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪ್ರಕಾಶ್ ರೈ ಅವರನ್ನು ಚಿತ್ರತಂಡಕ್ಕೆ ಸೇರಿಕೊಂಡಿದ್ದು, ಅದಕ್ಕೂ ಈಗ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಈ ಸಿನಿಮಾದ ವಿಲನ್ ಅಧೀರನ ಪಾತ್ರಧಾರಿ ಸಂಜಯ್ ದತ್ ಸದ್ಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ